ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಮುಂದೂಡಲು ‘ವಿಭಜನೆ, ವಿಸರ್ಜನೆ’ ಅಸ್ತ್ರ

Last Updated 18 ಏಪ್ರಿಲ್ 2015, 20:10 IST
ಅಕ್ಷರ ಗಾತ್ರ

ಬೆಂಗಳೂರು: ನಗರ ವ್ಯಾಪ್ತಿಯ ಶಾಸಕರ ಒತ್ತಡದಿಂದಾಗಿ ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವರು ಶತಾಯಗತಾಯ ಬಿಬಿ ಎಂಪಿ ಚುನಾವಣೆ ಮುಂದೂಡಲು ‘ವಿಭಜನೆ’, ‘ವಿಸರ್ಜನೆ’... ಎಂಬ ಅಸ್ತ್ರಗಳನ್ನು ಬಿಟ್ಟಿದ್ದಾರೆ.

ಕಾಂಗ್ರೆಸ್‌ ಮಾತ್ರವಲ್ಲದೆ,  ಬಿಜೆಪಿ ಮತ್ತು ಜೆಡಿಎಸ್‌ನ ಹಲವು ಶಾಸಕರ ಪರೋಕ್ಷ ಒತ್ತಡ ಕೂಡ ಮುಖ್ಯಮಂತ್ರಿ ಮೇಲೆ ಇದೆ ಎನ್ನುತ್ತವೆ  ಮೂಲಗಳು.

ಪಾಲಿಕೆ ಸದಸ್ಯರ ಅನುಪಸ್ಥಿತಿಯಲ್ಲಿ ತಾವು ಕೆಲವು ದಿನ ಅಧಿಕಾರ ನಡೆಸಬೇಕು ಎನ್ನುವ ಆಸೆ ಬಹುತೇಕ ಶಾಸಕರದು. ಹೀಗಾಗಿ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿ ಒಂದರ ನಂತರ ಒಂದು ನಿರ್ಧಾರ ತೆಗೆದುಕೊಳ್ಳಲು ಕಾರಣರಾಗುತ್ತಿದ್ದಾರೆ ಎನ್ನಲಾಗಿದೆ.

ನಿಜಕ್ಕೂ ಬಿಬಿಎಂಪಿಯನ್ನು ಮೂರು ಪಾಲಿಕೆಗಳಾಗಿ ವಿಭಜಿಸುವ ಉದ್ದೇಶ ಇದ್ದಿದ್ದರೆ ಬಜೆಟ್‌ ಅಧಿವೇಶನದಲ್ಲೇ ಅದಕ್ಕೆ ಸಂಬಂಧಿಸಿದ ಮಸೂದೆಗೆ ಒಪ್ಪಿಗೆ ಪಡೆಯಬಹುದಿತ್ತು. ಆದರೆ, ಅಂತಹ ಯಾವ ಪ್ರಯತ್ನವನ್ನೂ ಮಾಡದ ರಾಜ್ಯ ಸರ್ಕಾರ ಇನ್ನೇನು ಎರಡು ವಾರದಲ್ಲಿ ಪಾಲಿಕೆಯ ಅವಧಿ ಮುಗಿಯುತ್ತದೆ ಎನ್ನುವಾಗ ಅದರ ವಿಭಜನೆಗೆ ಸುಗ್ರೀ ವಾಜ್ಞೆ ಹೊರಡಿಸಲು ಮುಂದಾಯಿತು. ಇದಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡದ ಕಾರಣ ಆ ಅವಕಾಶವೂ ಕೈತಪ್ಪಿತ್ತು.

ಇಷ್ಟಾದ ಮೇಲೂ ತನ್ನ ಪ್ರಯತ್ನ ವನ್ನು ಮುಂದುವರಿಸಿದ ಸರ್ಕಾರ ಕಾನೂನು ತಿದ್ದುಪಡಿ ಸಲುವಾಗಿ ವಿಶೇಷ ಅಧಿವೇಶನ ಕರೆಯಿತು. ಸೋಮವಾರ ಅದಕ್ಕೆ ಸಮಯ ನಿಗದಿಯಾಗಿದೆ.

ಈ ನಡುವೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸುವುದು ಅನುಮಾನ ಎಂದು ಹೈಕೋರ್ಟ್‌ನಲ್ಲಿ ವ್ಯಕ್ತಿಯೊಬ್ಬರು ರಿಟ್‌ ಅರ್ಜಿ ಸಲ್ಲಿಸಿದರು.  ಅದರ ವಿಚಾರಣೆ ಸಂದರ್ಭದಲ್ಲಿ ‘ಬಿಬಿಎಂಪಿಯನ್ನು ಸರಿ ಮಾಡುವ ಉದ್ದೇಶದಿಂದ ಅದನ್ನು ವಿಭಜಿಸ ಬೇಕಾಗಿದೆ’ ಎಂದು ರಾಜ್ಯ ಸರ್ಕಾರ ಹೇಳಿತ್ತು.

ಈ ಯಾವ ಸಬೂಬು ಕೇಳದ ಹೈಕೋರ್ಟ್‌ನ ಏಕಸದಸ್ಯ ಪೀಠ ಮೇ 30ರೊಳಗೆ ಚುನಾವಣೆ ನಡೆಸಬೇಕು ಎನ್ನುವ ಕಟ್ಟಾಜ್ಞೆ ಹೊರಡಿಸಿತು. ಇವತ್ತಿಗೂ ಅದಕ್ಕೆ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿಲ್ಲ.

ಈ ನಡುವೆ ತರಾತುರಿಯಲ್ಲಿ ವಾರ್ಡ್‌ವಾರು ಮೀಸಲಾತಿ ಪಟ್ಟಿ ಸಿದ್ಧಪಡಿಸಿ, ಅದನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಯಿತು. ಆ ಪಟ್ಟಿಯಲ್ಲೂ ಅನೇಕ ದೋಷಗಳು ಇವೆ ಎಂದು ದೂರಿ ಮತ್ತೊಂದು ಅರ್ಜಿ ಹೈಕೋರ್ಟ್‌ ಮೆಟ್ಟಿಲು ಏರಿದೆ. ಅದರ ವಿಚಾರಣೆಯೂ ಸೋಮವಾರ ನಡೆಯಲಿದೆ.

ಈ ಎಲ್ಲ ಗೊಂದಲಗಳ ನಡುವೆ ನಗರಾಭಿವೃದ್ಧಿ ಇಲಾಖೆ ಶನಿವಾರ ಪಾಲಿಕೆಯ ಚುನಾಯಿತ ಮಂಡಳಿಯನ್ನು ವಿಸರ್ಜಿಸಿದೆ. ಆ ಮೂಲಕ ಕನಿಷ್ಠ ಆರು ತಿಂಗಳು ಚುನಾವಣೆಯಿಂದ ತಪ್ಪಿಸಿ ಕೊಳ್ಳಬಹುದು ಎನ್ನುವ ಲೆಕ್ಕಾಚಾರ ದಲ್ಲಿ ರಾಜ್ಯ ಸರ್ಕಾರ ಇದೆ. ಆದರೆ, ಸೋಮ ವಾರದ ವಿಚಾರಣೆ ಸಂದರ್ಭದಲ್ಲಿ ಸರ್ಕಾರದ ಈ ನಡೆ ಬಗ್ಗೆ ಹೈಕೋರ್ಟ್‌ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿ ಸುತ್ತದೆ ಎಂಬುದರ ಮೇಲೆ ಎಲ್ಲವೂ ನಿಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT