ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೈನಾಮೋಸ್‌ ಜಯಭೇರಿ

ಐಎಸ್‌ಎಲ್‌ ಫುಟ್‌ಬಾಲ್‌: ಚೆನ್ನೈಯಿನ್‌ಗೆ ನಿರಾಸೆ
Last Updated 25 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಮೋಘ ಪ್ರದರ್ಶನ ತೋರಿದ ಡೆಲ್ಲಿ ಡೈನಾಮೋಸ್‌ ತಂಡ ಇಂಡಿಯನ್‌ ಸೂಪರ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಸುಲಭ ಗೆಲುವು ಪಡೆಯಿತು. ಜವಾಹರಲಾಲ್‌ ನೆಹರು ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಡೈನಾಮೋಸ್‌ 4–1 ಗೋಲುಗಳಿಂದ ಚೆನ್ನೈಯಿನ್‌ ಎಫ್‌ಸಿ ತಂಡವನ್ನು ಮಣಿಸಿತು.

ವಿಮ್‌ ರೇಮೇಕರ್ಸ್‌ ಅವರು ಪಂದ್ಯದ ಎರಡನೇ ನಿಮಿಷದಲ್ಲಿ ಗೋಲು ಗಳಿಸಿ ಡೈನಾಮೋಸ್‌ಗೆ ಮುನ್ನಡೆ ತಂದಿತ್ತರು. 21ನೇ ನಿಮಿಷದಲ್ಲಿ ಮ್ಯಾಡ್ಸ್‌ ಜುಂಕರ್‌ ಚೆಂಡನ್ನು ಗುರಿ ಸೇರಿಸಿದರು. ಇದರಿಂದ ವಿರಾಮದ ವೇಳೆಗೆ ಡೆಲ್ಲಿಯ ತಂಡ 2–0 ರಲ್ಲಿ ಮುನ್ನಡೆ ಸಾಧಿಸಿತ್ತು. 69ನೇ ನಿಮಿಷದಲ್ಲಿ ಚೆನ್ನೈಯಿನ್‌ ತಂಡದ ಬ್ರೆಜಿಲ್‌ನ ಆಟಗಾರ ಎಲಾನೊ ಬ್ಲುಮೆರ್‌ ಗೋಲು ಗಳಿಸಿ  ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿದರು.

ಆದರೆ ಡೈನಾಮೋಸ್‌ ತಂಡ 79ನೇ ನಿಮಿಷದಲ್ಲಿ ಮೂರನೇ ಗೋಲು ಗಳಿ ಸಿತು. ಬ್ರೂನೊ ಅರಿಯಾಸ್‌ ಚೆಂಡನ್ನು ಗುರಿ ಸೇರಿಸಲು ಯಶಸ್ವಿ ಯಾದರು. 90ನೇ ನಿಮಿಷದಲ್ಲಿ ಗುಸ್ತಾವೊ ಡಾಸ್‌ ಸಂಟೋಸ್‌ ಮತ್ತೊಂದು ಗೋಲು ಗಳಿಸಿ ಡೈನಾಮೊಸ್‌ ಗೆಲುವಿನ ಅಂತರವನ್ನು ಹೆಚ್ಚಿಸಿದರು. ಈ ಗೆಲುವಿನ ಮೂಲಕ ಡೈನಾಮೋಸ್‌ ಮೂರು ಪಂದ್ಯಗಳಿಂದ ಐದು ಪಾಯಿಂಟ್‌ ಕಲೆಹಾಕಿದೆ. ಚೆನ್ನೈಯಿನ್‌ ಇಷ್ಟೇ ಪಂದ್ಯಗಳಿಂದ ಆರು ಪಾಯಿಂಟ್‌ ಹೊಂದಿದೆ.

ಇಂದಿನ ಪಂದ್ಯಗಳು
ಅಥ್ಲೆಟಿಕೊ ಡಿ ಕೋಲ್ಕತ್ತ– ಕೇರಳ ಬ್ಲಾಸ್ಟರ್ಸ್‌ ಎಫ್‌ಸಿ
ಆರಂಭ: ಸಂಜೆ 4.30
ಎಫ್‌ಸಿ ಪುಣೆ ಸಿಟಿ– ಎಫ್‌ಸಿ ಗೋವಾ
ಆರಂಭ: ರಾತ್ರಿ 7.00ಕ್ಕೆ

ಫಿಕ್ರು ಲೆಮೆಸ್ಸಾ, ಪೈರೆಸ್‌ಗೆ ನಿಷೇಧ
ನವದೆಹಲಿ (ಐಎಎನ್‌ಎಸ್‌): ಗೋವಾದಲ್ಲಿ ಗುರುವಾರ ನಡೆದ ಐಎಸ್‌ಎಲ್‌ ಪಂದ್ಯದ ವೇಳೆ ಅಶಿಸ್ತು ತೋರಿದ್ದ ಆಟಗಾರರ ಮೇಲೆ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ಕಠಿಣ ಕ್ರಮ ಕೈಗೊಂಡಿದೆ.
ಎಫ್‌ಸಿ ಗೋವಾ ತಂಡದ ರಾಬರ್ಟ್‌ ಪೈರೆಸ್‌ ಮತ್ತು ಅಥ್ಲೆಟಿಕೊ ಡಿ ಕೋಲ್ಕತ್ತ ತಂಡದ ಫಿಕ್ರು ಲೆಮೆಸ್ಸಾ ಅವರಿಗೆ ತಲಾ ರೂ 5 ಲಕ್ಷ ದಂಡ ವಿಧಿಸಲಾಗಿದೆ. ಜತೆಗೆ ಎರಡು ಪಂದ್ಯಗಳ ನಿಷೇಧ ಶಿಕ್ಷೆ ಹೇರಲಾಗಿದೆ.
ಕೋಲ್ಕತ್ತ ತಂಡದ ಕೋಚ್‌ ಆಂಟೋನಿಯೊ ಲೊಪೆಜ್‌ ಹಬಸ್‌ ಅವರಿಗೆ ರೂ 5 ಲಕ್ಷ ದಂಡ ಹಾಗೂ ನಾಲ್ಕು ಪಂದ್ಯಗಳ ನಿಷೇಧ ಹೇರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT