ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಲಿಕಾಂ ಆಪರೇಟರ್ ಲೆಕ್ಕಪತ್ರ ತಪಾಸಣೆ: ಸುಪ್ರೀಂ ಸ್ಪಷ್ಟನೆ

Last Updated 17 ಏಪ್ರಿಲ್ 2014, 10:47 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್ಎಸ್): ರಾಷ್ಟ್ರೀಯ ಲೆಕ್ಕಪತ್ರ ಪರಿಶೋಧಕರಾದ ಮಹಾಲೇಖಪಾಲರು (ಸಿಎಜಿ) ಟೆಲಿಕಾಂ ನಿರ್ವಾಹಕರ (ಆಪರೇಟರ್ ಗಳ) ಲೆಕ್ಕಪತ್ರ ಪರಿಶೋಧನೆ ಮಾಡಬಹುದು ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿತು.

ನ್ಯಾಯಮೂರ್ತಿ ಕೆ.ಎಸ್. ರಾಧಾಕೃಷ್ಣನ್ ನೇತೃತ್ವದ ಸುಪ್ರಿಂಕೋರ್ಟ್ ಪೀಠವು ಈ ವಿಷಯಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ನೀಡಿದ ಆದೇಶವನ್ನು ಎತ್ತಿ ಹಿಡಿದು ಮಹಾಲೇಖಪಾಲರು ಟೆಲಿಕಾಂ ಆಪರೇಟರ್ ಗಳ ಆದಾಯ ಪರಿಶೀಲನೆ ಮಾಡಬಹುದು ಎಂದು ಸ್ಪಷ್ಟ ಪಡಿಸಿತು.

ಸರ್ಕಾರದ ವಶದಲ್ಲಿ ಇರುವ ನೈಸರ್ಗಿಕ ಸಂಪನ್ಮೂಲವನ್ನು ಖಾಸಗಿ ಆಪರೇಟರ್ ಗಳ ಸ್ವಾಮ್ಯಕ್ಕೆ ನೀಡಲಾಗುತ್ತದೆ. ಇಂತಹ ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮೇಲಿನ ಸಂಸದೀಯ ನಿಯಂತ್ರಣವನ್ನು ಮಹಾಲೇಖಪಾಲರು ಖಾತರಿ ಪಡಿಸುವ ಅಗತ್ಯವಿದೆ ಎಂದು ಕೋರ್ಟ್ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT