ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಲ್ಲಾಪಿಲ್ಲಿ

Last Updated 16 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ನೇಲ್ ಎನಾಮಲ್ ಕಾಂಬೋ
ಸ್ಟ್ರೀಟ್ ವೇರ್ ಕಲರ್ ರಿಚ್‌ ಸಂಸ್ಥೆಯು ಐದು ಹೊಸ ಕಾಂಬೊ ಪ್ಯಾಕ್‌ಗಳನ್ನು ಬಿಡುಗಡೆ ಮಾಡಿದೆ. ಯಾವುದೇ ಸಂದರ್ಭಕ್ಕೂ ಹೊಂದುವಂತಹ ನೇಲ್ ಎನಾಮಲ್‌ ಕಾಂಬೊ ಇದಾಗಿದೆ. ನಾಲ್ಕು ವಿಭಿನ್ನ ನೇಲ್ ಎನಾಮಲ್ ಛಾಯೆಗಳು ಒಂದರಲ್ಲೇ ಲಭಿಸುತ್ತವೆ. ಇವುಗಳಲ್ಲಿ ಬ್ರೈಡ್ಸ್‌ಮೇಡ್ಸ್ ಕಲೆಕ್ಷನ್, ಕಲರ್ ಪ್ಲೇ, ಪಾರ್ಟಿ ಆಲ್ ನೈಟ್, ನಾಟ್ ಸೋ ನಿಯಾನ್, ಪ್ರೊಫೆಷನಲ್ ಹೈಪ್ ಪ್ರಮುಖವಾದವು. ಕಾಂಬೊ ಪ್ಯಾಕ್ ಬೆಲೆ ₨210.

ಸೋಲಾರ್‌ ಉತ್ಪನ್ನ
ಕೆಮೆಟ್ರಾಲ್ಸ್‌ ಸೋಲಾರ್‌ ಸಂಸ್ಥೆ ಉತ್ತಮ ಗುಣಮಟ್ಟದ ಸೋಲಾರ್ ಎಲ್‌ಇಡಿ ಲ್ಯಾಂಪ್‌ಗಳು ಹಾಗೂ ಪೋನ್‌ ಚಾರ್ಜರ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 20 ಗಂಟೆ ಉರಿಯುವ ಲ್ಯಾಂಪ್‌ಗಳು, ಒಂದೇ ಬಾರಿ ಎರಡು ಪೋನ್‌ಗಳನ್ನು ಚಾರ್ಜ್‌ ಮಾಡಬಹುದಾದ ಚಾರ್ಜರ್‌ಗಳನ್ನು ಆವಿಷ್ಕರಿಸಿದೆ. ಲ್ಯಾಂಪ್‌ಗಳಲ್ಲಿ ನೆಲದ ಮೇಲೆ ಇಡುವ ಹಾಗೂ ಸೀಲಿಂಗ್‌ನಲ್ಲಿ ಅಳವಡಿಸುವ ಲ್ಯಾಂಪ್‌ಗಳೂ ಲಭ್ಯ. ಉತ್ಪನ್ನಗಳ ದರ ₨749ರಿಂದ ₨2949ರವರೆಗೆ ನಿಗದಿ ಮಾಡಿದ್ದು, ವಿವಿಧ ರೀತಿಯ ಬಣ್ಣಗಳಲ್ಲಿ ಲಭ್ಯ.

ಹೋಮ್‌ಗಾರ್ಡ್ ರಕ್ಷಣೆ
ಹೋಮ್‌ಗಾರ್ಡ್‌ ಸಂಸ್ಥೆ ಮನೆಯ ರಕ್ಷಣೆಗಾಗಿ ನೂತನ ದೇಶಿಯ ಸಾಧನವನ್ನು ತಯಾರಿಸಿದೆ. ಮನೆಗೆ ಕಳ್ಳರು ಹೊಕ್ಕಾಗ ಈ ಸಾಧನದಿಂದ ಮಾಲೀಕನಿಗೆ ಕರೆ ಹೋಗುತ್ತದೆ. ಜತಗೆ ಇದರ ಸಹಾಯದಿಂದ ಮನೆಯ ಲೈಟ್ಸ್‌ ಹಾಗೂ ಪಂಪ್‌ಸೆಟ್‌ಗಳನ್ನು ಚಾಲನೆ ಹಾಗೂ ಸ್ಥಗಿತಗೊಳಿಸಬಹುದು. ಮಾರುಕಟ್ಟೆಯಲ್ಲಿ ಇದರ ಬೆಲೆ ಸುಮಾರು ₨12 ಸಾವಿರ.

2.5 ಕೆ.ಜಿ. ತೂಕದ ಗ್ಯಾಸ್‌
ರಾಜ್ಯದಲ್ಲಿಯೇ ಅತ್ಯಂತ ಚಿಕ್ಕ ಗಾತ್ರದ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಅನ್ನು ಎಂವಿಆರ್ ಗ್ಯಾಸ್‌ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 2.5 ಕೆ.ಜಿ. ತೂಕದ ಅನಿಲ ಭರ್ತಿ ಮಾಡಬಹುದಾದ ಈ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಉತ್ಕೃಷ್ಟ ದರ್ಜೆಯ ಬರ್ನರ್ ಅಳವಡಿಸಲಾಗಿದ್ದು, ಇವನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸುಲಭವಾಗಿ ಸಾಗಿಸಬಹುದಾಗಿದೆ. ಸರ್ಕಾರದ ಮಾನ್ಯತೆ ಪಡೆದ ಈ ಸಿಲಿಂಡರ್‌ಗಳು ಸುರಕ್ಷತೆಗೆ ಅತ್ಯಗತ್ಯವಾದ ಎಲ್ಲ ಮಾನಕಗಳನ್ನು ಒಳಗೊಂಡಿವೆ. 
ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಫೋಟೊ-ಗುರುತಿನ ಚೀಟಿಗಳ ನಕಲು ನೀಡಿ ಇವುಗಳನ್ನು ಪಡೆಯಬಹುದು. ಪ್ರತಿಯೊಬ್ಬ ಗ್ರಾಹಕರಿಗೂ ಗುರುತಿನ ಸಂಖ್ಯೆ ಮತ್ತು ಗ್ರಾಹಕರ ಗುರುತಿನ ಪತ್ರ ನೀಡಲಾಗುವುದು. ಎಂವಿಆರ್ ಸಂಸ್ಥೆಯು ನಗರದಲ್ಲಿ 200 ಡೀಲರ್‌ಗಳನ್ನು ಹಾಗೂ ರಾಜ್ಯದ ಇತರೆಡೆಗಳಲ್ಲಿ 100 ಡೀಲರ್‌ಗಳನ್ನು ಹೊಂದಿದ್ದು, ಇಲ್ಲಿ ಗ್ಯಾಸ್‌ ಅನ್ನು ಖರೀದಿಬಹುದು.

ಬ್ಯಾಕ್ ಟು ಸ್ಕೂಲ್‌
ಫುಟ್‌ವೇರ್‌ ಸಂಗ್ರಹದಲ್ಲಿ ಹೆಸರುಮಾಡಿರುವ ಬಾಟಾ ಇದೀಗ ‘ಬ್ಯಾಕ್‌ ಟು ಸ್ಕೂಲ್‌ ಸಂಗ್ರಹವನ್ನು’ ಪರಿಚಯಿಸಿದೆ. ಉತ್ತಮ ಗುಣಮಟ್ಟದ ಸಂಗ್ರಹ ಇದಾಗಿದ್ದು ವಿಶೇಷವಾಗಿ ಮಕ್ಕಳಿಗೆಂದೇ ನಿರ್ಮಿಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಬಣ್ಣವೈವಿಧ್ಯದ ಲಿಪ್‌ಸ್ಟಿಕ್‌
ಬಗೆಬಗೆಯ ಸೌಂದರ್ಯವರ್ಧಕಗಳನ್ನು ಉತ್ಪಾದಿಸುವ ಲ್ಯಾಕ್ಮೆ ಇತ್ತೀಚೆಗೆ ತನ್ನ ನೂತನ ಉತ್ಪನ್ನ ಲ್ಯಾಕ್ಮೆ ಸ್ಕಲ್ಪ್ಟ್‌ನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಗಾಢ ಕೆಂಪು, ಗುಲಾಬಿ ಮುಂತಾದ ಹದಿನೈದು ಶೇಡ್‌ಗಳಲ್ಲಿ ಈ ಲಿಪ್‌ಸ್ಟಿಕ್‌ ಲಭ್ಯವಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT