ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಪು ಒಪ್ಪಲ್ಲ: ಚೀನಾ ಸ್ಪಷ್ಟನೆ

Last Updated 30 ಜೂನ್ 2016, 19:30 IST
ಅಕ್ಷರ ಗಾತ್ರ

ಬೀಜಿಂಗ್‌ (ಪಿಟಿಐ): ದಕ್ಷಿಣ ಚೀನಾ ಸಮುದ್ರದ ವಿವಾದಕ್ಕೆ ಸಂಬಂಧಿಸಿದಂತೆ  ಅಂತರರಾಷ್ಟ್ರೀಯ ನ್ಯಾಯಮಂಡಳಿ ನೀಡುವ ತೀರ್ಪು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಚೀನಾ  ತಿಳಿಸಿದೆ.

‘ಫಿಲಿಪ್ಪಿನ್ಸ್‌ ಕೋರಿಕೆಯಂತೆ ನ್ಯಾಯಮಂಡಳಿಯನ್ನು ಏಕಪಕ್ಷೀಯವಾಗಿ ರಚಿಸಲಾಗಿದೆ.  ನ್ಯಾಯಮಂಡಳಿಗೆ ಈ ಪ್ರಕರಣದ ವಿಚಾರಣೆ ನಡೆಸುವ ಅಧಿಕಾರವೇ ಇಲ್ಲ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹಾಂಗ್‌ ಲೀ ತಿಳಿಸಿದ್ದಾರೆ.

‘2013ರಲ್ಲಿ ಫಿಲಿಪ್ಪಿನ್ಸ್‌ ನ್ಯಾಯಮಂಡಳಿ ರಚನೆ ಬಗ್ಗೆ ನಿರ್ಧಾರ ಕೈಗೊಂಡಿತು. ಆಗ ಈ ನ್ಯಾಯಮಂಡಳಿ ನಡೆಸುವ ವಿಚಾರಣೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಚೀನಾ ತಕ್ಷಣವೇ ಪ್ರತಿಕ್ರಿಯಿಸಿತ್ತು. ಈ ನಿಲುವನ್ನು ಹಲವಾರು ಬಾರಿ ವ್ಯಕ್ತಪಡಿಸಲಾಗಿತ್ತು’ ಎಂದು  ತಿಳಿಸಿದ್ದಾರೆ. ಜುಲೈ 12ರಂದು ಅಂತಿಮ ತೀರ್ಪು ನೀಡಲಾಗುವುದು ಎಂದು ನ್ಯಾಯಮಂಡಳಿ ಪ್ರಕಟಿಸಿರುವ ಬೆನ್ನಲ್ಲೇ ಚೀನಾ ಈ ಪ್ರತಿಕ್ರಿಯೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT