ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಮೀನು ಅವಧಿ ವಿಸ್ತರಣೆ

Last Updated 26 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಅಬ್ದುಲ್‌ ನಾಸೀರ್‌ ಮದನಿ ಜಾಮೀ­ನನ್ನು ಶುಕ್ರವಾರ ಇನ್ನೂ ಒಂದು ತಿಂಗಳು ವಿಸ್ತರಿಸಿದ ಸುಪ್ರೀಂ ಕೋರ್ಟ್‌, ಊರು ಬಿಟ್ಟು ಹೋಗ­ಬಾರದು ಎಂದು ಷರತ್ತು ಹಾಕಿತು.

ನ್ಯಾ.ಚಲಮೇಶ್ವರ ಮತ್ತು ನ್ಯಾ.ಎ.ಕೆ. ಸಿಕ್ರಿ ಅವರನ್ನೊಳ­ಗೊಂಡ ನ್ಯಾಯಪೀಠ ಮದನಿ  ಜಾಮೀನನ್ನು ಇನ್ನೂ ಒಂದು ತಿಂಗಳು ವಿಸ್ತರಿಸಿತು. ಆದರೆ, ಆಯು­ರ್ವೇದ ಚಿಕಿತ್ಸೆಗಾಗಿ ಕೇರಳಕ್ಕೆ ಹೋಗಲು ಅನುಮತಿ ನೀಡುವಂತೆ ಮಾಡಿದ ಮನವಿ  ತಳ್ಳಿಹಾಕಿತು.

ರಾಜ್ಯದ ಪರ ಹಾಜರಾದ ಹಿರಿಯ ವಕೀಲ ರಾಜು ರಾಮಚಂದ್ರನ್‌, ಮದನಿ ಅತ್ಯಾಧುನಿಕ ಸೌಲಭ್ಯಗಳಿರುವ  ಬೆಂಗಳೂ­ರಿನ ಎಂ.­ಎಸ್‌­. ರಾಮಯ್ಯ ಆಸ್ಪತ್ರೆ­ಯಲ್ಲಿ ಚಿಕಿತ್ಸೆ ಪಡೆ­ಯುತ್ತಿದ್ದಾನೆ.

ಚಿಕಿತ್ಸೆಗಾಗಿ ಕೇರಳಕ್ಕೆ ಹೋಗು­ವುದಾಗಿ ಹೇಳು­ತ್ತಿರುವ  ­ವಾದದಲ್ಲಿ ಯಾವುದೇ ಸಕಾರಣವೂ ಕಾಣುತ್ತಿಲ್ಲ ಎಂದು ಪ್ರತಿಪಾದಿಸಿದರು.
ಈಗಿನ ಪರಿಸ್ಥಿತಿಯಲ್ಲಿ ಮದನಿ ಕೇರಳಕ್ಕೆ ಹೋಗುವ ಅಗತ್ಯ ಕಾಣುತ್ತಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ­ರುವ ಜಾಮೀನು ಅವಧಿಯನ್ನು ಇನ್ನೂ ಒಂದು ತಿಂಗಳು ವಿಸ್ತರಿಸುವುದಾಗಿ ನ್ಯಾಯಾ­­ಲಯ ಹೇಳಿತು.

2008ರಲ್ಲಿ ಬೆಂಗಳೂರಿನಲ್ಲಿ ನಡೆದ ಸರಣಿ ಸ್ಫೋಟ­ದಲ್ಲಿ ಮದನಿ ಪ್ರಮುಖ ಆರೋಪಿ­ಯಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT