ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ಪ್ರದೇಶ ಉಗ್ರರ ವಶಕ್ಕೆ

ಪೂರ್ವ ಸಿರಿಯಾದಲ್ಲಿ ದಾಳಿ
Last Updated 4 ಜುಲೈ 2014, 19:30 IST
ಅಕ್ಷರ ಗಾತ್ರ

ಡಮಾಸ್ಕಸ್‌ (ಐಎಎನ್‌ಎಸ್‌): ಪೂರ್ವ ಸಿರಿಯಾದ ಅತಿ ದೊಡ್ಡ ತೈಲ ಪ್ರದೇಶವನ್ನು ‘ಇಸ್ಲಾಮಿಕ್‌ ಸ್ಟೇಟ್‌ ಇನ್‌ ಇರಾಕ್‌ ಅಂಡ್‌ ಗ್ರೇಟರ್‌ ಸಿರಿಯಾ’ (ಐಎಸ್‌ಐಎಸ್‌) ಗುರು­ವಾರ ತನ್ನ ವಶಕ್ಕೆ ಪಡೆದಿವೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ತಿಳಿಸಿದ್ದಾರೆ. ಅಧಿಕ ಪ್ರಮಾಣದಲ್ಲಿ ತೈಲ ಲಭ್ಯ­ವಾಗುವ ಅಲ್ವೊಮರ್‌ ಪ್ರದೇಶವನ್ನು ಉಗ್ರರು ವಶಪಡಿಸಿಕೊಂಡಿದ್ದಾರೆ ಎಂದು ಕೆನಡಾ ಮೂಲದ ಮಾನವ ಹಕ್ಕುಗಳ ಸಂಘ­ಟ­ನೆಯ ಕಾರ್ಯ­ಕರ್ತರು ತಿಳಿಸಿದ್ದಾರೆ.

ಐಎಸ್ಐಎಸ್‌ ಮತ್ತು ನುಸ್ರಾ ಸಂಘ­ಟನೆಯು ಈ ಪ್ರದೇಶವನ್ನು ತನ್ನ ವಶಕ್ಕೆ ಪಡೆಯಲು ಹೋರಾಟ ನಡೆಸಿ­ದ್ದವು. ಅಂತಿಮವಾಗಿ ಐಎಸ್‌ಐಎಸ್‌ ಈ ಪ್ರದೇ­ಶದ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಪ್ರಾಂತ್ಯದ ಬಹುಭಾಗದಲ್ಲಿ ತೈಲ ದೊರೆಯುತ್ತಿದ್ದು, ಇದು ಸರ್ಕಾ­ರದ ನಿಯಂತ್ರಣದಲ್ಲಿದೆ. ದಿನಕ್ಕೆ 75 ಸಾವಿರ ಬ್ಯಾರಲ್‌  ತೈಲ ಇಲ್ಲಿ ಉತ್ಪಾದನೆ­ಯಾ­ಗು­ತ್ತದೆ.

ಕಳೆದ ನವೆಂಬರ್‌ನಲ್ಲಿ ಶಿಯಾ ಬಂಡು­ಕೋ­ರರು ಈ ಪ್ರದೇಶ­ವನ್ನು ಆಕ್ರಮಿ­ಸಿದ್ದರು. ಇತ್ತೀಚಿನ ವರದಿ ಪ್ರಕಾರ ಐಎಸ್‌ಐಎಸ್‌ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಜಿಹಾದಿ ಸಂಘಟನೆ­. ಸಣ್ಣ ರಾಷ್ಟ್ರಗಳಿಗೆ ಸರಿ ಸಮಾನ­ವಾದ ಬಜೆಟ್‌ನ್ನು ಹೊಂದಿದೆ ಎಂದು ಟಿ.ವಿ. ವಾಹಿನಿ­ಯೊಂದು ವರದಿ ಮಾಡಿದೆ.

ಈ ಸಂಘಟನೆ ಕಳೆದ ಹತ್ತು ವರ್ಷ­ಗಳಿಂದ ಕತಾರ್‌, ಸೌದಿ ಅರೆಬಿಯಾ ಮತ್ತು ಕುವೈತ್‌ನ ಶ್ರೀಮಂತ ವ್ಯಕ್ತಿಗ­ಳಿಂದ ಆರ್ಥಿಕ ನೆರವು ಪಡೆದಿದೆ. ಸುಮಾರು ₨ 12 ಸಾವಿರ ಕೋಟಿ­ಗಿಂತಲೂ ಹೆಚ್ಚು ಸಂಪನ್ಮೂಲ ಹೊಂದಿ­ದೆ ಎಂದು ವರದಿ ತಿಳಿಸಿದೆ. ಇಸ್ಲಾ­­ಮಿಕ್‌ ರಾಜ್ಯ ಸ್ಥಾಪನೆ ಮಾಡು­ವುದು ಐಎಸ್‌ಐಎಸ್‌ನ ಪ್ರಮುಖ ಗುರಿಯಾಗಿದೆ. ಇರಾಕ್‌ ಪ್ರಧಾನಿ ನೂರಿ ಅಲ್‌ ಮಲಿಕಿ ಮತ್ತು ಅಧ್ಯಕ್ಷ ಬಶರ್‌ ಅಲ್‌ ಅಸ್ಸಾದ್‌ ಅವರನ್ನು ಗುರಿಯಾಗಿ ಇರಿಸಿಕೊಂಡಿದೆ.

ಬಂಡುಕೋರರ ಯತ್ನ ವಿಫಲ
ಬಾಗ್ದಾದ್‌ (ಎಪಿ): ಅತಿದೊಡ್ಡ ತೈಲ ಸಂಸ್ಕರಣ ಘಟಕವನ್ನು ವಶಪಡಿಸಿ­ಕೊಳ್ಳಲು ಯತ್ನಿಸಿದ ಸುನ್ನಿ ಉಗ್ರರ ವಿರುದ್ಧ ಭದ್ರತಾ ಪಡೆಗಳು ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಠ 30 ಉಗ್ರರು ಮೃತಪಟ್ಟಿದ್ದಾರೆ. ಇರಾಕ್‌ನ ಭಯೋತ್ಪಾದಕ ನಿಗ್ರಹ ದಳದ ವಕ್ತಾರ ಸಾಬಾ ಅಲ್‌-ನೂಮಾನ್‌ ಈ ಮಾಹಿತಿ ನೀಡಿದ್ದಾರೆ.

ಉತ್ತರ ಬಾಗ್ದಾದ್‌ನ ಬೈಜಿ ತೈಲ ಸಂಸ್ಕರಣ ಘಟಕವನ್ನು ಕಾವಲು ಕಾಯು­ತ್ತಿದ್ದ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಮುಂದಾಗಿದ್ದ ಉಗ್ರರ ಎಂಟು ವಾಹನಗಳ ಮೇಲೆ ಪ್ರತಿದಾಳಿ ನಡೆಸಲಾಗಿದೆ. ಕಳೆದ ಎರಡು ವಾರಗಳಿಂದ ಉಗ್ರರು ಈ ತೈಲ ಸಂಸ್ಕರಣ ಘಟಕವನ್ನು ವಶಪಡಿಸಿಕೊಳ್ಳಲು ಯತ್ನಿಸುತ್ತಿದ್ದರು ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT