ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಪೈಪೋಟಿ ಎದುರಿಸಲು ಅಭಿವೃದ್ಧಿ ವೇಗಕ್ಕೆ ಒತ್ತು: ಮೋದಿ

Last Updated 8 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನೆರೆಯ ಚೀನಾದೊಂದಿಗೆ ಪೈಪೋಟಿ ಎದುರಿ­ಸಲು ಅಭಿವೃದ್ಧಿಯ ಕೌಶಲ, ಪ್ರಮಾಣ ಮತ್ತು ವೇಗಕ್ಕೆ ಒತ್ತು ನೀಡಬೇಕಾಗು­ತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉದ್ಯೋಗ ಸೃಷ್ಟಿಸುವುದಕ್ಕೆ ದೇಶ­ದಾದ್ಯಂತ 100 ಮಾದರಿ ನಗರಗಳನ್ನು ನಿರ್ಮಿಸುವ ಯೋಜನೆ ಬಿಚ್ಚಿಟ್ಟ ಅವರು, ನಗರೀಕರಣವನ್ನು ಸಮಸ್ಯೆ ಎನ್ನುವುದಕ್ಕಿಂತ ಅವಕಾಶ ಎಂದು ಪರಿಗಣಿಸಬೇಕು ಎಂದಿದ್ದಾರೆ.

‘ಗೆಟಿಂಗ್‌್ ಇಂಡಿಯಾ ಬ್ಯಾಕ್‌್ ಆನ್‌್ ಟ್ರ್ಯಾಕ್‌’ (ಸುಧಾರಣೆ ಕಾರ್ಯಸೂಚಿ) ಎನ್ನುವ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು. ದೇಶದ ಸಮಗ್ರ ಪ್ರಗತಿಗಾಗಿ ಕ್ರಾಂತಿಕಾರಕ ಕಾರ್ಯಸೂಚಿ ಮಂಡಿಸುವಾಗ ಅವರು ತ್ರಿವರ್ಣ ಧ್ವಜವನ್ನು ಉದಾಹರಣೆಯಾಗಿ ತೆಗೆದುಕೊಂಡರು.

ಹಸಿರು ಬಣ್ಣವನ್ನು ಪ್ರಸ್ತಾಪಿಸುತ್ತಾ, ‘ ಕೃಷಿ ಉತ್ಪನ್ನಗಳ ಹೆಚ್ಚಳ, ಮೌಲ್ಯ ವರ್ಧನೆ, ಕೃಷಿ ತಂತ್ರಜ್ಞಾನಕ್ಕೆ ಒತ್ತು ನೀಡಲು ಎರಡನೇ ಹಸಿರು ಕ್ರಾಂತಿಯ ಅಗತ್ಯ ದೇಶಕ್ಕೆ ಇದೆ ’ ಎಂದರು.

ಕ್ಷೀರ ಕ್ರಾಂತಿಯು ಹಾಲು ಉತ್ಪಾದನೆ ಹಾಗೂ ಪಶುಗಳ ಆರೋಗ್ಯವನ್ನು ಕಾಪಾಡುವ ಪೂರಕ ವ್ಯವಸ್ಥೆ ಅಭಿವೃದ್ಧಿಪಡಿಸುವತ್ತ ಗಮನ ಕೊಡಬೇಕು.  ಕೇಸರಿ ಬಣ್ಣ ಶಕ್ತಿಯ ಸಂಕೇತ. ಮರುಬಳಕೆ ಇಂಧನ ಮೂಲಗಳಿಗೆ ಒತ್ತು ನೀಡಲು ಸೌರಶಕ್ತಿ ಕ್ರಾಂತಿಯ ಅಗತ್ಯವಿದೆ ಎಂದು ಮೋದಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT