ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಕಣಾಚಾರಿ ಪುತ್ಥಳಿ ಸ್ಥಾಪನೆಗೆ ಸ್ವಾಮೀಜಿ ಆಗ್ರಹ

Last Updated 18 ಸೆಪ್ಟೆಂಬರ್ 2014, 4:50 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ಕೈದಾಳದಲ್ಲಿ ಅಮರಶಿಲ್ಪಿ ಜಕಣಾಚಾರಿ ಸಮು­ದಾಯ ಭವನ ಹಾಗೂ ಜಕಣಾಚಾರಿ ಪುತ್ಥಳಿಯನ್ನು ಸರ್ಕಾರ ಪ್ರತಿಷ್ಠಾಪನೆ ಮಾಡಬೇಕು. ಇಲ್ಲವಾದರೆ ರಾಜ್ಯ­ದಾದ್ಯಂತ ವಿಶ್ವಕರ್ಮ ಸಮುದಾಯ ಉಗ್ರ ಹೋರಾಟಕ್ಕೆ ಅಣಿಯಾಗ­ಬೇಕಾ­ಗುತ್ತದೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆ ನಂದಿಯ ಆತ್ಮಾನಂದ ಆಶ್ರಮದ ಶಿವಾತ್ಮಾ­ನಂದ ಸರಸ್ವತಿ ಸ್ವಾಮೀಜಿ ಎಚ್ಚರಿಸಿದರು.

ನಗರದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವಕರ್ಮ ಯಜ್ಞ ಮಹೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದರು. ಕೈದಾಳ ಅಭಿವೃದ್ಧಿಗೆ ಸರ್ಕಾರ ₨ 1 ಕೋಟಿ ಬಿಡುಗಡೆ ಮಾಡಿತ್ತು. ತುಮ­ಕೂರು ನಗರಾಭಿವೃದ್ಧಿ ಪ್ರಾಧಿಕಾರ ಕೂಡ ₨ 50 ಲಕ್ಷ ನೀಡಿತ್ತು. ಆದರೂ ಕೈದಾಳ ಅಭಿವೃದ್ಧಿ ಕಂಡಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತು­ಕೊಂಡು ಸುಂದರ ಪ್ರವಾಸಿ ತಾಣವಾಗಿ ಮಾಡಲು ಮುಂದಾಗಬೇಕು ಎಂದು ತಿಳಿಸಿದರು.

ವಿಶ್ವಕರ್ಮ ದೇವತೆ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದ ದೇವತೆಯಲ್ಲ. ನಾನಾ ರೂಪಾಲಂಕರಿತ ದೇವಶಿಲ್ಪಿ. ಹುಟ್ಟು ಸಾವಿಲ್ಲದ ಚೈತನ್ಯ ಎಂದು ಹೇಳಿದರು. ಮಾಜಿ ಸಚಿವ ಎಸ್.ಶಿವಣ್ಣ ಮಾತ­ನಾಡಿ, ಸಣ್ಣ ಸಮುದಾಯಗಳನ್ನು ಸರ್ಕಾರವೇ ಗುರುತಿಸ ಅಭಿವೃದ್ಧಿಗೆ ನೆರವಾಗಬೇಕು ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಡಾ.­ಎಂ.­ಆರ್.­ಹುಲಿನಾಯ್ಕರ್ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಉನ್ನತ ಚಿಂತನೆಗಳು ಅಗತ್ಯ. ವಂಶ­ಪಾರಂ­ಪರ್ಯ­ವಾಗಿ ಬಂದ ಕುಲಕಸುಬುಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಜಿಲ್ಲಾ ಪಂಚಾಯಿಸಿ ಅಧ್ಯಕ್ಷ ವೈ.ಎಚ್.­ಹುಚ್ಚಯ್ಯ, ಸಮುದಾಯದ ಮುಖಂಡರಾದ ಡಾ.ಕೆ.ವಿ.­ಕೃಷ್ಣ­ಮೂರ್ತಿ, ನಾಗರಾಜಾಚಾರ್, ಎನ್.­ಎಸ್.ರವಿ, ಬಿ.ವಿ.ಗಂಗರಾಜು, ಶಶಿ­ಧರ್, ಗಿರೀಶ್, ಎಸ್.­ಮಂಜು­ನಾಥಾ­ಚಾರ್, ಗೋವರ್ಧನಾಚಾರ್, ನಂಜುಂಡಾ­ಚಾರ್, ಎಂ.ಬಿ.ಕೃಷ್ಣ, ಆನಂದ­ರಾಮು ಮತ್ತಿತರರು ಹಾಜರಿದ್ದರು. ಸಮಾರಂಭ ಮುಗಿದ ಬಳಿಕ ಸಪ್ತಾಶ್ವ ರಥದ ಮೇಲೆ ವಿರಾಟ್ ವಿಶ್ವಕರ್ಮ ಪರಬ್ರಹ್ಮರ ವೈಭವದ ಉತ್ಸವ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT