‘ಹುಲಿ ಹಾಗೂ ಸಿಂಹಗಳನ್ನು ಮನೆಯಲ್ಲಿ ಸಾಕಲು ಅವಕಾಶ ನೀಡುವ ಕಾನೂನು ರೂಪಿಸುವ ಅಗತ್ಯವಿದೆ’ (ಪ್ರ.ವಾ., ಮಾರ್ಚ್ 2) ಎಂದು ಮಧ್ಯಪ್ರದೇಶದ ಪಶುಸಂಗೋಪನೆ ಸಚಿವೆ ಕುಸುಮಾ ಮೆಹದೆಲೆ ನೀಡಿರುವ ಸಲಹೆ ಜಾರಿ ಯೋಗ್ಯವಲ್ಲ.
ಕಾಡು ಪ್ರಾಣಿಗಳು ಅದರಲ್ಲೂ ಮಾಂಸಾಹಾರಿ ಪ್ರಾಣಿಗಳು ಎಂದಿಗೂ ಕೌಟುಂಬಿಕ ಸಾಕು ಪ್ರಾಣಿಗಳಾಗಲು ಸಾಧ್ಯವಿಲ್ಲ. ಮನೆಯಲ್ಲಿ ಬೆಳೆದ ಪ್ರಾಣಿಗಳು ತಮ್ಮನ್ನು ತಾವು ಸಂರಕ್ಷಿಸಿಕೊಳ್ಳುವ ತಂತ್ರಗಳನ್ನು ಕಲಿಯಲಾಗುವುದಿಲ್ಲ. ಹುಲಿಯನ್ನು ಮನೆಯಲ್ಲಿ ಸಾಕಿದರೆ ಅದು ಹುಲಿಯಂತೆ ಬೆಳೆಯುವುದಿಲ್ಲ. ಹುಲಿಯಂತಿದ್ದರೂ ಗುಣ ನಾಯಿಯಂತಾಗಿಬಿಡುತ್ತದೆ.
–ಸುನೀಲ್ ಬಿ.ಎನ್., ಬಿಂಡಹಳ್ಳಿ, ಪಾಂಡವಪುರ ತಾಲ್ಲೂಕು