ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಢೀರ್ ಸೆಲ್ಫೀ ಮುದ್ರಣ

Last Updated 20 ಮೇ 2015, 19:30 IST
ಅಕ್ಷರ ಗಾತ್ರ

ಪ್ರಧಾನಿಯಿಂದ ಆರಂಭಿಸಿ ಜನ ಸಾಮಾನ್ಯರ ತನಕ ಎಲ್ಲರೂ ಸೆಲ್ಫೀ ಅರ್ಥಾತ್ ಸ್ವಂತೀ ಪ್ರಿಯರೇ. ಹೀಗೆ ತೆಗೆದ ಫೋಟೊಗಳನ್ನು ತಕ್ಷಣವೇ ಮುದ್ರಿಸಿ ಕೊಡುವಂತಿದ್ದರೆ? ಫ್ಯೂಜಿ ಫಿಲ್ಮ್ ಸಂಸ್ಥೆ ಇದನ್ನು ಸಾಧ್ಯವಾಗಿಸುತ್ತಿದೆ. ಹಾಗೆಂದು ಇದೇನು ಹೊಸ ತಂತ್ರಜ್ಞಾನವಲ್ಲ.

ಈ ಹಿಂದೆ ಇದ್ದ ಪೋಲರಾಯ್ಡ್ ತಂತ್ರಜ್ಞಾನ ಎಲ್ಲರಿಗೂ ಗೊತ್ತಿದ್ದದ್ದೇ. ಫೋಟೊ ತೆಗೆದ ತಕ್ಷಣ ಅದರದ್ದೊಂದು ಪ್ರತಿಯನ್ನು ಮುದ್ರಿಸಿಕೊಡುವ ಕ್ಯಾಮೆರಾಗಳನ್ನು ಪೋಲರಾಯ್ಡ್ ಕ್ಯಾಮೆರಾಗಳೆನ್ನುತ್ತಾರೆ. ಅದನ್ನೇ ಹೊಸ ಅವತಾರದಲ್ಲಿ ಫ್ಯೂಜಿ ಫಿಲ್ಮ್ ಬಿಡುಗಡೆ ಮಾಡಿದೆ.

ಫ್ಯೂಜಿಯ ಇನ್‌ಸ್ಟ್ಯಾಕ್ಸ್ ಸರಣಿಯ ಭಾಗವಾಗಿ ಹೊರಬಂದಿರುವ ಈ ಕ್ಯಾಮೆರಾಗಳ ಬೆಲೆ ಆರೂವರೆ ಸಾವಿರ ರೂಪಾಯಿಗಳಿಂದ ಹತ್ತು ಸಾವಿರ ರೂಪಾಯಿಗಳವರೆಗೆ ಇದೆ. ಇವು ಸೆಲ್ಫೀಗಾಗಿಯೇ ಇರುವ ಕ್ಯಾಮೆರಾಗಳು. ಹಳೆಯದು ಚಿನ್ನ ಎಂಬುದು ಮತ್ತೊಂದರ್ಥದಲ್ಲಿ ಈಗ ನಿಜವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT