ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸಗಡ ತಂಡಕ್ಕೆ ಮೊಹಮ್ಮದ್ ಕೈಫ್ ನಾಯಕ

Last Updated 19 ಜುಲೈ 2016, 19:30 IST
ಅಕ್ಷರ ಗಾತ್ರ

ರಾಯಪುರ (ಪಿಟಿಐ): ಭಾರತ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅವರು ಛತ್ತೀಸಗಡ ರಣಜಿ ಕ್ರಿಕೆಟ್ ತಂಡದ ನಾಯಕರಾಗಿ ನೇಮಕವಾಗಿದ್ದಾರೆ.

ಛತ್ತೀಸಗಡ ಕ್ರಿಕೆಟ್ ಸಂಸ್ಥೆಗೆ ಇದೇ ವರ್ಷ ಮಾನ್ಯತೆ ಲಭಿಸಿತ್ತು. ಇದೇ ಮೊದಲ ಬಾರಿಗೆ ರಣಜಿ ಟೂರ್ನಿಗೆ ಆಡುವ ಅವಕಾಶ ಪಡೆದುಕೊಂಡಿದೆ. ‘ಛತ್ತೀಸಗಡ ತಂಡದ ಮೊದಲ ನಾಯಕರಾಗಿರುವುದು   ಸಂತಸ ತಂದಿದೆ. ಯುವ ಆಟಗಾರರೊಂದಿಗೆ ನನ್ನ ಅನುಭವ ಹಂಚಿಕೊಳ್ಳುತ್ತೇನೆ. ಪ್ರತಿಭಾನ್ವಿತ ಆಟಗಾರರ ಶೋಧಕ್ಕೆ ಒತ್ತು ಕೊಡುತ್ತೇನೆ’ ಎಂದು ಕೈಫ್ ಟ್ವೀಟ್ ಮಾಡಿದ್ದಾರೆ.

2002ರಲ್ಲಿ ಭಾರತ ತಂಡವು ನ್ಯಾಟ್‌ವೆಸ್ಟ್ ಟ್ರೋಫಿ ಜಯಿಸಲು ಕೈಫ್ ಅವರ ಅಮೋಘ ಬ್ಯಾಟಿಂಗ್ ಕಾರಣವಾಗಿತ್ತು. ಉತ್ತರ ಪ್ರದೇಶದ ಕೈಫ್ 13 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 624 ರನ್‌ಗಳನ್ನು ಕಲೆ ಹಾಕಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಶತಕ (148) ಗಳಿಸಿದ್ದರು.

125 ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಅವರು ಆಡಿದ್ದರು. ಒಟ್ಟು 2753 ರನ್‌ಗಳನ್ನು ಗಳಿಸಿದ್ದರು. ಅದರಲ್ಲಿ ಎರಡು ಶತಕ, 17 ಅರ್ಧಶತಕಗಳು ಸೇರಿವೆ. ಕಳೆದ ಒಂದು ದಶಕದಿಂದ ಅವರು ದೇಶಿ ಟೂರ್ನಿಗಳಲ್ಲಿ ಮಾತ್ರ ಆಡುತ್ತಿದ್ದಾರೆ. ಭಾರತದ ಉತ್ತಮ ಫೀಲ್ಡರ್‌ಗಳಲ್ಲಿ ಕೈಫ್ ಕೂಡ ಒಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT