ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠಾಣೆಗಳಲ್ಲಿ ಸಿ.ಸಿ.ಕ್ಯಾಮೆರಾ

Last Updated 18 ಸೆಪ್ಟೆಂಬರ್ 2014, 19:51 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸರ ವರ್ತನೆಯ ಮೇಲೆ ನಿಗಾ ಇಡಲು ನಗರದ ಎಲ್ಲ ಠಾಣೆಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ­ಗಳನ್ನು ಅಳವಡಿಸಲು ಇಲಾಖೆ ಮುಂದಾಗಿದ್ದು, ಮೊದಲ ಹಂತದಲ್ಲಿ ಶ್ರೀರಾಂಪುರ, ಮಲ್ಲೇಶ್ವರ ಹಾಗೂ ಶೇಷಾದ್ರಿಪುರ ಠಾಣೆಗಳಲ್ಲಿ ಪ್ರಾಯೋಗಿ­ಕ­ವಾಗಿ ಈ ಕಾರ್ಯ ನಡೆದಿದೆ.

ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿಯು (ಬಿ.ಪ್ಯಾಕ್‌) ನಗರ ಪೊಲೀಸರ ಸಹಯೋಗದಲ್ಲಿ  ಕ್ಯಾಮೆರಾ­ಗಳನ್ನು ಅಳವಡಿಸುತ್ತಿದೆ. ಪ್ರತಿ ಠಾಣೆ­ಯಲ್ಲಿ ಮೂರು ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಠಾಣೆಯ ಒಳ­ಭಾಗದಲ್ಲಿ ಎರಡು ಮತ್ತು ಹೊರಗಡೆ ಒಂದು ಕ್ಯಾಮೆರಾ ಇರಲಿವೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ನಗರ ಪೊಲೀಸ್‌ ಕಮಿಷನರ್‌ ಎಂ.ಎನ್‌.ರೆಡ್ಡಿ, ‘ಎಲ್ಲ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಕಂಟ್ರೋಲ್‌ ರೂಮ್‌ನಿಂದ ನಿರ್ವಹಣೆ ಮಾಡಲಾಗು­ವುದು. ಪೊಲೀಸರಿಂದ ಸಾರ್ವಜನಿಕರಿಗೆ ತೊಂದರೆಯಾದರೆ, ಸಿಬ್ಬಂದಿ ದೂರು ದಾಖಲಿಸಿಕೊಳ್ಳುವಲ್ಲಿ ನಿರ್ಲಕ್ಷ್ಯ ತೋರಿ­ದರೆ ಅಂತಹ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗುವುದು. ಡಿಸೆಂಬರ್‌ ಒಳಗೆ ಎಲ್ಲ ಠಾಣೆಗಳಲ್ಲಿಯೂ ಕ್ಯಾಮೆರಾ­ಅಳವಡಿಸಲಾಗು­ವುದು’ ಎಂದರು.

‘ದೂರುದಾ­ರರು, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ  ಕ್ಯಾಮೆರಾ­ಗಳನ್ನು ಅಳ­ವಡಿಸಲಾಗುತ್ತಿದೆ. ಪ್ರಾಯೋ­ಗಿ­ಕವಾಗಿ ಮೂರು ಠಾಣೆ­ಗಳಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ’ ಎಂದು ಬಿ.ಪ್ಯಾಕ್‌ ಸದಸ್ಯರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT