ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಷಪೂರಿತ ನೋಟು ಚಲಾವಣೆಯಿಂದ ಹಿಂದಕ್ಕೆ

Last Updated 3 ಮೇ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ತೆಳುವಾದ ಭದ್ರತಾ ದಾರ ಇಲ್ಲದೆ ಮುದ್ರಿತಗೊಂಡ ಸಾವಿರ ರೂಪಾಯಿ ಮುಖಬೆಲೆಯ  ನೋಟುಗಳ ಚಲಾವಣೆ ತಡೆ ಹಿಡಿಯಲಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ.

ಸಮಗ್ರ ಪರಿಶೀಲನೆಯ ನಂತರ ಈ ನೋಟುಗಳು ನಕಲಿ ಅಲ್ಲ ಎಂಬ ಸಂಗತಿ ದೃಢಪಟ್ಟಿದೆ.  ಮುದ್ರಣದ ವೇಳೆ ಆಕಸ್ಮಿಕ ತಪ್ಪಿನಿಂದಾಗಿ ಈ ಯಡವಟ್ಟಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ  ರಾಜ್ಯಸಭೆಗೆ ತಿಳಿಸಿದರು.

ಒಂದೇ ಸರಣಿಯ  ದೋಷಪೂರಿತ ಇಂತಹ ನೋಟುಗಳ ಬಗ್ಗೆ  ಭಾರತೀಯ ರಿಸರ್ವ್‌ ಬ್ಯಾಂಕ್‌ನ ಪ್ರಾದೇಶಿಕ ಶಾಖೆಯೊಂದು 2015ರಲ್ಲಿ ಆರ್‌ಬಿಐ ಗಮನಕ್ಕೆ ತಂದಿತ್ತು.

ಹೊಸಂಗಾಬಾದ್‌ ನೋಟು ಮುದ್ರಣ ಘಟಕದಲ್ಲಿ ಸಾವಿರ ರೂಪಾಯಿ ಮುಖಬೆಲೆಯ ₹ 7.56 ಲಕ್ಷ ಮೌಲ್ಯದ ದೋಷಪೂರಿತ ನೋಟುಗಳು  ಮುದ್ರಿತಗೊಂಡ ಸಂಗತಿ ನಂತರ ಬೆಳಕಿಗೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT