ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ರಹಿತ ‘ಪಾನ್ ಮಸಾಲಾ’ ಮಾರುಕಟ್ಟೆಗೆ

Last Updated 30 ಜನವರಿ 2015, 19:30 IST
ಅಕ್ಷರ ಗಾತ್ರ

ಶಿರಸಿ (ಉತ್ತರ ಕನ್ನಡ): ರಾಜ್ಯದ ಪ್ರಮುಖ ಅಡಿಕೆ ವಹಿವಾಟು ಸಂಸ್ಥೆಗಳಲ್ಲಿ ಒಂದಾಗಿರುವ ಶಿರಸಿಯ ತೋಟಗಾರ್ಸ್‌ ಕೋ ಆಪರೇಟಿವ್‌ ಸೇಲ್ಸ್‌ ಸೊಸೈಟಿಯು (ಟಿಎಸ್‌ಎಸ್‌) ತಂಬಾಕು ರಹಿತ ಪಾನ್‌ ಮಸಾಲಾ ಪೊಟ್ಟಣ (ಪೌಚ್‌)ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

‘ಅಡಿಕೆ ಬೆಳೆಗಾರರಿಗೆ ಬೆನ್ನೆಲುಬಾಗಿ ನಿಂತಿರುವ ಟಿಎಸ್‌ಎಸ್‌, ಆರೋಗ್ಯಕ್ಕೆ ಹಾನಿಕಾರಕವಲ್ಲದ ಪಾನ್‌ ಮಸಾಲಾ ಪೌಚ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಸಹಕಾರಿ ಸಂಸ್ಥೆಯೊಂದು ಇಂತಹ ಉತ್ಪನ್ನ ಸಿದ್ಧಪಡಿಸಿರುವುದು ಅಪರೂಪವಾಗಿದೆ’ ಎಂದು ಶುಕ್ರವಾರ ಪಾನ್‌ ಮಸಾಲಾ ಪೌಚ್‌ಗಳನ್ನು ಬಿಡುಗಡೆಗೊಳಿಸಿದ ಟಿಎಸ್‌ಎಸ್‌ ಅಧ್ಯಕ್ಷ ಶಾಂತಾರಾಮ ಹೆಗಡೆ ಹೇಳಿದರು.

‘ಪ್ರಾಯೋಗಿಕವಾಗಿ ಹುಬ್ಬಳ್ಳಿ, ಗುಜರಾತ್‌ಗೆ ಎರಡು ಲಾರಿಗಳಷ್ಟು ಪೌಚ್‌ಗಳನ್ನು ಕಳುಹಿಸಲಾಗಿದೆ. ಆಂಧ್ರಪ್ರದೇಶ, ಗುಜರಾತ್‌, ರಾಜಸ್ತಾನ, ಗೋವಾ ಹಾಗೂ ದೇಶದ ಇನ್ನಿತರ ರಾಜ್ಯಗಳಲ್ಲಿ ‘ಟೈಗರ್‌ ಪಾನ್‌ ಮಸಾಲಾ’ ಬಿಡುಗಡೆ ಮಾಡುವ ಯೋಚನೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT