ಸ್ಟಾಕ್‌ಹೋಂ (ಎಎಫ್‌ಪಿ): ವಿದ್ಯುತ್ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದ ಅತ್ಯಂತ ಕಡಿಮೆ ವಿದ್ಯುತ್ ಬಳಸಿ ಹೆಚ್ಚು ಬೆಳಕು ನೀಡುವ ಪರಿಸರ ಸ್ನೇಹಿ ಎಲ್‌ಇಡಿ (ಲೈಟ್ ಎಮಿಟಿಂಗ್ ಡಯೋಡ್) ದೀಪವನ್ನು ಕಂಡುಹಿಡಿದ ಜಪಾನ್ ಮೂಲದ ಮೂವರು ವಿಜ್ಞಾನಿಗಳು ಈ ಬಾರಿಯ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅಮೆರಿಕದಲ್ಲಿ ನೆಲೆಸಿದ ಜಪಾನ್‌ನ ಇಸಾಮು ಅಕಾಸಾಕಿ, ಹಿರೋಷಿ ಅಮಾನೊ ಮತ್ತು ಶುಜಿ ನಕಾಮುರಾ ಅವರೇ ಈ ಗೌರವಕ್ಕೆ ಪಾತ್ರರಾದವರು.

ಪ್ರಶಸ್ತಿಯು ಅಂದಾಜು ₨ 6 ಕೋಟಿ (11 ಲಕ್ಷ ಡಾಲರ್) ನಗದು, ಪುರಸ್ಕಾರವನ್ನು ಒಳಗೊಂಡಿದೆ. ಪ್ರಶಸ್ತಿಯ ಮೊತ್ತವನ್ನು ಮೂವರು ವಿಜ್ಞಾನಿಗಳು ಸಮಾನವಾಗಿ ಹಂಚಿಕೊಳ್ಳಲಿದ್ದಾರೆ.

ತುರ್ತು ಸಂದರ್ಭಗಳಲ್ಲಿ ಉಪಯೋಗವಾಗುವ ಮತ್ತು ಪರಿಸರ ಸ್ನೇಹಿ ಎಲ್‌ಇಡಿ ದೀಪವು ವಿದ್ಯುತ್ ಮಿತವ್ಯಯ ಸಾಧಿಸುವಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಹಳೆಯ ವಿದ್ಯುತ್ ದೀಪಗಳಿಗೆ ಹೋಲಿಸಿದರೆ ಈ ಪುಟ್ಟ ದೀಪಗಳು ದೀರ್ಘಕಾಲೀನ ಮತ್ತು ದಕ್ಷ ಬೆಳಕಿನ ಸಾಧನಗಳಾಗಿವೆ.

‘ವಿದ್ಯುತ್ ದೀಪಗಳು 20ನೇ ಶತಮಾನ ಬೆಳಗಿದ್ದರೆ, ಎಲ್‌ಇಡಿ ದೀಪಗಳು 21ನೇ ಶತಮಾನ ಬೆಳಗಲಿವೆ’ ಎಂದು ನೊಬೆಲ್ ಆಯ್ಕೆ ಸಮಿತಿ ತಿಳಿಸಿದೆ.

‘ಯಾವ ಸಂಶೋಧನೆಯಲ್ಲಿ ಎಲ್ಲರೂ ವಿಫಲರಾಗಿದ್ದರೋ, ಅದೇ ಸಂಶೋಧನೆಯಲ್ಲಿ ಈ ಮೂವರು ಯಶಸ್ಸು ಕಂಡುಕೊಂಡಿದ್ದಾರೆ’ ಎಂದೂ ಸಮಿತಿ ಹೇಳಿದೆ.

‘ಎಲ್‌ಇಡಿ ದೀಪಗಳು ಪ್ರಕಾಶಮಾನವಾಗಿರುವ ಬೆಳಕನ್ನು ಹೊರಸೂಸುತ್ತವೆ. ಥಾಮಸ್ ಅಲ್ವಾ ಎಡಿಸನ್ ಕಂಡು ಹಿಡಿದ ಬಲ್ಬ್‌ಗೆ ಹೋಲಿಸಿದರೆ ಎಲ್‌ಇಡಿ ಬಲ್ಬ್‌ಗಳು ಅತ್ಯಂತ ಕಡಿಮೆ ವಿದ್ಯುತ್ ಬಳಸುತ್ತವೆ.

ಸ್ಥಳೀಯವಾಗಿ ಲಭ್ಯವಿರುವ ಸೌರ ವಿದ್ಯುಚ್ಛಕ್ತಿಗೂ ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸಬಹುದು. ವಿದ್ಯುತ್ ಜಾಲದ ಕೊರತೆ ಅನುಭವಿಸುತ್ತಿರುವ ಜಗತ್ತಿನಾದ್ಯಂತ ಇರುವ 1.5 ಶತಕೋಟಿ ಜನರಿಗೆ ಇದರಿಂದ ಪ್ರಯೋಜನವಾಗಿದೆ ಎಂದು ಸಮಿತಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.