ಬೆಂಗಳೂರು: ‘ಮಹಾತ್ಮ ಗಾಂಧಿ ಮತ್ತು ಮಹಮ್ಮದ್ ಅಲಿ ಜಿನ್ನಾ ಭಾರತ ಮತ್ತು ಪಾಕಿಸ್ತಾನದ ರಾಷ್ಟ್ರ ಪಿತರಾಗದೇ ಹೋಗಿದ್ದರೆ ಜತೆಯಾಗಿ ವಕೀಲಿವೃತ್ತಿ ನಡೆಸುವ ಮೂಲಕ ದಕ್ಷಿಣ ಆಫ್ರಿಕಾದಲ್ಲಿ ಬಹುಬೇಡಿಕೆ ವಕೀಲರಾಗಿರುತ್ತಿದ್ದರು’ ಎಂದು ಖ್ಯಾತ ಅಂಕಣಕಾರ ರಾಮಚಂದ್ರ ಗುಹಾ ಚಟಾಕಿ ಹಾರಿಸಿದರು.

ತಮ್ಮದೇ ‘ಗಾಂಧಿ ಬಿಫೋರ್ ಇಂಡಿಯಾ’ ಕೃತಿ ಬಿಡುಗಡೆ ಸಮಾರಂ ಭದಲ್ಲಿ ಶುಕ್ರವಾರ ಅವರು ಮಾತನಾಡಿದರು.

‘ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಅವರಿಗೆ ಭಾರತೀಯ ವ್ಯಾಪಾರಿಗಳ ಕೈತುಂಬಾ ಪ್ರಕರಣಗಳು ಇದ್ದವು. ಗುಜರಾತಿಗಳು ಮತ್ತು ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಮತ್ತೊಬ್ಬ ವಕೀಲನನ್ನು ಕರೆತರುವ ಭರವಸೆ ಯನ್ನೂ ತಮ್ಮ ಕಕ್ಷಿದಾರರಿಗೆ ಗಾಂಧಿ ನೀಡಿದ್ದರು. ಅದೇ ಅವಧಿಯಲ್ಲಿ ಜಿನ್ನಾ ಮತ್ತು ಗಾಂಧಿ ನಡುವೆ ಪತ್ರ ವ್ಯವ ಹಾರ ನಡೆದಿತ್ತು. ಆ ಪತ್ರಗಳಲ್ಲಿ ವಕೀಲಿ ವೃತ್ತಿಗೆ ಸಂಬಂಧಿಸಿದಂತೆ ಚರ್ಚೆ ನಡೆ ಸಿದ ಮಾಹಿತಿ ಇದೆ’ ಎಂದು ವಿವರಿಸಿದರು.

‘ಲಂಡನ್ನಿನಲ್ಲಿ ಗಾಂಧಿ ಕಟ್ಟಿದ್ದ ಸಸ್ಯಾ ಹಾರಿಗಳ ಸೊಸೈಟಿ ದಸರಾ ಆಚರಿಸಿ ದಾಗ ಗಾಂಧಿ ಮತ್ತು ವಿನಾಯಕ ಸಾವರ್ಕರ್ ಪರಸ್ಪರ ಭೇಟಿಯಾ ಗಿದ್ದರು. ಚತುರ ವಾಗ್ಮಿಯಾಗಿದ್ದ ಸಾವ ರ್ಕರ್ ಅವರ ಭಾಷಣವೇ ಎಲ್ಲರನ್ನೂ ಆಕರ್ಷಿಸಿತ್ತು’ ಎಂದು ನಕ್ಕರು ಗುಹಾ.
‘ರಾಜಕೀಯ ನಾಯಕನಾಗಿ, ಸಮಾಜ ಸುಧಾರಕನಾಗಿ, ವಕೀಲನಾಗಿ ಗಾಂಧಿ ಗೆದ್ದರೂ ಒಬ್ಬ ಪತಿಯಾಗಿ, ಅಪ್ಪನಾಗಿ ತಮ್ಮ ಹೊಣೆ ನಿಭಾಯಿ ಸುವಲ್ಲಿ ಸೋತರು. ತಮ್ಮ ಹಿರಿಯ ಪುತ್ರ ಹರಿಲಾಲ್ ತಮ್ಮ ಇಚ್ಛೆಯಂತೆ ನಡೆಯದೆ ಪ್ರೀತಿಸಿ ಮದುವೆಯಾದ ಮತ್ತು ಬ್ರಹ್ಮಚರ್ಯ ಪಾಲಿಸದ ತಪ್ಪಿಗೆ ಅವರ ಜತೆಗಿನ ಸಂಬಂಧವನ್ನೇ ಕಡಿದುಕೊಂಡರು’ ಎಂದು ಹೇಳಿದರು.

‘ಗಾಂಧಿ ಅವರಿಗೆ ಕ್ರೀಡೆಯಲ್ಲಿ ಅಷ್ಟಾಗಿ ಆಸಕ್ತಿ ಇರಲಿಲ್ಲ. ಆದರೆ, ಜಾತಿ ವಿರುದ್ಧದ ಅವರ ಹೋರಾಟ ಕ್ರೀಡೆ ಮೇಲೂ ಧನಾತ್ಮಕ ಪರಿಣಾಮ ಬೀರಿದೆ. ದಲಿತ ಸಮುದಾಯದಿಂದ ಕ್ರಿಕೆಟ್ ಪಟುಗಳು ಉದಯಿಸಲು ಕಾರ ಣವಾಗಿದೆ. ಗಾಂಧಿ ವಿಷಯವಾಗಿ ನನಗೆ ಆಸಕ್ತಿ ಬೆಳೆಯಲು ಈ ಸಂಗತಿಯೇ ಕಾರಣವಾಗಿದೆ’ ಎಂದರು.

‘ಗಾಂಧಿ ಬರೆದ ಪತ್ರಗಳ ವಿಷಯ ವಾಗಿ ಎಲ್ಲರಿಗೂ ತಿಳಿದಿದೆ. ಆದರೆ, ಗಾಂಧಿ ಅವರಿಗೆ ಬಂದ ಪತ್ರಗಳ ಮೂಲಕ ಅವರ ವ್ಯಕ್ತಿತ್ವ ಹುಡುಕುವ ಪ್ರಯತ್ನವನ್ನು ನಾನು ಮಾಡಿದೆ. ಬ್ರಿಟಿಷ್ ಅಧಿಕಾರಿಗಳು ಅವರ ನಾಯ ಕತ್ವವನ್ನು ಮೆಚ್ಚಿ ಬರೆದ ಪತ್ರಗಳು ಗಾಂಧಿ ಅವರ ಯಶಸ್ಸಿನ ಕಥೆಗೆ ಬಣ್ಣ ಹಚ್ಚುತ್ತವೆ’ ಎಂದು ವಿಶ್ಲೇಷಿಸಿದರು. ‘ಗಾಂಧಿ ಅವರ ಹೆಡ್ ಮಾಸ್ಟರ್ ಬರೆದ ಪತ್ರವೂ ಸಾಬರಮತಿ ಆಶ್ರಮ ದಲ್ಲಿದೆ. ಅವರ ಗೈರುಹಾಜರಿ ಕುರಿತು ಅಸಮಾಧಾನ ವ್ಯಕ್ತಪಡಿಸಿ ಬರೆದ ಆ ಪತ್ರದಲ್ಲಿ ಅಂಕ ಕಡಿಮೆ ಗಳಿಸಿದ ಉಲ್ಲೇಖವೂ ಇದೆ’ ಎಂದು ನೆನೆದರು.

‘ಗಾಂಧಿ ಬದುಕಿನ ಅವಧಿಯಲ್ಲಿ ಪತ್ರಿಕೆಗಳಲ್ಲಿ ಬಂದ ವರದಿಗಳನ್ನೂ ನಾನು ಅಧ್ಯಯನ ಮಾಡಿದ್ದೇನೆ. ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಹೋರಾಟದ ಕುರಿತು ಬಂದ ವರದಿಗಳನ್ನು ಸ್ವತಃ ಗಾಂಧಿ ಸಂಗ್ರಹಿಸಿದ್ದರು’ ಎಂದು ಅವರು ಹೇಳಿದರು.

‘ಹೆನ್ರಿ ಮತ್ತು ಮಿಲಿ ಪೊಲಾಕ್, ರಾಯ್‌ಚಂದ್ ಭಾಯ್ ಹಾಗೂ ಮೆಹ್ತಾ ಅವರಂತಹ ಅತ್ಯುತ್ತಮ ಸ್ನೇಹಿ ತರ ಸಖ್ಯದಲ್ಲಿ ಗಾಂಧಿ ಮಹಾತ್ಮನಾಗಿ ಬೆಳೆದರು. ಗಾಂಧಿ ಅವರಿಗೆ ಮೊದಲು ಮಹಾತ್ಮ ಎಂದು ಕರೆದಿದ್ದು ರವೀಂದ್ರ ನಾಥ್ ಟ್ಯಾಗೋರ್ ಎಂಬುದು ಇತಿ ಹಾಸದಲ್ಲಿ ದಾಖಲಾಗಿದೆ ಯಾದರೂ ಮೊದಲು ಹಾಗೆ ಕರೆದಿದ್ದು ಅವರ ಸ್ನೇಹಿತ ಮೆಹ್ತಾ’ ಎಂದು ತಿಳಿಸಿದರು.
ಹಿರಿಯ ಸಾಹಿತಿ ಡಾ. ಗಿರೀಶ ಕಾರ್ನಾಡ ಪುಸ್ತಕ ಬಿಡುಗಡೆ ಮಾಡಿದರು.

* ಗಾಂಧಿ ಬಿಫೋರ್ ಇಂಡಿಯಾ ಪ್ರಕಾಶಕರು: ಪೆಂಗ್ವಿನ್ ಬುಕ್ಸ್ ಇಂಡಿಯಾ, ಪುಟಗಳು: 640 ಬೆಲೆ: ರೂ 899

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.