ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈದಿ ನೂತನ ಮುಖ್ಯ ಚುನಾವಣಾ ಆಯುಕ್ತ

Last Updated 9 ಏಪ್ರಿಲ್ 2015, 7:34 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಚುನಾವಣಾ ಆಯುಕ್ತ ನಸೀಮ್ ಜೈದಿ ಅವರನ್ನು ಮುಂದಿನ ಮುಖ್ಯ ಚುನಾವಣಾ ಅಧಿಕಾರಿಯಾಗಿ ಗುರುವಾರ ನೇಮಿಸಲಾಗಿದೆ.

ಜೈದಿ ಅವರ ನೇಮಕವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಖಚಿತಪಡಿಸಿದ್ದಾರೆ ಎಂದು ಕಾನೂನು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಏಪ್ರಿಲ್ 19ರಂದು ಜೈದಿ ಅವರು ಪದಗ್ರಹಣ ಮಾಡಲಿದ್ದು, 2017ರ ಜುಲೈ ವರೆಗೂ ಅವರ ಅಧಿಕಾರಾವಧಿ ಇರಲಿದೆ.

ಈಗಿನ ಮುಖ್ಯ ಚುನಾವಣಾ ಆಯುಕ್ತ ಹರಿಶಂಕರ್ ಬ್ರಹ್ಮ ಅವರ ಅಧಿಕಾರಾವಧಿಯು ಏಪ್ರಿಲ್ 18ರಂದು ಕೊನೆಗೊಳ್ಳಲಿದೆ.

ಜೈದಿ ಅವರನ್ನು ಸಿಇಸಿ ಆಗಿ ನೇಮಿಸುವ ಮೂಲಕ ಸೇವಾಜೇಷ್ಠತೆಯ ಆಧಾರದಲ್ಲಿ ಪ್ರಮುಖ ಹುದ್ದೆಗಳಿಗೆ ನೇಮಿಸುವ ಸಂಪ್ರದಾಯವನ್ನು ಸರ್ಕಾರ ಮುಂದುವರಿಸಿದಂತಾಗಿದೆ.

ಜೈದಿ ಯಾರು?

1976ರ ಉತ್ತರ ಪ್ರದೇಶ ಕೇಡರಿನ ಐಎಎಸ್ ಅಧಿಕಾರಿಯಾಗಿರುವ ಜೈದಿ, 2012ರ ಆಗಸ್ಟ್ 7ರಂದು ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದರು. ಇದಕ್ಕೂ ಮೊದಲು ಅವರು ನಾಗರಿಕ ವಿಮಾನಯಾನ ಸಚಿವಾಲಯದ ನಿರ್ದೇಶಕ ಹುದ್ದೆ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದರು. 2012ರ ಜುಲೈ 31ರಂದು ಜೈದಿ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿಯಾಗಿ ನಿವೃತ್ತಿಯಾಗಿದ್ದರು.

ಅದಕ್ಕೂ ಹೆಚ್ಚಾಗಿ ಮೂರು ಸದಸ್ಯರ ಸಾಂವಿಧಾನಿಕ ಸಂಸ್ಥೆಯಲ್ಲಿ ಉಳಿದಿರುವ ಏಕೈಕ ಸದಸ್ಯ ಜೈದಿ. ಏಕೆಂದರೆ, ಸಿಇಸಿ ಆಗಿದ್ದ ವಿ.ಎಸ್.ಸಂಪತ್ ಅವರ ನಿವೃತ್ತಿದಾಗಿನಿಂದ ಅವರ ಬದಲಾಗಿ ಯಾರನ್ನೂ ಈವರೆಗೂ ನೇಮಿಸಿಲ್ಲ. ಅವರ ಹುದ್ದೆಗೆ ಹರಿಶಂಕರ್ ಬ್ರಹ್ಮ ಅವರು ನೇಮಕವಾಗಿದ್ದರೂ ಸದಸ್ಯರ ಸಂಖ್ಯೆಯಲ್ಲಿ ಹೆಚ್ಚಾಗಿರಲಿಲ್ಲ; ಎರಡೇ ಉಳಿದಿತ್ತು. ಇದೀಗ ಬ್ರಹ್ಮ ಅವರು ನಿವೃತ್ತಿಯಾಗುತ್ತಿರುವುದರಿಂದ ಜೈದಿ ಒಬ್ಬರು ಮಾತ್ರವೇ ಅಲ್ಲಿ ಉಳಿದಿರುವ ಸದಸ್ಯ.

ಖಾಲಿ ಉಳಿದಿರುವ ಎರಡೂ ಸ್ಥಾನಗಳಿಗೆ ಸರ್ಕಾರ ಶೀಘ್ರವೇ ಹೊಸಬರನ್ನು ನೇಮಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT