ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂತ್ರಿಕ ತೊಂದರೆ: ಕೂಡಂಕುಳಂ ಸ್ಥಾವರ ಕಾರ್ಯ ಸ್ಥಗಿತ

Last Updated 20 ಅಕ್ಟೋಬರ್ 2014, 11:42 IST
ಅಕ್ಷರ ಗಾತ್ರ

ಚೆನ್ನೈ (ಐಎಎನ್ಎಸ್): ತಮಿಳುನಾಡಿನಲ್ಲಿರುವ ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ ಮೊದಲ ಘಟಕದಲ್ಲಿ ಪ್ರಮುಖ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಘಟಕದ ಕಾರ್ಯಾಚರಣೆ  ಆರರಿಂದ ಎಂಟು ವಾರಗಳ ತನಕ ಸ್ಥಗಿತಗೊಳ್ಳಲಿದೆ  ಎಂದು ಭಾರತೀಯ  ಪರಮಾಣು ವಿದ್ಯುತ್‌ ಕಾರ್ಪೊರೇಷನ್‌ ಲಿಮಿಟೆಡ್  (ಎನ್‌ಪಿಸಿಐಎಲ್‌) ಸೋಮವಾರ ತಿಳಿಸಿದೆ.

‘ವಾಣಿಜ್ಯ ಕಾರ್ಯಾಚರಣೆಗೆ  ವಹಿಸುವ ಮುನ್ನ   ಟರ್ಬೈನ್‌ ಮತ್ತು ಅದರ ಜತೆಗಿನ ಇತರ ಭಾಗಗಳನ್ನು ಪರಿಶೀಲಿಸಲು  ಘಟಕವನ್ನು ಸ್ಥಗಿತಗೊಳಿಸುತ್ತಿದ್ದೇವೆ. ನಿರ್ವಹಣಾ ಕಾರ್ಯ ಪ್ರಗತಿಯಲ್ಲಿದ್ದು ಘಟಕವು ಶೀಘ್ರವೇ ಪುನಾರಂಭಗೊಳ್ಳಲಿದೆ.   ಕೆಲವು ಭಾಗಗಳನ್ನು ಬದಲಾಯಿಸುವ ಕಾರ್ಯ ಆರಂಭಗೊಂಡಿದೆ’ ಎಂದು ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರ ಯೋಜನೆಯ (ಕೆಎನ್‌ಪಿಪಿ) ತಾಣ ನಿರ್ದೇಶಕ ಆರ್. ಎಸ್. ಸುಂದರ್ ಅವರು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

  2013 ಸೆಪ್ಟೆಂಬರ್‌ 13ರಂದು ಈ ಪರಮಾಣು ವಿದ್ಯುತ್ ಸ್ಥಾವರ ಆರಂಭಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT