ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಉದ್ಘಾಟನೆ ಕಾರ್ನಾಡಗೆ ಆಹ್ವಾನ

Last Updated 20 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಾಡಹಬ್ಬ ದಸರಾ ಉದ್ಘಾಟನೆಗೆ ಆಗಮಿಸುವಂತೆ ಕೋರಿ ಸಾಹಿತಿ ಗಿರೀಶ ಕಾರ್ನಾಡ ಅವರಿಗೆ  ಬುಧವಾರ ಇಲ್ಲಿ ಸರ್ಕಾರದ ವತಿ­ಯಿಂದ ಅಧಿಕೃತ ಆಹ್ವಾನ ನೀಡಲಾ­ಯಿತು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್‌,  ಸಹಕಾರ ಸಚಿವ ಎಚ್‌.ಎಸ್‌. ಮಹದೇವ ಪ್ರಸಾದ್‌, ಮೈಸೂರು ಮೇಯರ್ ಎಂ.ಎನ್. ರಾಜೇಶ್ವರಿ, ಮೈಸೂರು ಜಿಲ್ಲಾಧಿಕಾರಿ ಸಿ. ಶಿಖಾ ಮತ್ತಿತರರು ಇಲ್ಲಿನ ಕಾರ್ನಾಡರ ಮನೆಗೆ ತೆರಳಿ ಆಹ್ವಾನ ಪತ್ರ ನೀಡಿದರು.

ಇದಕ್ಕೂ ಮುನ್ನ ದಸರಾ ಉಸ್ತು­ವಾರಿ ಸಮಿತಿ ವತಿಯಿಂದ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರನ್ನು  ನಾಡಹಬ್ಬಕ್ಕೆ ಅಧಿಕೃತವಾಗಿ ಆಹ್ವಾನಿಸಲಾಯಿತು.

ಬಿಜೆಪಿ ವಿರೋಧ: ಕಾರ್ನಾಡ ಅವ­­­ರನ್ನು ದಸರಾ ಉತ್ಸವ ಉದ್ಘಾ­­­ಟ­­ನೆಗೆ ಆಹ್ವಾನಿಸಿದ ಸರ್ಕಾರದ ಕ್ರಮ­ವನ್ನು ಬಿಜೆಪಿ ರಾಜ್ಯ ಘಟಕ ವಿರೋಧಿ­ಸಿದೆ.

‘ಎಲ್ಲ ರೀತಿಯ ಪೂಜಾ ವಿಧಿಗಳಿಗೆ ಕಾರ್ನಾಡರು ವಿರುದ್ಧವಾಗಿದ್ದಾರೆ. ದಸರಾ ಉದ್ಘಾಟಿಸುವ ವ್ಯಕ್ತಿ ಗಣಪತಿ ಮತ್ತು ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಬೇಕಾಗುತ್ತದೆ. ಕಾರ್ನಾಡರು ದೇವರನ್ನು ನಂಬುವವರಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಹೇಳಿದರು.

‘ದಸರಾ ಉದ್ಘಾಟನೆಗೆ ಇದು­ವರೆಗೆ ರಾಜಕೀಯೇತರ ವ್ಯಕ್ತಿಗಳನ್ನು ಆಹ್ವಾನಿಸಲಾಗುತ್ತಿತ್ತು. ಆದರೆ ಕಾರ್ನಾಡರು ರಾಜಕೀಯ­ದಲ್ಲಿರುವ ವ್ಯಕ್ತಿ. ಅವರು ಕಾಂಗ್ರೆಸ್‌ ಪರವಾಗಿ ಚುನಾವಣಾ ಪ್ರಚಾರ ಕೂಡ ನಡೆ­ಸಿ­­ದ್ದಾರೆ’ ಎಂದು ನೆನಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT