ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ನಡಾಲ್‌ಗೆ ಪ್ರಶಸ್ತಿ

Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬ್ಯೂನಸ್‌ ಐರಿಸ್‌ (ಎಎಫ್‌ಪಿ): ಸ್ಪೇನ್‌ನ ರಫೆಲ್‌ ನಡಾಲ್‌ ಕೊನೆಗೂ ಪ್ರಶಸ್ತಿಯ ಬರ ನೀಗಿಸಿಕೊಂಡಿದ್ದಾರೆ. ಭಾನುವಾರ ಇಲ್ಲಿ ಕೊನೆಗೊಂಡ ಅರ್ಜೆಂಟೀನಾ ಓಪನ್‌ ಟೂರ್ನಿಯಲ್ಲಿ ಅವರು ಚಾಂಪಿಯನ್ ಆದರು.

ವಿಶ್ವ ರ್‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ನಡಾಲ್‌ ಫೈನಲ್‌ ನಲ್ಲಿ 6–4, 6–1 ರಲ್ಲಿ ಜುವಾನ್‌ ಮೊನಾಕೊ ವಿರುದ್ಧ ಗೆಲುವು ಪಡೆದರು. ಸ್ಪೇನ್‌ನ ಆಟಗಾರನಿಗೆ ಒಂಬತ್ತು ತಿಂಗಳ ಬಿಡುವಿನ ಬಳಿಕ ದೊರೆತ ಪ್ರಶಸ್ತಿ ಇದು.

ಜೂನ್‌ ತಿಂಗಳಲ್ಲಿ ಫ್ರೆಂಚ್‌ ಓಪನ್‌ ಗ್ರ್ಯಾಂಡ್‌ ಸ್ಲಾಮ್‌ ಗೆದ್ದ ಬಳಿಕ ನಡಾಲ್‌ ಯಾವುದೇ ಟೂರ್ನಿಯಲ್ಲೂ ಪ್ರಶಸ್ತಿ ಜಯಿಸಿಲ್ಲ. ಹೋದ ವಾರ ನಡೆದ ರಿಯೊ ಡಿ ಜನೈರೊ ಓಪನ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಫ್ಯಾಬಿಯೊ   ಫಾಗ್ನಿನಿ ಕೈಯಲ್ಲಿ ಸೋಲು ಅನುಭವಿಸಿದ್ದರು.

2014ರ ಋತುವಿನಲ್ಲಿ ಗಾಯದ ಸಮಸ್ಯೆಯಿಂದ ಬಳಲಿದ್ದ ಅವರು ಕೆಲವೊಂದು ಟೂರ್ನಿಗಳಲ್ಲಿ ಆಡಿರಲಿಲ್ಲ. ಜನವರಿಯಲ್ಲಿ ನಡೆದ ಆಸ್ಟ್ರೇಲಿಯಾ ಓಪನ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲು ಅನುಭವಿಸಿದ್ದರೆ, ಕತಾರ್‌ ಓಪನ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲೂ ವಿಫಲರಾಗಿದ್ದರು.

ಈ ಕಾರಣ ಅವರು ವಿಶ್ವ ರ್‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿದ್ದರು. ಇದೀಗ ಇಲ್ಲಿ ಪ್ರಶಸ್ತಿ ಗೆದ್ದಿರುವ ಕಾರಣ ನೂತನ ರ್‍್ಯಾಂಕಿಂಗ್‌ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರುವ ಸಾಧ್ಯತೆಯಿದೆ.

‘ಹೋದ ವರ್ಷ ಗಾಯದ ಸಮಸ್ಯೆ ಯಿಂದಾಗಿ ಅಂಗಳದಿಂದ ದೂರವುಳಿ ದಿದ್ದೆ. ಈ ವರ್ಷದ ಆರಂಭದಲ್ಲಿ ಟೆನಿಸ್‌ ಕಣಕ್ಕೆ ಮರಳಿದರೂ ನೈಜ ಆಟವಾಡಲು ಆಗಿರಲಿಲ್ಲ. ಇದೀಗ ಪ್ರಶಸ್ತಿ ಗೆದ್ದಿರುವ ಕಾರಣ ಆತ್ಮವಿಶ್ವಾಸ ಹೆಚ್ಚಿದೆ’ ಎಂದು 28ರ ಹರೆಯದ ನಡಾಲ್‌ ತಿಳಿಸಿದ್ದಾರೆ.

ಮೊನಾಕೊ ವಿರುದ್ಧ ಗೆಲುವು ಪಡೆಯಲು ನಡಾಲ್‌ ಒಂದು ಗಂಟೆ 26 ನಿಮಿಷಗಳನ್ನು ತೆಗೆದುಕೊಂಡರು. ಕ್ಲೇ ಕೋರ್ಟ್‌ನಲ್ಲಿ ನಡಾಲ್‌ಗೆ ದೊರೆತ 46ನೇ ಹಾಗೂ ವೃತ್ತಿಜೀವನದ 65ನೇ ಪ್ರಶಸ್ತಿ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT