ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು-ಕಾಶ್ಮೀರದಲ್ಲಿ ಬಿರುಸಿನ ಮತದಾನ

ವಿಧಾನಸಭಾ ಚುನಾವಣೆ
Last Updated 2 ಡಿಸೆಂಬರ್ 2014, 11:01 IST
ಅಕ್ಷರ ಗಾತ್ರ

ಶ್ರೀನಗರ/ರಾಂಚಿ (ಪಿಟಿಐ): ಜಮ್ಮು ಮತ್ತು ಕಾಶ್ಮೀರ ಹಾಗೂ ಜಾರ್ಖಂಡ್ ನಲ್ಲಿ ನಡೆಯುತ್ತಿರುವ ಎರಡನೇ ಹಂತದ ಮತದಾನ ಶಾಂತಿಯುತವಾಗಿ ಸಾಗಿದೆ.

ತೀವ್ರ ಚಳಿಯಿಂದಾಗಿ ಮಂದಗತಿಯಲ್ಲಿ ಆರಂಭಗೊಂಡ ಮತದಾನ ನಿಧಾನವಾಗಿ ಚುರುಕು ಪಡೆಯಿತು. ಮಧ್ಯಾಹ್ನ 2 ಗಂಟೆಗ ವರೆಗೂ ಕಣಿವೆ ರಾಜ್ಯದಲ್ಲಿ ಶೇಕಡ 53.91 ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಜಮ್ಮುಮತ್ತು ಕಾಶ್ಮೀರದಲ್ಲಿ ಎರಡನೇ ಹಂತದಲ್ಲಿ 18 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, 175 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ವಿಧಾನಸಭೆಯ ಉಪ ಸಭಾಧ್ಯಕ್ಷ, ನಾಲ್ವರು ಸಚಿವರು ಹಾಗೂ 11 ಹಾಲಿ ಶಾಸಕರು ಇದರಲ್ಲಿ ಸೇರಿದ್ದಾರೆ.

ಇನ್ನು, ಜಾರ್ಖಂಡ್ ನಲ್ಲಿ ಎರಡನೇ ಹಂತದಲ್ಲಿ ನಕ್ಸಲ್ ಪೀಡಿತ 20 ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ಬಿರುಸಿನ ಮತದಾನ ವರದಿಯಾಗಿದೆ.

ಬೆಳಿಗ್ಗೆ 11 ಗಂಟೆಯ ವರೆಗೆ ಶೇ 31.35ರಷ್ಟು ಜನರು ಮತ ಚಲಾಯಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಶ್ಚಿಮ ಜೆಮ್ಷೆಡಪುರ್ ಹಾಗೂ ಉತ್ತರ ಜೆಮ್ಷೆಡಪುರ ಕ್ಷೇತ್ರಗಳಲ್ಲಿ ಮತದಾನ ಮುಂದುವರಿದಿದ್ದು, ಸಂಜೆ 5 ಗಂಟೆಯ ವರೆಗೂ ನಡೆಯಲಿದೆ. ಆದರೆ ಉಳಿದ ಕ್ಷೇತ್ರಗಳಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಮತದಾನ ಅಂತ್ಯಗೊಂಡಿದೆ.

ಏಳು ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಈ ಕ್ಷೇತ್ರಗಳಲ್ಲಿ ಒಟ್ಟು 223 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅದರಲ್ಲಿ 35 ಮಹಿಳಾ ಅಭ್ಯರ್ಥಿಗಳು. ಹಲವು ಕ್ಷೇತ್ರಗಳಲ್ಲಿ ಚುನಾವಣಾ ಸಿಬ್ಬಂದಿಯನ್ನು ಹೆಲಿಕಾಪ್ಟರ್ ಮೂಲಕ ತಲುಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT