ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸಗಡ: ಮಾಹಿತಿ ವ್ಯವಸ್ಥೆ ಬಲಪಡಿಸಿಕೊಂಡ ನಕ್ಸಲರು

ಗುಪ್ತಚರ ದಳದ ಮಾಹಿತಿ
Last Updated 30 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ರಾಯ್‌ಪುರ (ಪಿಟಿಐ): ‘ಲೋಕಸಭೆ ಚುನಾವಣೆಗೆ ಮುನ್ನ ನಕ್ಸಲೀಯರು ಛತ್ತೀಸಗಡದ ಬಸ್ತರ್‌್ ವಲಯದಲ್ಲಿ  ತಮ್ಮ ಮಾಹಿತಿ ವ್ಯವಸ್ಥೆಯನ್ನು ಬಲ­ಪಡಿ­ಸಿ­ಕೊಂಡಿದ್ದು, ಪೊಲೀಸ್‌ ಠಾಣೆಯಂಥ ಪ್ರಮುಖ ಸ್ಥಳಗಳಲ್ಲಿ ಮಾಹಿತಿ­ದಾರ­ರನ್ನು ನಿಯೋಜಿಸಿ­ದ್ದಾರೆ’ ಎಂದು ಗುಪ್ತಚರ ದಳದ ಹಿರಿಯ ಅಧಿಕಾರಿ­ಯೊಬ್ಬರು ತಿಳಿಸಿದ್ದಾರೆ.

‘ಈ ಕಾರ್ಯತಂತ್ರದ ಫಲವಾಗಿಯೇ ಇತ್ತೀಚೆಗೆ ದಾಂತೇವಾಡ ಜಿಲ್ಲೆಯ ಸುಕ್ಮಾ­ದಲ್ಲಿ ಭದ್ರತಾ ಪಡೆ ಸಿಬ್ಬಂದಿ ಮೇಲೆ ನಕ್ಸಲರು ದಾಳಿ ನಡೆಸಿದರು’ ಎಂದು ರಾಜ್ಯ ಗುಪ್ತಚರ ದಳದ ಹಿರಿಯ ಅಧಿಕಾರಿಯೊಬ್ಬರು ಭಾನುವಾರ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

‘ಸ್ಥಳೀಯ ಮಾಹಿತಿದಾರರ ಪ್ರಕಾರ ಬಂಡುಕೋರರ ಸಣ್ಣ ಕಾರ್ಯ­ತಂಡ­ವೊಂದು ಪೊಲೀಸ್‌ ಠಾಣೆಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿರುವ ಭದ್ರತಾ ಪಡೆ ಶಿಬಿರಗಳ ಚಲನವಲನದ ಮೇಲೆ ಕಣ್ಣಿಟ್ಟಿದೆ’ ಎಂದೂ ಅವರು ತಿಳಿಸಿದ್ದಾರೆ. ಶಾಂತಿಯುತ ಮತದಾನಕ್ಕಾಗಿ ಬಸ್ತರ್‌್ ವಲಯದಲ್ಲಿ ಹೆಚ್ಚುವರಿಯಾಗಿ 80 ಅರೆಸೇನಾಪಡೆ ತುಕಡಿಗಳನ್ನು ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT