ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್‌ ಮೂಲ ಪ್ರತಿ ಸಲ್ಲಿಕೆ ಕಡ್ಡಾಯವಲ್ಲ

ಸರ್ಕಾರಿ ಅಧಿಕಾರಿಗಳ ಪ್ರಯಾಣ ಭತ್ಯೆ
Last Updated 8 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸರ್ಕಾರಿ ಅಧಿ­ಕಾರಿ­ಗಳು ತಮ್ಮ ಅಧಿಕೃತ ಪ್ರಯಾಣದ ಭತ್ಯೆ ಪಡೆಯಲು ಟಿಕೆಟ್‌ (ಬೋರ್ಡಿಂಗ್‌ ಪಾಸ್‌) ಸಲ್ಲಿಸುವುದು ಕಡ್ಡಾಯ ಎಂಬ ತನ್ನ ಆದೇಶವನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿದೆ.

ಪ್ರಯಾಣ ಭತ್ಯೆ ನಗದೀಕರಿಸುವ ವೇಳೆ ಪ್ರಯಾಣದ ಟಿಕೆ­ಟ್‌ ಮೂಲ­ಪ್ರತಿ­ಯನ್ನು ಸಲ್ಲಿಸು­ವುದು ಕಷ್ಟ ಎಂಬ ಅಭಿ­ಪ್ರಾಯ ವ್ಯಕ್ತವಾಗಿರುವ ಕಾರಣ ಭತ್ಯೆ ನಗದೀಕರಣ ಪ್ರಕ್ರಿಯೆ­ಯನ್ನು ಸರಳ­ಗೊಳಿಸಲು ನಿರ್ಧರಿಸಲಾಗಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಆದೇಶದಲ್ಲಿ ತಿಳಿಸಿದೆ.

ಆದರೆ ಸಂಬಂಧಿತ ಅಧಿಕಾರಿಯು ಪ್ರಯಾಣ ಕೈಗೊಂಡ ಬಗ್ಗೆ ಪತ್ರವನ್ನು ಸಲ್ಲಿಸ­ಬೇಕು. ಉಳಿದಂತೆ ಪ್ರಯಾಣಭತ್ಯೆ ನಗ­ದೀ­ಕರಣಕ್ಕೆ ಸಂಬಂಧಪಟ್ಟ ಇತರ ಪ್ರಕ್ರಿಯೆಗಳು ಯಥಾಸ್ಥಿತಿ ಮುಂದು­­ವರಿಯ­ಲಿವೆ. ಪ್ರವಾಸ ಕೈಗೊಂಡಿರುವ ಬಗ್ಗೆ ಸಂದೇಹ ಬಂದಲ್ಲಿ ಪ್ರಯಾಣ ಭತ್ಯೆ ಮಂಜೂರು ಮಾಡುವ ಅಧಿ­ಕಾರಿಯು ಪ್ರಯಾಣ ಮಾಡಿರುವುದು ಹೌದೇ ಎಂಬು­ದನ್ನು ಪರಿಶೀಲಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇಲಾಖಾ ಕೆಲಸಕ್ಕೆ ಸಂಬಂಧಿಸಿ ವಿಮಾನ ಯಾನ ಕೈಗೊಳ್ಳ­ಬೇಕಾ­ದಾಗ ಇಲಾಖೆಯಿಂದ ಮಾನ್ಯತೆ ಪಡೆದ, ಬಾಲ್ಮರ್‌ ಲಾರಿ ಅಂಡ್‌ ಕಂಪೆನಿ­ಯಿಂ­ದಲೇ ಟಿಕೆಟ್‌ ಖರೀದಿಸಬೇಕು. ಅಗ್ಗದ ದರದ ವಿಮಾನ­ದಲ್ಲೇ ಪ್ರಯಾಣಿಸ­ಬೇಕು ಎಂದು ಆದೇಶ­ದಲ್ಲಿ ಹೇಳ­ಲಾಗಿದೆ. ಒಂದು ವೇಳೆ ಏರ್‌ ಇಂಡಿಯಾ ಸಂಸ್ಥೆಯಲ್ಲಿ ಅಗ್ಗದ ದರದ ಟಿಕೆಟ್‌ ಲಭ್ಯವಿದ್ದರೆ ಅದನ್ನೇ ಆಯ್ಕೆ ಮಾಡಿ­ಕೊ­ಳ್ಳ­­ಬೇಕು ಎಂದು ವಿವರಿಸ­ಲಾಗಿದೆ.

ಹೆಚ್ಚು ವಿಮಾನ ಪ್ರಯಾಣ ನಡೆಸುವ­ವರಿಗೆ ದೊರೆಯುವ ‘ರಿವಾರ್ಡ್‌ ಪಾಯಿಂಟ್‌’­ಗಳನ್ನು ಅಧಿಕೃತ ಪ್ರವಾ­ಸಕ್ಕೇ ಬಳಸಬೇಕು ಎಂದೂ ಆದೇಶದಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT