ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಚುನಾವಣೆ: ಸುದ್ದಿಗೋಷ್ಠಿಗಳ ಮೇಲೆ ನಿಗಾ

Last Updated 28 ಜನವರಿ 2015, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್‌): ದೆಹಲಿ ವಿಧಾನ­­ಸಭೆ ಚುನಾವಣೆಯ ಪ್ರಚಾ­ರದ ಕಾವು ರಂಗೇರುತ್ತಿ­ದ್ದಂತೆಯೇ ಚುನಾ­ವಣಾ ಆಯೋಗವು ವಿವಿಧ ರಾಜಕೀಯ ಪಕ್ಷ­ಗಳು ನಡೆಸುವ ಸುದ್ದಿ­ಗೋಷ್ಠಿಗಳ ಮೇಲೂ ನಿಗಾ ಇಡಲು ಹೊರಟಿದೆ.

ಮಾದರಿ ನೀತಿ-ಸಂಹಿತೆ ಉಲ್ಲಂಘ­ನೆ­ಯಾಗಿದೆಯೇ ಎನ್ನುವುದನ್ನು ಪರಿ­ಶೀಲಿ­­ಸು­­ವುದಕ್ಕಾಗಿ ರಾಜಕೀಯ ಪಕ್ಷ­ಗಳ  ಸುದ್ದಿ­ಗೋಷ್ಠಿ ಸ್ಥಳಕ್ಕೆ ಆಯೋ­ಗದ ಪ್ರತಿ­ನಿಧಿಗಳು ಹೋಗುತ್ತಾರೆ ಎಂದು ಮೂಲ­ಗಳು ತಿಳಿಸಿವೆ.

ಬುಧವಾರದ ಕಾಂಗ್ರೆಸ್‌ ಸುದ್ದಿ­ಗೋಷ್ಠಿ­ಯಲ್ಲಿ ಈ ವಿಷಯ ಸ್ಪಷ್ಟವಾ­ಯಿತು. ಮಾಧ್ಯಮ ­ಪ್ರತಿನಿಧಿಗಳನ್ನು ಸ್ವಾಗತಿಸಿದ  ಎಐಸಿಸಿ ಪ್ರಧಾನ ಕಾರ್ಯ­ದರ್ಶಿ ಅಜಯ್‌ ಮಾಕನ್‌, ‘ಇಂದಿ­ನಿಂದ ಚುನಾ­ವಣಾ ಆಯೋ­ಗದ ಪ್ರತಿ­ನಿಧಿಗಳು ಸುದ್ದಿ­ಗೋಷ್ಠಿಗೆ ಬರಲಿದ್ದಾರೆ ಎಂದು ಪಕ್ಷಕ್ಕೆ ಮಾಹಿತಿ ಬಂದಿದೆ’ ಎಂದರು.

ಆಯೋಗ ಈಗಾಗಲೇ ರಾಜ­ಕೀಯ ಸಭೆ, ಬೀದಿ ಬದಿ ಪ್ರಚಾರ (ರೋಡ್‌ ಶೋ) ಹಾಗೂ ರ್‍ಯಾಲಿ­ಗಳ ಮೇಲೆ ಕಣ್ಣಿ­ಟ್ಟಿದೆ ಎಂದೂ ಮೂಲ­ಗಳು ತಿಳಿಸಿವೆ.

ಮತದಾರರಿಗೆ ಸೂಚನೆ
ಅಭ್ಯರ್ಥಿ­ಗಳ ವ್ಯಕ್ತಿತ್ವ ತಿಳಿದು­ಕೊಳ್ಳು­ವುದಕ್ಕೆ, ಅವರು ಸಲ್ಲಿಸಿರುವ ಪ್ರಮಾಣ­ಪತ್ರ ಪರಿ­ಶೀಲಿಸು­ವಂತೆ ಮತದಾ­ರ­ರನ್ನು ಉತ್ತೇಜಿಸಲು ಚುನಾವಣಾ ಆಯೋ­ಗವು ಅಭಿ­ಯಾನ ಹಮ್ಮಿಕೊಂಡಿದೆ.

ರಡು ಗುರುತಿನ ಚೀಟಿ
ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್‌ ಬೇಡಿ ಅವರ ಬಳಿ ಎರಡು ಪ್ರತ್ಯೇಕ ವಿಳಾಸದ ಮತ­ದಾ­ರರ ಗುರು­ತಿನ ಚೀಟಿ­ಗಳು ಇವೆ ಎನ್ನುವ ದೂರಿನ ಬಗ್ಗೆ ಆಯೋಗ ಪರಿಶೀಲನೆ ನಡೆಸುತ್ತಿದೆ.

ಬಿಜೆಪಿಗೆ ಬಹುಮತ?
ದೆಹಲಿ ಚುನಾವಣೆ­ಯಲ್ಲಿ ಬಿಜೆಪಿ ೩೭ ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಇಂಡಿಯಾ ಟಿವಿ ಮತ್ತು ಸಿ–ವೋಟರ್‌ ಜಂಟಿ ಸಮೀಕ್ಷೆ ಹೇಳಿದೆ. ಎಎಪಿ ಕಳೆದ ಬಾರಿ ಗೆದ್ದಿ­ರುವ  ೨೮ ಸ್ಥಾನಗಳನ್ನು ಉಳಿಸಿ­ಕೊ­ಳ್ಳಲಿದೆ.

ಆದರೆ ಕಾಂಗ್ರೆಸ್‌ ಸಂಖ್ಯಾಬಲ ೮ರಿಂದ ೫ಕ್ಕೆ ಇಳಿಯ­ಲಿದೆ ಎಂದು ಸಮೀಕ್ಷೆ ತಿಳಿಸಿದೆ. ಕಳೆದ ಚುನಾ­ವಣೆಯಲ್ಲಿ ಬಿಜೆಪಿ ೩೧, ಅಂಗಪಕ್ಷ ಶಿರೋಮಣಿ ಅಕಾಲಿ­ದಳ 1 ಸ್ಥಾನ ಗೆದ್ದಿದ್ದವು. ಶೇಕಡಾವಾರು ಮತ ತೆಗೆದು­ಕೊಂಡರೆ ಬಿಜೆಪಿ ಶೇ ೪೫, ಎಎಪಿ ಶೇ ೪೦, ಕಾಂಗ್ರೆಸ್‌್ ಶೇ ೧೦ ರಷ್ಟು ಮತ ಪಡೆದು­ಕೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT