ಬೆಂಗಳೂರು: ‘ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ನೆನಪಿಗಾಗಿ ಮುಂದಿನ ವರ್ಷ ಮೂಡುಬಿದಿರೆಯಲ್ಲಿ ಆರ್ಕಿಡ್ ಸಂಶೋಧನಾ ಕೇಂದ್ರವನ್ನು ತೆರೆಯಲಾಗುವುದು’ ಎಂದು ಭಾರತ ಯಾತ್ರಾ ಕೇಂದ್ರದ ಅಧ್ಯಕ್ಷ ಬಿ.ಎಲ್.ಶಂಕರ್ ತಿಳಿಸಿದರು.

ಮಂಗಳವಾರ ನಗರದಲ್ಲಿ ತೇಜಸ್ವಿ ಅವರ 77ನೇ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ‘ಪೂರ್ಣಚಂದ್ರ ತೇಜಸ್ವಿ 77’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತೇಜಸ್ವಿಯವರ ವಿಚಾರಧಾರೆಗಳು ಸಂಶೋಧಕರಿಗೆ ದಾರಿ ತೋರಿಸುವ ಕೈಪಿಡಿಯಾಗಿವೆ. ಅವರ ದಾರಿಯಲ್ಲಿ ಪರಿಸರದ ಕುರಿತು ಸಂಶೋಧನೆ ಕೈಗೊಳ್ಳುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಸಂಶೋಧನಾ ಕೇಂದ್ರವನ್ನು ಸ್ಥಾಪನೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ‘ತೇಜಸ್ವಿಯವರ ಕರ್ವಾಲೊ ಕೃತಿಯು ಪ್ರತಿವರ್ಷ ಒಂದಲ್ಲ ಒಂದು ವಿಶ್ವವಿದ್ಯಾಲಯದ ವರ್ತಮಾನದ ಪ್ರಶ್ನೆಗಳನ್ನು ಎತ್ತುವ ಶ್ರೇಷ್ಠ ಕೃತಿ ಅದಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ನಂತರ ರೂಪಾಂತರ ರಂಗತಂಡ ತೇಜಸ್ವಿ ಕೃತಿ ಆಧಾರಿತ ‘ಕರ್ವಾಲೊ’ ನಾಟಕ ಪ್ರದರ್ಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.