ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಗೆದು ಹಾಕುವ ಅಧಿಕಾರ ಯಾರಿಗೆ?

Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಪಶ್ಚಿಮ ಬಂಗಾಳ ಮಾನವ ಹಕ್ಕುಗಳ ಆಯೋ­ಗದ ಮುಖ್ಯಸ್ಥ ನಿವೃತ್ತ ನ್ಯಾಯ­ಮೂರ್ತಿ ಎ.ಕೆ. ಗಂಗೂಲಿ ರಾಜೀ­ನಾಮೆಗೆ ಒತ್ತಡ ಹೆಚ್ಚು­ತ್ತಿರುವ ಕಾರಣ ಅವರನ್ನು ಹುದ್ದೆ­­ಯಿಂದ ತೆಗೆದು ಹಾಕುವ ಅಧಿ­ಕಾರ ಯಾರಿ­ಗಿದೆ ಎಂಬ ಜಿಜ್ಞಾಸೆ ಆರಂಭವಾಗಿದೆ.

ಯಾವುದೇ ರಾಜ್ಯದ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥರನ್ನು ಆ ಹುದ್ದೆಯಿಂದ ತೆಗೆದು ಹಾಕುವ ಅಧಿಕಾರ ಇರುವುದು ರಾಷ್ಟ್ರಪತಿಗೆ ಮಾತ್ರ.  ಮಾನವ ಹಕ್ಕುಗಳ ಕಾಯ್ದೆಯ ಸೆಕ್ಷನ್‌  23ರ ಪ್ರಕಾರ ರಾಜ್ಯ  ಆಯೋಗದ ಮುಖ್ಯಸ್ಥರು ಅಥವಾ ಸದಸ್ಯರ ವಿರುದ್ಧದ ಅನುಚಿತ ವರ್ತನೆ, ಅಸಮರ್ಥತೆ ಆರೋಪ  ಸುಪ್ರೀಂಕೋರ್ಟ್‌ ತನಿಖೆ-­ಯಲ್ಲಿ ದೃಢ­ಪಟ್ಟರೆ ವರದಿ ಆಧಾರದ ಮೇಲೆ ರಾಷ್ಟ್ರ­ಪತಿ ಅವರನ್ನು ಹುದ್ದೆಯಿಂದ ಕಿತ್ತು ಹಾಕಬಹುದು.

ಆಯೋಗದ ಮುಖ್ಯಸ್ಥರು ಅಥವಾ ಸದಸ್ಯರ ವಿರುದ್ಧ ದೂರು ಬಂದಲ್ಲಿ  ತನಿಖೆ ನಡೆಸಲು ರಾಷ್ಟ್ರಪತಿ ಸುಪ್ರೀಂ­­ಕೋರ್ಟ್‌ಗೆ ಶಿಫಾರಸು ಮಾಡ­ಬ­ಹುದು. ಸುಪ್ರೀಂಕೋರ್ಟ್‌ ತನಿಖಾ ವರ­ದಿ ಶಿಫಾರಸು ಕೇಂದ್ರ ಸಚಿವ ಸಂಪುಟ ಮುಂದಿನ ಕ್ರಮಕ್ಕಾಗಿ ರಾಷ್ಟ್ರ­ಪತಿಗೆ ಕಳಿಸಿಕೊಡುತ್ತದೆ.  ಶಿಫಾ­ರಸಿನ ಆಧಾರದ ಮೇಲೆ ರಾಷ್ಟ್ರಪತಿ­ಗಳು ಆಯೋಗದ ಅಧ್ಯಕ್ಷರು, ಸದಸ್ಯ­ರನ್ನು ಹುದ್ದೆಯಿಂದ ತೆಗೆದು ಹಾಕಬಹುದು.

ಕಾಲಾವಕಾಶ ಕೋರಿಕೆ
ಕೋಲ್ಕತ್ತ (ಪಿಟಿಐ):
ರಾಷ್ಟ್ರೀಯ ಮಹಿಳಾ ಆಯೋಗದ ನೋಟಿ­ಸ್‌ಗೆ ಉತ್ತರಿಸಲು ನ್ಯಾ. ಗಂಗೂಲಿ ಅವರು ನಾಲ್ಕು ವಾರಗಳ ಕಾಲಾವ­ಕಾಶ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT