ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಗಿ ವಿರುದ್ಧ ಪ್ರಕರಣ ದಾಖಲು

ಆಗಸ್ಟಾವೆಸ್ಟ್‌ಲ್ಯಾಂಡ್ ಹಗರಣದಲ್ಲಿ ವಾಯುಪಡೆ ಮಾಜಿ ಮುಖ್ಯಸ್ಥ
Last Updated 4 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆಗಸ್ಟಾವೆಸ್ಟ್‌­ಲ್ಯಾಂಡ್‌್ ಹೆಲಿಕಾಪ್ಟರ್‌್ ಖರೀದಿ ಹಗರ­ಣಕ್ಕೆ ಸಂಬಂಧಿಸಿ  ಜಾರಿ ನಿರ್ದೇಶನಾ­ಲ­ಯವು (ಇಡಿ) ವಾಯು­ಪಡೆ ಮಾಜಿ ಮುಖ್ಯಸ್ಥ ಎಸ್.ಪಿ.ತ್ಯಾಗಿ  ಹಾಗೂ ಇತ­ರರ ವಿರುದ್ಧ ಅಕ್ರಮ ಹಣ ಚಲಾವಣೆ ಪ್ರಕರಣ ದಾಖಲಿಸಿದೆ.
ವಿದೇಶಿ ವಿನಿಮಯ ಕಾಯ್ದೆ ಅಡಿ ಜಾರಿ ನಿರ್ದೇಶನಾಲಯ ಈ ಮೊದಲು ಪ್ರಕರಣ ದಾಖಲಿಸಿತ್ತು.

ಅತಿಗಣ್ಯರ ಬಳಕೆಗಾಗಿ 12 ಹೆಲಿ­ಕಾಪ್ಟರ್‌ಗಳನ್ನು ಖರೀದಿಸುವ ವಾಯು­ಪಡೆ ಯೋಜನೆಯಲ್ಲಿ ಆಗಸ್ಟಾವೆಸ್ಟ್‌­ಲ್ಯಾಂಡ್, ತನ್ನ ಜತೆ  ₨  3,600 ಕೋಟಿ  ವ್ಯವಹಾರ ಕುದುರಿ­ಸಲು ಆಗ ವಾಯು­ಪಡೆ ಮುಖ್ಯಸ್ಥರಾ­ಗಿದ್ದ ಎಸ್.ಪಿ.­ತ್ಯಾಗಿ ಹಾಗೂ ಅವರ ಸಂಬಂಧಿ­­ಗಳಿಗೆ ಮಧ್ಯ­ವರ್ತಿ­ಗಳ ಮೂಲಕ  ₨362 ಕೋಟಿ  ಲಂಚ ನೀಡಿದೆ ಎಂಬ ಆರೋಪ ಇದೆ. ಲಂಚಕ್ಕೆ ಬಳ­ಸಿದ ‘ಅಕ್ರಮ ಹಣ’ದ ಮೂಲ ಪತ್ತೆ ಮಾಡು­ವುದು ಜಾರಿ ನಿರ್ದೇಶನಾ­ಲ­ಯದ ಉದ್ದೇಶವಾಗಿದೆ. ಹಾಗಾಗಿ ತ್ಯಾಗಿ ಮತ್ತಿತರರ ವಿರುದ್ಧ ಅಕ್ರಮ ಹಣ ಚಲಾವಣೆ ಪ್ರಕರಣ ದಾಖಲಿಸಿದೆ.

ಸಿಬಿಐ ದೂರನ್ನು ಪರಿಗಣಿಸಿ ಜಾರಿ ನಿರ್ದೇಶನಾಲಯವು  ತ್ಯಾಗಿ, ಅವರ ಕುಟುಂಬ ಸದಸ್ಯರು, ಯೂರೋಪ್‌ ಪ್ರಜೆ­ಗಳಾದ ಕಾರ್ಲೊ ಗೆರೊಸಾ, ಕ್ರಿಶ್ಚಿಯನ್‌್ ಮೈಕೆಲ್‌, ಗೈಡೊ ಹಶ್ಕೆ ಮತ್ತು ಇಟಲಿ ಮೂಲದ ಫಿನ್‌ಮೆ­ಕಾ­ನಿಕಾ, ಬ್ರಿಟನ್‌ನ ಆಗಸ್ಟಾವೆಸ್ಟ್‌ಲ್ಯಾಂಡ್‌್ ಹಾಗೂ ಚಂಡೀಗಡ ಮೂಲದ ಐಡಿಎಸ್‌ ಇನ್ಫೊಟೆಕ್‌್ ಮತ್ತು ಏರೊ­ಮ್ಯಾಟ್ರಿಕ್ಸ್‌ ವಿರುದ್ಧ ಆರೋಪ ದಾಖಲಿಸಿದೆ.

ಗೋವಾ ರಾಜ್ಯಪಾಲರ ಹೇಳಿಕೆ ದಾಖಲು: ಗೋವಾ ರಾಜ್ಯಪಾಲ ಬಿ.ವಿ.­ವಾಂಚೂ ಅವರನ್ನು ಈ ಪ್ರಕರಣದ ಸಾಕ್ಷಿ­ಯಾಗಿ ಪರಿಗಣಿಸಿರುವ ಸಿಬಿಐ, ಅವರಿಂದ ಶುಕ್ರವಾರ ಹೇಳಿಕೆ ದಾಖಲಿಸಿ­ಕೊಂಡಿದೆ.

2005ರಲ್ಲಿ ನಡೆದ ಸಭೆಯಲ್ಲಿ,  ಹೆಲಿ­ಕಾಪ್ಟರ್‌ಗಳು ಹಾರಾಡುವ ಗರಿಷ್ಠ ಎತ್ತರದ ಮಿತಿಯನ್ನು 18,000 ಅಡಿ­ಯಿಂದ 15,000 ಅಡಿಗೆ ಇಳಿಸಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಇದ­ರಿಂದಾಗಿಯೇ ಟೆಂಡರ್ ಪ್ರಕ್ರಿಯೆ­ಯಲ್ಲಿ ಆಗಸ್ಟಾವೆಸ್ಟ್‌ಲ್ಯಾಂಡ್ ಪಾಲ್ಗೊ­ಳ್ಳಲು ಸಾಧ್ಯವಾಯಿತು. ಈ ಸಭೆ­ಯಲ್ಲಿ ವಾಂಚೂ  ಕೂಡ ಇದ್ದರು ಎಂಬ ಕಾರಣಕ್ಕೆ ತನಿಖಾ ಸಂಸ್ಥೆ  ಇವರನ್ನು ಪ್ರಶ್ನಿಸಿದೆ.

ರಾಜೀನಾಮೆ: ಸಿಬಿಐನಿಂದ ಪ್ರಶ್ನೆಗೊಳಪಟ್ಟ ಬೆನ್ನಲ್ಲಿಯೇ ಗೋವಾ ರಾಜ್ಯಪಾಲ ಬಿ.ವಿ.ವಾಂಛೂ ರಾಜೀನಾಮೆ ನೀಡಿದ್ದಾರೆ. ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್‌್ ಗೋಸ್ವಾಮಿ ಸೂಚನೆ ಮೇರೆಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT