ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೈಮರ್‌ಗಳು ಏಕಿಲ್ಲ?

Last Updated 20 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಹುತೇಕ ರಸ್ತೆಗಳಲ್ಲಿ ‘ಬಿ ಟ್ರ್ಯಾಕ್‌’ ಫಲಕಗಳು ರಾರಾಜಿಸುತ್ತಿವೆ. ಸಿಗ್ನಲ್‌ ದೀಪಗಳು ಇರುವೆಡೆಗಳಲ್ಲಿ, ಟೈಮರ್‌ಗಳ ಜೋಡಣೆ ಬಹುತೇಕ ಕಡೆಗಳಲ್ಲಿ ಇರುವುದಿಲ್ಲ. ಇದ್ದರೂ ಅವು ಕೆಲಸ ಮಾಡುತ್ತಿಲ್ಲ. ಹಾಗಾಗಿ ವಾಹನ ಸವಾರರು ತಮ್ಮ ವಾಹನಗಳನ್ನು ಚಾಲನೆಯಲ್ಲಿ ಇಡಬೇಕಾದದ್ದು ಅನಿವಾರ್ಯ. ಇದರಿಂದ ಇಂಧನ ಸುಡುವುದೇ ಅಲ್ಲದೆ, ಶಬ್ದ ಹಾಗೂ ಪರಿಸರ ಮಾಲಿನ್ಯ ಉಂಟಾಗುತ್ತಿದೆ.

ಟೈಮರ್‌ಗಳ ಜೋಡಣೆ ಮತ್ತು ಅವು ಕಾರ್ಯನಿರ್ವಹಿಸುವಂತೆ ಮಾಡುವುದು ಯಾರ ವ್ಯಾಪ್ತಿಗೆ ಬರುತ್ತದೆ? ಜನಪ್ರತಿನಿಧಿಗಳಿಗೆ ಈ ಚಿಂತೆ ಇಲ್ಲ, ಪೊಲೀಸರೂ ಕ್ರಿಯಾಶೀಲರಾಗಿಲ್ಲ. ಇನ್ನು ಈ ಸಮಸ್ಯೆಯನ್ನು ಯಾರ ಬಳಿ ಕೇಳುವುದು?
–ಕೆ. ಟಿ. ತಿಮ್ಮಾರೆಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT