ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಕ್ಕೊಂದು ಮೊಟ್ಟೆ...

Last Updated 4 ಜನವರಿ 2016, 19:35 IST
ಅಕ್ಷರ ಗಾತ್ರ

ಮೊಟ್ಟೆ– ಕೊಲೆಸ್ಟ್ರಾಲ್
ಮೊಟ್ಟೆಯಲ್ಲಿ ಅಧಿಕ ಕೊಲೆಸ್ಟ್ರಾಲ್ ಇದೆ. ಆದರೆ ಇದು ಮನುಷ್ಯನ ದೇಹದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ.  ಈ ಕೊಲೆಸ್ಟ್ರಾಲ್ ರಕ್ತದಲ್ಲಿರುವ ಕೊಬ್ಬನ್ನು ಹೆಚ್ಚಿಸುವುದಿಲ್ಲ. ದೇಹದಲ್ಲಿ ಅತಿ ಹೆಚ್ಚು ಸಾಂದ್ರತೆಯುಳ್ಳ ಲಿಪ್ರೋಪ್ರೊಟೀನ್ ಎಂಬ ಅಂಶವಿರುತ್ತದೆ. ಮೊಟ್ಟೆಯಲ್ಲಿರುವ ಕೊಲೆಸ್ಟ್ರಾಲ್ ಇದರ ಪ್ರಮಾಣವನ್ನು ಕಡಿಮೆ ಮಾಡಿ ಹೃದಯ ರೋಗ ಮತ್ತು ಪಾರ್ಶ್ವ ವಾಯುಗಳಂಥ ರೋಗಗಳಿಂದ ಕಾಪಾಡುತ್ತದೆ.

ಮೊಟ್ಟೆ ತಿಂದರೆ...
* ತೀವ್ರ ನಿಶ್ಶಕ್ತಿಯಿದ್ದವರು, ತುಂಬಾ ಸಣ್ಣಗಿದ್ದವರು  ಪ್ರತಿನಿತ್ಯ ಮೊಟ್ಟೆ ತಿನ್ನುವುದರಿಂದ ಸದೃಢರಾಗಿ ಆರೋಗ್ಯಯುತ ದೇಹ ಹೊಂದಬಹುದು.

* ಮೊಟ್ಟೆ ಮಾನವನ ಮಿದುಳನ್ನು ಆರೋಗ್ಯವಾಗಿಡುತ್ತದೆ. ಮೊಟ್ಟೆಯಲ್ಲಿ ಅಗತ್ಯವಾಗಿರುವ ವಿಟಮಿನ್ ಹಾಗೂ ಮಿನರಲ್‌ಗಳು ಇರುವುದರಿಂದ ಮಿದುಳು ಬೆಳೆಯಲು ಸಹಕರಿಸಿ ಬುದ್ಧಿವಂತರನ್ನಾಗಿಸುತ್ತದೆ.

* ಪ್ರತಿ ನಿತ್ಯ ಒಂದು ಮೊಟ್ಟೆ ತಿಂದರೆ ಮಾಂಸಖಂಡಗಳು ಬಲವಾಗುತ್ತವೆ. ಮೊಟ್ಟೆ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ.

* ಮೊಟ್ಟೆಯಲ್ಲಿ ವಿಟಮಿನ್ ಬಿ12 ಹೇರಳವಾಗಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

* ಆಲ್ಬುಮಿನ್ ಅಥವಾ ಮೊಟ್ಟೆ ಬಿಳಿ ಭಾಗ ಮೂಳೆಗೆ ಉತ್ತಮ ಪ್ರೊಟೀನ್ ಒದಗಿಸುತ್ತದೆ ಮತ್ತು ಇದರಲ್ಲಿನ ಅಮಿನೊ ಆಸಿಡ್ ಕಿಡ್ನಿಗೆ ಶಕ್ತಿ ನೀಡುತ್ತೆ. ಕಿಡ್ನಿಯ ಆರೋಗ್ಯಕ್ಕೆ ಕೇವಲ ಮೊಟ್ಟೆಯ ಬಿಳಿ ಭಾಗ ತಿನ್ನಬೇಕು. ಮೊಟ್ಟೆಯ ಹಳದಿ ಭಾಗದಲ್ಲಿನ ಫಾಸ್ಪರಸ್ ಮತ್ತು ಪೊಟಾಶಿಯಂ ಕಿಡ್ನಿಗೆ ಸಮಸ್ಯೆ ಉಂಟುಮಾಡುತ್ತದೆ.

* ಡಯಟ್ ಮಾಡುವವರಿಗೂ ಮೊಟ್ಟೆ ಉತ್ತಮ ಆಹಾರ. ಇದರಲ್ಲಿರುವ ವಿಟಮಿನ್‌ ಹಾಗೂ ಮಿನರಲ್‌ಗಳು ದೇಹಕ್ಕೆ ಬೇಕಾದ ಅವಶ್ಯಕ ಅಂಶಗಳನ್ನು ಪೂರೈಸುವುದರಿಂದ ಆಹಾರ ಸಮತೋಲನ ಕಾಪಾಡಬಹುದು.

* ಗರ್ಭಿಣಿಯರು ಮೊಟ್ಟೆ ತಿನ್ನುವುದರಿಂದ ಗರ್ಭದಲ್ಲಿರುವ ಶಿಶುವಿಗೆ ಪೋಷಕಾಂಶ ಹಾಗೂ ಖನಿಜಾಂಶ ಪೂರೈಕೆಯಾಗಿ ಆರೋಗ್ಯಯುತವಾಗಿ ಬೆಳೆಯಲು ಸಹಾಯವಾಗುತ್ತದೆ.

* ಮೊಟ್ಟೆ ದೃಷ್ಟಿ ದೋಷವನ್ನು ತಡೆಗಟ್ಟುತ್ತದೆ.

ಸೌಂದರ್ಯದಲ್ಲಿ ಮೊಟ್ಟೆ
* ಸೌಂದರ್ಯಕ್ಕೂ ಮೊಟ್ಟೆ ಸೈ ಎನಿಸಿಕೊಂಡಿದೆ. ಒಂದು ಮೊಟ್ಟೆಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಚೆನ್ನಾಗಿ ಕಲಕಿ. ಅದಕ್ಕೆ ಆಲಿವ್ ಎಣ್ಣೆ ಸೇರಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಒಣಗಿದ ನಂತರ ತೊಳೆದುಕೊಂಡರೆ ಮುಖದ ಕಾಂತಿ ಹೆಚ್ಚುತ್ತದೆ.

* ಎರಡು ಮೊಟ್ಟೆಯ ಬಿಳಿ ಭಾಗ ತೆಗೆದು ಚೆನ್ನಾಗಿ ಕಲಕಿ, ಅದು ದಪ್ಪಗಾಗಲಿ. ಇದಕ್ಕೆ ಕೆಲ ಹನಿಗಳಷ್ಟು ವಿಚ್ ಹೇಜಲ್ ಸೇರಿಸಿ. ಈ ಮಿಶ್ರಣವನ್ನು ಕಣ್ಣಿನ ಕೆಳಗೆ ಬ್ರಷ್‌ನಲ್ಲಿ ಅಥವಾ ಮೃದವಾದ ಬಟ್ಟೆಯಿಂದ ಹಚ್ಚಿ ಒಣಗಲು ಬಿಡಿ. ಸುಮಾರು ಹದಿನೈದು ನಿಮಿಷಗಳ ಬಳಿಕ ತೊಳೆದುಕೊಳ್ಳಿ. ಹೀಗೆ ಮಾಡಿದರೆ ಚರ್ಮ ಬಿಗಿಗೊಂಡು ಅಕಾಲಿಕ ನೆರಿಗೆ ತಡೆಗಟ್ಟಬಹುದು.

* ಮೊಟ್ಟೆಯನ್ನು ಚೆನ್ನಾಗಿ ಬೀಟ್ ಮಾಡಿ ಅದಕ್ಕೆ ಒಂದು ಚಮಚ ಆಲಿವ್ ಆಯಿಲ್ ಹಾಕಿ ಮತ್ತೆ ಬೀಟ್ ಮಾಡಿ. ಇದಕ್ಕೆ ಒಂದು ಕಪ್ ನೀರು ಸೇರಿಸಿ ಚೆನ್ನಾಗಿ ಕಲಸಿ ತಲೆಗೆ ಹಚ್ಚಿ. ಸ್ವಲ್ಪ ಹೊತ್ತಿನ ನಂತರ ತಣ್ಣೀರಿನಿಂದ ತೊಳೆದರೆ ಕೂದಲು ಸಮೃದ್ಧವಾಗಿ ಬೆಳೆಯುತ್ತದೆ.

* ಕಣ್ಣಿನ ಕೆಳಭಾಗದಲ್ಲಿ ಇರುವ ಕಪ್ಪು ಕಲೆಯನ್ನು ತಾತ್ಕಾಲಿಕ ಮಟ್ಟಿಗೆ ಮರೆಮಾಚುವ ಗುಣ ಮೊಟ್ಟೆಗಿದೆ. ಬಿಳಿಲೋಳೆಯನ್ನು ಆ ಭಾಗಕ್ಕೆ ಹಚ್ಚಿ ಅದು ಒಣಗಿದ ಮೇಲೆ ಇನ್ನೊಮ್ಮೆ ಲೋಳೆ ಹಚ್ಚಿ.  ಒಣಗಿದ ಮೇಲೆ ತೊಳೆಯದೆ ಅದರ ಮೇಲೆಯೇ ಮೇಕಪ್ ಮಾಡಿದರೆ ಕಪ್ಪು ಕಲೆ ಕಾಣಿಸುವುದಿಲ್ಲ.

* ಚಳಿಗಾಲಕ್ಕೆ ಕೋಳಿಮೊಟ್ಟೆ ಮಾಸ್ಕ್‌ ಮುಖಕ್ಕೆ ಇನ್ನಷ್ಟು ಅಂದ ನೀಡುತ್ತದೆ. ಎರಡು ಚಮಚ ಕಾಬೂಲು ಕಡಲೆಕಾಯಿ ಪುಡಿಯನ್ನು ಒಂದು ಬಾಳೆಹಣ್ಣಿನ ಜತೆ ಸೇರಿಸಿ ಪೇಸ್ಟ್ ಮಾಡಿ. ಒಂದು ಮೊಟ್ಟೆಯನ್ನು ಒಡೆದು ಇದಕ್ಕೆ ಸೇರಿಸಿ ಚೆನ್ನಾಗಿ ಬೀಟ್ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿ 10–15 ನಿಮಿಷ ಬಿಟ್ಟು ತೊಳೆಯಿರಿ. ಇದು  ಕೆಂಪು ಗುಳ್ಳೆಗಳನ್ನು ತೆಗೆದುಹಾಕುವ ಜತೆಗೆ ಮುಖದ ರಂಧ್ರಗಳನ್ನು ಬಿಗಿಯಾಗಿಸುತ್ತದೆ.

ವಿಶ್ವದಲ್ಲಿ ಮೊಟ್ಟೆ ಉತ್ಪಾದನೆ (ವರ್ಷಕ್ಕೆ)
* 50% ಚೀನಾ- 390 ಶತಕೋಟಿ
* 10% ಅಮೆರಿಕ- 76 ಶತಕೋಟಿ
* 40% -ಇತರ ದೇಶಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT