ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ಬೆಳೆ: ತೊಂದರೆ ನೂರೆಂಟು

Last Updated 21 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಮೈಸೂರು ಮತ್ತು ಹಾಸನ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ವ್ಯಾಪಕವಾಗಿ ತಂಬಾಕನ್ನು ಬೆಳೆಯಲಾಗುತ್ತಿದೆ. ಇದರ ಎಲೆಗಳನ್ನು ಹದ ಮಾಡಲು ಅಪಾರ ಪ್ರಮಾಣದ ಸೌದೆಯನ್ನು  ಸುಡಲಾ­ಗುತ್ತಿದೆ. ಇದರಿಂದ  ಮರ, ಅರಣ್ಯಗಳು ಬರಿದಾಗುತ್ತಿವೆ.

ಒಂದು ಕಡೆ ಪೊಟ್ಟಣದ ಮೇಲೆ ‘ತಂಬಾಕು ಸೇವನೆ ಕ್ಯಾನ್ಸರ್‌ಗೆ ಕಾರಣ’ ಎಂದು ಚಿತ್ರಸಹಿತ ಮುದ್ರಿಸಿ ಮತ್ತೊಂದು ಕಡೆ ಬೆಳೆ ಬೆಳೆಯಲು ಪರವಾನಗಿ ನೀಡುತ್ತಿರುವುದು ಸರ್ಕಾರದ ದ್ವಂದ್ವ ನೀತಿಗೆ ನಿದರ್ಶನ. ವಿದ್ಯಾರ್ಥಿ­ಗಳು ಕದ್ದುಮುಚ್ಚಿ ಬೀಡಿ, ಸಿಗರೇಟು ಸೇದು­ವಾಗ ಸಿಕ್ಕಿಬೀಳುತ್ತಿದ್ದಾರೆ.

ಸೌದೆ ಸುಡುವುದರಿಂದ ಮತ್ತು ಧೂಮಪಾನ­ದಿಂದ ವಾಯುಮಾಲಿನ್ಯ ಆಗುತ್ತದೆ. ವಾತಾವರಣದ ಉಷ್ಣತೆ ಹೆಚ್ಚಾಗಿ ಮೋಡಗಳು ರೂಪುಗೊಳ್ಳುವುದಿಲ್ಲ. ಇಷ್ಟೇ ಅಲ್ಲದೆ ಮರಗಳು ಖಾಲಿಯಾ­ಗುತ್ತಿ­ರುವುರಿಂದ ನೆರೆಯ ತಾಲ್ಲೂ­ಕುಗಳಲ್ಲಿ ರೂಢಿ­ಯಂತೆ ಮಳೆಯಾಗದೆ ಬರ ಉಂಟಾ­ಗಿದೆ.

ಈ ಸಂದರ್ಭ­ದಲ್ಲಿ ತಂಬಾಕು ಉತ್ಪನ್ನ ನಿಷೇಧಿಸಲು ಸುಪ್ರೀಂ­ಕೋರ್ಟ್, ರಾಜ್ಯದ ಅಭಿಪ್ರಾಯ ಕೇಳಿದೆ. ಇದರ ದುಷ್ಪರಿಣಾಮಗಳನ್ನು ಮನಗಂಡು ತಂಬಾಕು ಉತ್ಪನ್ನಗಳನ್ನು ನಿಷೇಧಿಸುವ ನಿಟ್ಟಿನಲ್ಲಿ ಚಿಂತಿಸಬೇಕಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT