ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾಕ್ಕೆ 257 ರನ್‌ ಭರ್ಜರಿ ಗೆಲುವು

Last Updated 27 ಫೆಬ್ರುವರಿ 2015, 11:28 IST
ಅಕ್ಷರ ಗಾತ್ರ

ಸಿಡ್ನಿ: ಶುಕ್ರವಾರ ಇಲ್ಲಿ ನಡೆದ ವಿಶ್ವಕಪ್‌ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವೆಸ್ಟ್‌ಇಂಡೀಸ್‌ ವಿರುದ್ಧ 257 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

ದಕ್ಷಿಣ ಆಫ್ರಿಕಾ ನೀಡಿದ 408 ರನ್‌ಗಳ ಬೃಹತ್‌ ಸವಾಲು ಬೆನ್ನೆಟ್ಟಿದ ವೆಸ್ಟ್‌ಇಂಡಿಸ್‌ಗೆ  33.1 ಓವರ್‌ಗಳಲ್ಲಿ ಎಲ್ಲ ವಿಕೆಟ್‌ ಕಳೆದುಕೊಂಡು 151 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಇಮ್ರಾನ್‌ ತಾಹಿರ್‌ ಬೌಲಿಂಗ್‌ ದಾಳಿಗೆ ತತ್ತರಿಸಿದ ವಿಂಡೀಸ್‌ ಪಡೆ  257 ರನ್‌ ಭಾರಿ ಅಂತರದಿಂದ ಸೋಲೊಪ್ಪಿಕೊಂಡಿತು. 10 ಓವರ್‌ ಬೌಲಿಂಗ್‌ ಮಾಡಿದ ತಾಹಿರ್‌ 45 ರನ್‌ ನೀಡಿ ಪ್ರಮುಖ 5 ವಿಕೆಟ್‌ ಕೆಡವಿದರು.

ವಿಂಡೀಸ್‌ ಪರ ಸ್ಮಿತ್‌ (31), ರಾಮ್‌ದೀನ್‌ (22), ಹೋಲ್ಡರ್‌ (56) ಮತ್ತು ಕೊನೆಯಲ್ಲಿ ಟೇಲರ್‌ 15 ರನ್‌ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳು ಒಂದಂಕಿ ಗಡಿಯನ್ನೂ ದಾಟಲಿಲ್ಲ. ವೆಸ್ಟ್‌ಇಂಡೀಸ್‌ನ ಬ್ಯಾಟಿಂಗ್‌ ಭರವಸೆ ಎನಿಸಿದ್ದ ಕ್ರೀಸ್‌ ಗೇಲ್‌ 3 ರನ್‌ ಗಳಿಸಿ ಅಬ್ಬಾಟ್‌ಗೆ ವಿಕೆಟ್‌ ಒಪ್ಪಿಸುವುದರೊಂದಿಗೆ ತಂಡದ ಪತನ ಆರಂಭವಾಯಿತು. 63 ರನ್‌ ಆಗುವಷ್ಟರಲ್ಲಿ ಪ್ರಮುಖ 7 ವಿಕೆಟ್‌ಗಳು ಪತನವಾಗಿದ್ದವು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ದಕ್ಷಿಣ ಆಫ್ರಿಕಾ ನಾಯಕ ಡಿವಿಲಿಯರ್ಸ್ ಅವರ ಸ್ಫೋಟಕ ಶತಕದ ನೆರವಿನಿಂದ ವಿಂಡೀಸ್‌ ಗೆಲುವಿಗೆ 409  ರನ್‌ಗಳ ಬೃಹತ್‌ ಸವಾಲು ನೀಡಿತು.

5ನೇ ವಿಕೆಟ್‌ಗೆ ಕ್ರೀಸಿಗಿಳಿದ  ಡಿವಿಲಿಯರ್ಸ್‌ ವಿಂಡೀಸ್‌ ಬೌಲರ್‌ಗಳನ್ನು ಮನಬಂದಂತೆ ಥಳಿಸಿದರು. ಕೇವಲ 52 ಎಸೆತಗಳಲ್ಲಿ ಶತಕ ಪೂರೈಸಿದ ಅವರು ಔಟಾಗದೆ 162 ರನ್‌ ಗಳಿಸಿದರು. ಅವರ ಸ್ಕೋರಿನಲ್ಲಿ ಆಕರ್ಷಕ 17 ಬೌಂಡರಿ ಮತ್ತು 8 ಸಿಕ್ಸರ್‌ ಸೇರಿವೆ.  ಕೊನೆಯ 6 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ 108 ರನ್‌ ಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT