ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ವಿಧಾನಸಭೆ ವಿಸರ್ಜಿಸದಂತೆ ಮನವಿ

ಜಂಗ್‌ ಭೇಟಿಯಾಗಿ ಕೇಜ್ರಿವಾಲ್‌ ಪತ್ರ ಸಲ್ಲಿಕೆ
Last Updated 20 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಮಾನತಿ­ನಲ್ಲಿ­ಟ್ಟಿ­ರುವ ದೆಹಲಿ ವಿಧಾನಸಭೆಯನ್ನು ವಿಸರ್ಜಿಸದಂತೆ ಲೆಫ್ಟಿನೆಂಟ್‌ ಗವರ್ನರ್‌ ನಜೀಬ್‌ ಜಂಗ್‌ ಅವರಿಗೆ ಆಮ್ ಆದ್ಮಿ ಪಕ್ಷ (ಎಎಪಿ) ಮನವಿ ಮಾಡಿದೆ.

ಮಂಗಳವಾರ ಜಂಗ್‌ ಅವರನ್ನು ಭೇಟಿ­­ಯಾದ ಎಎಪಿ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿ­ವಾಲ್‌ ಈ ಸಂಬಂಧ ಪತ್ರ ಸಲ್ಲಿಸಿದರು.
ಮತ್ತೆ ಸರ್ಕಾರ ರಚಿಸಬೇಕೇ ಎಂಬ ಬಗ್ಗೆ ರಾಜ್ಯ­ದೆಲ್ಲೆಡೆ ಸಾರ್ವಜನಿಕ ಸಭೆಗಳನ್ನು ನಡೆಸಿ ಜನರ ಅಭಿಪ್ರಾಯ ಸಂಗ್ರಹಿಸಲು ಕಾಲಾವ­ಕಾಶ ಬೇಕೆಂದು ಜಂಗ್‌ ಅವ­ರಿಗೆ ಎಎಪಿ ಪತ್ರದಲ್ಲಿ ಕೋರಿದೆ.

ಜಂಗ್‌ ಜತೆ ಸುಮಾರು ಅರ್ಧ ಗಂಟೆ ನಡೆದ ಸಭೆಯಲ್ಲಿ ಎಎಪಿ ಮುಖಂಡ ಮನೀಶ್‌ ಸಿಸೋ­ಡಿಯ ಸಹ ಇದ್ದರು.
ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲನುಭವಿಸಿದ ಕಾರಣ ಬಿಜೆಪಿ ಅಥವಾ ಕಾಂಗ್ರೆಸ್‌ ಬೆಂಬಲ ಪಡೆದು ಸರ್ಕಾರ ರಚಿಸ­ಬೇಕು ಎಂದು ಕೆಲವು ಎಎಪಿ ಶಾಸಕರು ಇತ್ತೀ­ಚೆಗೆ ಒತ್ತಾಯಿಸಿದ್ದರು.

ಎಎಪಿ ಮೂಲಗಳ ಪ್ರಕಾರ, ಪಕ್ಷದ ಬಹುತೇಕ ಶಾಸಕರು ತಕ್ಷಣವೇ ಹೊಸ­ದಾಗಿ ಚುನಾ­­ವಣೆ ಎದುರಿಸುವುದಕ್ಕೆ ವಿರೋ­ಧ­ವಿದ್ದು, ಈಗ ‘ಮೋದಿ ಅಲೆ’ ಇರುವುದರಿಂದ ಚುನಾವಣೆ ನಡೆದರೆ ತಾವು ಗೆದ್ದು ಬರುವುದು ಕಷ್ಟ ಎಂಬ ಅಭಿಪ್ರಾಯವನ್ನು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT