ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾ ಅಂತರರಾಷ್ಟ್ರೀಯ ಹಾಕಿ ಅಂಪೈರ್

Last Updated 23 ಮೇ 2015, 11:04 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್ಎಸ್): ಭಾರತದ ಹಾಕಿ ಅಂಪೈರ್‌ ದೀಪಾ ಕುಮಾರಿ ಅವರಿಗೆ ಅಂತರರಾಷ್ಟ್ರೀಯ ಹಾಕಿ ತೀರ್ಪುಗಾರ್ತಿಯಾಗಿ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ (ಎಫ್ಐಎಚ್‌) ಅಂಪೈರ್‌ ಸಮಿತಿ ಬಡ್ತಿ ನೀಡಿದೆ. ಈ ಬೆನ್ನಲ್ಲೇ ದೀಪಾ ಅವರಿಗೆ ಹಾಕಿ ಇಂಡಿಯಾ ಅಭಿನಂದನೆ ತಿಳಿಸಿದೆ.

‘ಭಾರತದ ಹಾಕಿಗೆ ಇದೊಂದು ಹೆಮ್ಮೆಯ ದಿನವಾಗಿದೆ. ದೀಪಾ ಅವರ ಈ ಸಾಧನೆಗೆ ಹಾಕಿ ಇಂಡಿಯಾ ಅವರನ್ನು ಅಭಿನಂದಿಸಲು ಬಯಸುತ್ತದೆ’ ಎಂದು ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮುಷ್ತಾಕ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾರಿವರು ದೀಪಾ ಕುಮಾರಿ: ದೀಪಾ ಅವರು ದೆಹಲಿಯವರು. 2010ರಿಂದ ವೃತ್ತಿ ಜೀವನ ಆರಂಭಿಸಿದ್ದ ದೀಪಾ, ಸಾಕಷ್ಟು ದೇಶಿ ಟೂರ್ನಿಗಳಲ್ಲಿ ತೀರ್ಪುಗಾರ್ತಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT