ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಐಜಿ ಐಷಾರಾಮದ ಚಿತ್ರ: ವಿವಾದ ಸೃಷ್ಟಿಸಿದ ಪುತ್ರ!

Last Updated 29 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಜಮ್ಮು: ಜಮ್ಮು–ಕಾಶ್ಮೀರ ಡಿಐಜಿ ಶಕೀಲ್‌ ಅಹ್ಮದ್‌ ಬೇಗ್‌ ಅವರ ಉದ್ಯಮಿ ಪುತ್ರ ಟೋನಿ ಬೇಗ್‌, ತನ್ನ ತಂದೆಯ ಐಷಾರಾಮಿ ಬದುಕನ್ನು ತೋರಿ­ಸುವ ಭಾವಚಿತ್ರಗಳನ್ನು ಸಾಮಾ­ಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಸರ್ಕಾರ ತನ್ನ ತಂದೆಗೆ ಕೊಟ್ಟಿರುವ ವಿಶೇಷ ಸೌಲಭ್ಯಗಳ ಬಗ್ಗೆ ಜಂಬ ಕೊಚ್ಚಿಕೊಳ್ಳುವ ರೀತಿಯಲ್ಲಿ ಟೋನಿ ಈ ಚಿತ್ರಗಳನ್ನು ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದಾರೆ.

  ಸೋಫಾ ಮೇಲೆ ಆರಾಮವಾಗಿ ಕೂತಿರುವ ಡಿಐಜಿ ಅವರ ಬೂಟಿನ ಲೇಸ್‌ ಕಟ್ಟುವು­ದಕ್ಕೆ  ಪೊಲೀಸ್‌ ಸಿಬ್ಬಂದಿ­ಯೊಬ್ಬರು  ಸಹಾಯ ಮಾಡುತ್ತಿರುವ ಚಿತ್ರವನ್ನು 670 ಮಂದಿ ಇಷ್ಟಪಟ್ಟಿದ್ದಾರೆ. ‘....ರಿಯಲ್‌ ಕಿಂಗ್‌ ಮೈ ಡ್ಯಾಡ್‌!!  ನನ್ನ ತಂದೆ ತಮ್ಮ ಬೂಟಿನ ಲೇಸ್‌ ತಾವೇ ಕಟ್ಟಿಕೊಂಡಿದ್ದು ೧೫ ವರ್ಷಗಳ ಹಿಂದೆ....’ ಎನ್ನುವ ಶೀರ್ಷಿಕೆಯ ಈ ಚಿತ್ರಕ್ಕೆ 13 ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಡಿಐಜಿಗೆ ವ್ಯಕ್ತಿಯೊಬ್ಬ ಕೊಡೆ ಹಿಡಿದು ಬರುತ್ತಿರುವ ಚಿತ್ರವನ್ನು ಕೂಡ  ಟೋನಿ ಅಪ್‌ಲೋಡ್‌ ಮಾಡಿದ್ದಾರೆ. ಇನ್ನೊಂದು ಚಿತ್ರದಲ್ಲಿ ಪುತ್ರ ಟೋನಿ ಜತೆ ಕಟ್ಟಡವೊಂದರಿಂದ ಹೊರಬರು­ತ್ತಿರುವ ಡಿಐಜಿ ಸುತ್ತಮುತ್ತ ಪೊಲೀಸರು ಇರುವುದನ್ನು ಕಾಣಬಹುದು. 

ಡಿಐಜಿ ಪ್ರತಿಕ್ರಿಯೆ: ‘ನಾನು ಗೌರವ ಘನತೆ­ಯಿಂದ ಬದುಕಿದವನು. ಈಗ ನಿವೃ­ತ್ತಿ­ಯಾಗುತ್ತಿದ್ದೇನೆ. ಯಾರೋ ಕಿಡಿಗೇಡಿ­ಗಳು ಈ ಕುಚೇಷ್ಟೆ ಮಾಡಿ­ದ್ದಾರೆ’ ಎಂದು ಡಿಐಜಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್‌ಸ್ಟಾಗ್ರಾಂ ಖಾತೆ ತಮ್ಮ ಮಗನಿಗೆ ಸೇರಿದ್ದಲ್ಲ ಎಂದೂ ಅವರು ಸ್ಪಷ್ಟನೆ ನೀಡಿ­ದ್ದಾರೆ.  ಪೊಲೀಸ್‌ ಸಿಬ್ಬಂದಿ­ಯೊ­ಬ್ಬರು ತಮ್ಮ ಬೂಟಿನ ಲೇಸ್‌ ಕಟ್ಟುತ್ತಿ­ರುವ ಚಿತ್ರದ ಬಗ್ಗೆ ಸುದ್ದಿವಾಹಿನಿ­ಯೊಂದು ಕೇಳಿದ ಪ್ರಶ್ನೆಗೆ,  ‘ಷೂ ಖರೀದಿಸುವಾಗ ಅಂಗಡಿಯಾತ ಕಾಲಿಗೆ ಷೂ ಹಾಕಿಸಿ ನೋಡುವುದಿಲ್ಲವೇ’ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರ ಮತ್ತು ಪೊಲೀಸ್‌ ಇಲಾಖೆ ಈ ಬಗ್ಗೆ ಅಂತರ ಕಾಯ್ದು­ಕೊಂಡಿದೆ. ಜಾಲತಾಣಗಳ ಬಳಕೆದಾ­ರರು ಈ ಚಿತ್ರಗಳನ್ನು ನೋಡಿ ಆಕ್ರೋಶ­ಗೊಂಡಿದ್ದು, ಡಿಐಜಿ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿದ್ದಾರೆ. ‘ಇದು ಅಸಹ್ಯಕರ! ಹಿಂದುಳಿದ ದೇಶಗಳಲ್ಲಿ ಪೊಲೀಸರು ಈ ರೀತಿ ವರ್ತಿಸುತ್ತಾರೆ. ಡಿಐಜಿಗೆ ನಾಚಿಕೆ ಆಗ­ಬೇಕು’ ಎಂದು ಹೀನಾ ಖಾನ್‌ ಎಂಬು­ವವರು ಜಾಲತಾಣದಲ್ಲಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT