ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್‌ಗೆ ಜನಬೆಂಬಲ

ಅಕ್ಷರ ಗಾತ್ರ

ಭಾನುವಾರದ ‘ವ್ಯಕ್ತಿ’ ಅಂಕಣದಲ್ಲಿ (ಪ್ರ.ವಾ. ಮೇ 1) ಅಮೆರಿಕದ ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌  ಟ್ರಂಪ್ ಅವರ ಬಗ್ಗೆ ಡಾ. ಟಿ.ಎನ್‌.ವಾಸುದೇವ ಮೂರ್ತಿಯವರು ಬರೆದಿರುವ ಲೇಖನ ಒಂದು ಮಗ್ಗುಲಿನ ವಿಚಾರಕ್ಕೆ ಸೀಮಿತವಾಗಿದೆ.

ಟ್ರಂಪ್ ಅವರ ಪರವಾಗಿ ಎದ್ದಿರುವ ಭಾರಿ ಅಲೆಯನ್ನೂ, ಜನಬೆಂಬಲದ ಕಾರಣವನ್ನೂ ಅವರು ಮರೆಮಾಚಿದ್ದಾರೆ. ಟ್ರಂಪ್ ಅವರ ಇಸ್ಲಾಂ ವಿರೋಧಿ ಧೋರಣೆಯನ್ನು ಖಂಡಿಸುವ ಅವರು, ಈ ಧೋರಣೆಗೆ ಅಮೆರಿಕದ ಉದ್ದಗಲಕ್ಕೂ ಏಕೆ ಬೆಂಬಲ ಸಿಗುತ್ತಿದೆ ಎನ್ನುವುದನ್ನು ಅರಿಯುವ ಪ್ರಯತ್ನ ಮಾಡಿಲ್ಲ.

ಮುಸ್ಲಿಂ ಉದಾರವಾದಿಗಳು ಕೇವಲ ಇಸ್ಲಾಂ ಭಯೋತ್ಪಾದನೆಯನ್ನು ಖಂಡಿಸುವುದು, ಉಗ್ರಗಾಮಿಗಳಿಗೆ ಯಾವುದೇ ಧರ್ಮವಿಲ್ಲ, ಇಸ್ಲಾಂ ಶಾಂತಿ ಬೋಧಿಸುವ ಧರ್ಮ ಎಂಬ ಹಳೆಯ ಪ್ಲೇಟುಗಳನ್ನು ತಿರುಗಿಸುವುದು ಬಿಟ್ಟರೆ, ತೀವ್ರವಾದಿಗಳನ್ನು, ಭಯೋತ್ಪಾದಕರನ್ನು ಹದ್ದುಬಸ್ತಿನಲ್ಲಿಡುವ ಯಾವುದೇ ಗಂಭೀರ ಪ್ರಯತ್ನ ಮಾಡಿಲ್ಲ.

ಬಹುತೇಕ ಮುಸ್ಲಿಂ ದೇಶಗಳಲ್ಲಿ ಪಾಶ್ಚಿಮಾತ್ಯ ವಿರೋಧಿ ಧೋರಣೆ, ಷರಿಯಾ ಕಾನೂನು, ಅಲ್ಪಸಂಖ್ಯಾತರ ದಮನಇತ್ಯಾದಿ ಅಜೆಂಡಾಗಳನ್ನು ಇಟ್ಟುಕೊಂಡೇ ಚುನಾವಣೆಯಲ್ಲಿ ಗೆದ್ದು ಬಂದು ಆಡಳಿತ ಮಾಡುವ ಸರ್ಕಾರಗಳಿವೆ.

ಹೀಗಿರುವಾಗ, ತಮ್ಮಲ್ಲಿ ಬಹುಸಂಖ್ಯಾತರ ಪರ ಅಜೆಂಡಾ ಇರುವ ಸರ್ಕಾರ ಬರಲಿ ಎಂದು ಅಮೆರಿಕನ್ನರು ಬಯಸುವ ಇಂತಹ ಸಂದರ್ಭದಲ್ಲಿ ಇಡೀ ಮುಸ್ಲಿಮೇತರ ಪ್ರಪಂಚವೇ ಟ್ರಂಪ್ ಕಡೆ ನೋಡುತ್ತಿರುವುದು ಸಹಜ.

ಇದು ಒಟ್ಟು ಮನುಕುಲದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ. ಆದರೆ ಟ್ರಂಪ್ ಅಮೆರಿಕದ ಅಧ್ಯಕ್ಷರಾದರೆ ಅದರ ಪೂರ್ಣ ಹೊಣೆ ಜಾಗತಿಕ ಮುಸ್ಲಿಂ ಸಮುದಾಯದ್ದೇ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT