ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಶಾಂತಿಯುತ ಮತದಾನ

ಕೈ ಕೊಟ್ಟ ವಿದ್ಯುತ್‌, ಮೋಂಬತ್ತಿ ಬೆಳಕಲ್ಲಿ ಮತ ಚಲಾವಣೆ
Last Updated 18 ಏಪ್ರಿಲ್ 2014, 7:54 IST
ಅಕ್ಷರ ಗಾತ್ರ

ಗದಗ: ಕೈ ಕೊಟ್ಟ ಮತಯಂತ್ರ, ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ವಿದ್ಯುತ್‌ ಅಡಚಣೆಯಿಂದ ಪರದಾಡಿದ ವೃದ್ಧರು, ಮೋಂಬತ್ತಿ ಬೆಳಕಲ್ಲಿ ಮತದಾನ, ಮತದಾನಕ್ಕೆ ಅಡ್ಡಿ ಪಡಿಸಿದ ವರುಣ..

ಹಾವೇರಿ ಮತ್ತು ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಗುರುವಾರ ನಡೆದ ಮತದಾನದ ವೇಳೆ ಕಂಡು ಬಂದ ದೃಶ್ಯ. ಜಿಲ್ಲೆಯ ಬಹುತೇಕ ಕಡೆ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡರೂ ನಗರ ಪ್ರದೇಶದ ಮತಗಟ್ಟೆಗಳ ಬಳಿ ಜನರ ಸಂಖ್ಯೆ ಅಷ್ಟಾಗಿ ಕಂಡು ಬರಲಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಜನರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಕೆಲವೆಡೆ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದೆ ಜನರು ಪರದಾಡಿದರು.

ಗದಗ ವಿಧಾನ ಸಭಾ ಕ್ಷೇತ್ರದಲ್ಲಿ ಎರಡನೇ ನಂಬರ್‌ ಶಾಲೆಯಲ್ಲಿ ಮತಯಂತ್ರದ ತಾಂತ್ರಿಕ ತೊಂದರೆಯಿಂದಾಗಿ ಮತದಾನ ಅರ್ಧ ಗಂಟೆ ವಿಳಂಬವಾಗಿ ಆರಂಭಗೊಂಡಿತು. ಬಳಿಕ ಬದಲಿ ಮತಯಂತ್ರ ಅಳವಡಿ ಸಲಾಯಿತು. ಗಂಗಾಪುರ ಪೇಟೆಯಲ್ಲಿ ಮಾಯವ್ವ ಬಜೇಂತ್ರಿ ಎಂಬುವರ ಹೆಸ ರಲ್ಲಿ ಮತ್ತೊಬ್ಬರು ಮತ ಚಲಾಯಿಸಿ ದ್ದರು.  ಹೀಗಾಗಿ ಮಾಯವ್ವ ಅವರು ಮತಗಟ್ಟೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗದಗ ವಿಧಾನಸಭಾ ಕ್ಷೇತ್ರದ ಬಿಂಕದಕಟ್ಟಿ, ಹುಲಕೋಟಿ, ಕುರ್ತಕೋಟಿ ಸೇರಿದಂತೆ ಇತರೆಡೆ ಬೆಳಿಗ್ಗೆ 9ರ ಹೊತ್ತಿಗೆ ಶೇಕಡಾ 8ರಷ್ಟಿದ್ದ ಮತದಾನ 11ರ ವೇಳೆಗೆ ಬಿರುಸಾಗಿ ಶೇಕಡಾ 18ರಷ್ಟು ಆಗಿತ್ತು. ಮಧ್ಯಾಹ್ನ 3 ಗಂಟೆವರೆಗೆ ಮತದಾನದ ಪ್ರಮಾಣ ಶೇಕಡಾ 47ರಷ್ಟು ಆಗಿತ್ತು.  3.45ರಲ್ಲಿ ಗುಡುಗು, ಸಿಡಿಲು ಸಹಿತ ಮಳೆ ಒಂದು ತಾಸು ಜೋರಾಗಿ ಸುರಿಯಿತು. ಜನರು ಮನೆಯಿಂದ ಮತಚಲಾಯಿಸಲು ಹೊರಗೆ ಬಾರಲಿಲ್ಲ. ಸಂಜೆ 5ಗಂಟೆಗೆ ಮಳೆಯ ಆರ್ಭಟ ನಿಂತಿತ್ತು. ನಂತರ ಕೆಲವರು  ಮತ ಚಲಾಯಿಸಿದರು.

ಮಳೆಯಿಂದಾಗಿ ವಿದ್ಯುತ್‌ ಕೈಕೊಟ್ಟ ಹಿನ್ನಲೆಯಲ್ಲಿ ಮತಗಟ್ಟೆ ಸಿಬ್ಬಂದಿ ಮೊಬೈಲ್‌  ಮತ್ತು ಮೋಂಬತ್ತಿ ಬೆಳಕಿ ನಲ್ಲಿ ಮತದಾನ ಮಾಡಲು ವ್ಯವಸ್ಥೆ ಮಾಡಿದರು. ಕೆಲವು ತಾಲ್ಲೂಕುಗಳಲ್ಲಿ ವೃದ್ಧರಿಗೆ ಮತಯಂತ್ರದಲ್ಲಿ ಚಿಹ್ನೆ ಸರಿಯಾಗಿ ಕಾಣದೆ ಪರದಾಡಿದ ಘಟನೆಯೂ ನಡೆಯಿತು.

ಬಿರುಗಾಳಿ ಸಹಿತ ಮಳೆ ಸುರಿದ ಕಾರಣ ಗದಗ ತಾಲ್ಲೂಕಿನ ಸಂಭಾಪೂರ ಗ್ರಾಮದ ಮತಗಟ್ಟೆ ಕೇಂದ್ರದ ತಗಡಿನ ಶೀಟ್‌ಗಳು ಹಾರಿ ಹೋದವು. ಬಳಿಕ ಮತದಾನಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಲಾಯಿತು. ಮತದಾನ ಅವಧಿ ಮುಗಿಯುವ ಸಮಯದಲ್ಲಿ ಸರತಿಯಲ್ಲಿದ್ದ ಜಿಲ್ಲೆಯ 183ಕ್ಕೂ ಹೆಚ್ಚಿನ ಮತಗಟ್ಟೆಗಳಲ್ಲಿ ಟೋಕನ್‌ ನೀಡಿ ಮತದಾರರಿಗೆ ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಯಿತು.

ಸಚಿವ ಎಚ್‌.ಕೆ.ಪಾಟೀಲ ಅವರು ಹುಲಕೋಟಿಯ ಗಂಡು ಮಕ್ಕಳ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ, ಮಾಜಿ ಶಾಸಕ ಶ್ರೀಶೈಲಪ್ಪ ದಂಪತಿ ರಾಮನಗರದಲ್ಲಿ ಮತ್ತು ತೋಂಟ ದಾರ್ಯ ಮಠದ ಡಾ.ಸಿದ್ದಲಿಂಗ ಸ್ವಾಮೀಜಿ ಅವರು ಶಹಪೂರ ಪೇಟೆಯ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು.

ಮುಂಡರಗಿ ತಾಲ್ಲೂಕಿನ ಕೋಟೆ ಪ್ರಾಥಮಿಕ ಶಾಲೆಯಲ್ಲಿ ಕೆಲ ಕಾಲ ಮತಯಂತ್ರ ಕೈ ಕೊಟ್ಟಿತ್ತು. ಬ್ಯಾಳವಾ ಡಗಿಯಲ್ಲಿ ಪ್ರಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯ ಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ವಿದ್ಯುತ್‌ ಕೈ ಕೊಟ್ಟಿದ್ದರಿಂದ ಮತಯಂತ್ರದಲ್ಲಿನ ಚಿಹ್ನೆಗಳು ಸರಿ ಯಾಗಿ ಕಾಣದೆ ವೃದ್ಧರು ಪರದಾಡಿದರು.

ನರಗುಂದದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಬನಹಟ್ಟಿ ಗ್ರಾಮದಲ್ಲಿ ಮತಯಂತ್ರ ಕೈಕೊಟ್ಟು ಅರ್ಧ ಗಂಟೆ ತಡವಾಗಿ ಆರಂಭಗೊಂಡಿತು.    ಸಂಜೆ 6 ರ ಹೊತ್ತಿಗೆ ಮತದಾನದ ಪ್ರಮಾಣ ಗದಗ–ಶೇ. 65, ರೋಣ ಶೇ. 72.6, ನರಗುಂದ ಶೇ. 70.72, ಶಿರಹಟ್ಟಿ ಶೇ. 60. ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT