ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ – ಭಾರತ ಗಡಿ ಮಾತುಕತೆ

ದೋಭಾಲ್‌ ವಿಶೇಷ ಪ್ರತಿನಿಧಿ
Last Updated 24 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಚೀನಾ ದೇಶದೊಂದಿಗಿನ ಗಡಿ ಮಾತುಕತೆಗೆ ಎನ್‌ಡಿಎ ಸರ್ಕಾರವು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋಭಾಲ್‌ ಅವರನ್ನು ವಿಶೇಷ ಪ್ರತಿನಿಧಿಯನ್ನಾಗಿ ನೇಮಿಸಿದೆ.

ಈ ಹೊಣೆಗಾರಿಕೆಯು ಧೋಬಾಲ್‌  ಅವರ ಕಾರ್ಯವ್ಯಾಪ್ತಿಯಲ್ಲೇ ಬರುತ್ತದೆ ಎಂದು ಪ್ರಧಾನಿ ಕಚೇರಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಾಮಾನ್ಯವಾಗಿ ಚೀನಾ ಜತೆಗಿನ ಗಡಿ ಮಾತುಕತೆಗೆ ರಾಷ್ಟ್ರೀಯ ಭದ್ರತಾ ಸಲಹೆ­ಗಾರರನ್ನು ವಿಶೇಷ ಪ್ರತಿನಿಧಿ­ಯಾಗಿ ನೇಮಕ ಮಾಡಲಾಗುತ್ತದೆ. 

ದೋಭಾಲ್‌ ಅವರು ಮೇ ತಿಂಗಳಿನಲ್ಲಿಯೇ ಭದ್ರತಾ ಸಲಹೆಗಾರರಾಗಿ ನೇಮಕಗೊಂಡಿದ್ದರೂ ಈವರೆಗೆ ಅವರನ್ನು ವಿಶೇಷ ಪ್ರತಿನಿಧಿ­ಯನ್ನಾಗಿ ನೇಮಕ ಮಾಡಿರಲಿಲ್ಲ. ಚೀನಾ,  ಉಪಸಚಿವರ ಮಟ್ಟದ ಅಧಿಕಾರಿಯನ್ನು ಈ ಮಾತುಕತೆಗೆ ವಿಶೇಷ ಅಧಿಕಾರಿಯನ್ನಾಗಿ ನೇಮಿಸಿದೆ. ಈವರೆಗೆ ೧೭ ಬಾರಿ ಗಡಿ ಮಾತುಕತೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT