ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಷಪೂರಿತ 35 ಸಾವಿರ ಪ್ರಕರಣ ಪತ್ತೆ

ಮತದಾರರ ಪಟ್ಟಿಯಲ್ಲಿ ಹೆಚ್ಚಿದ ಪುನರಾವರ್ತನೆ * ಪರಿಶೀಲನೆಗೆ ವಿಶೇಷ ಸಾಫ್ಟ್‌ವೇರ್‌
Last Updated 29 ಜೂನ್ 2015, 19:57 IST
ಅಕ್ಷರ ಗಾತ್ರ

ಬೆಂಗಳೂರು: ‘ಮತದಾರರ ಪಟ್ಟಿಯಲ್ಲಿ ಹೆಸರುಗಳ ಪುನರಾರ್ವತನೆ, ಒಂದೇ ಭಾವಚಿತ್ರ ವಿವಿಧ ಹೆಸರುಗಳಿಗೆ ಬಳಕೆ ಸೇರಿದಂತೆ ಹಲವು ಪ್ರಮಾದಗಳು ನಡೆದಿದ್ದು, ಇದುವರೆಗೆ 35 ಸಾವಿರ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ’ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಆಯುಕ್ತ ಜಿ.ಕುಮಾರ್‌ ನಾಯಕ್‌ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಯಾದಿ ಪರಿಷ್ಕರಣೆಗಾಗಿಯೇ ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್‌ನಿಂದ  ಇಂತಹ ಎಲ್ಲ ಪ್ರಕರಣ ಪತ್ತೆ ಹಚ್ಚಲಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

‘ಹೆಸರು, ವಯಸ್ಸು, ಲಿಂಗ, ಭಾವಚಿತ್ರ, ವಿಳಾಸ... ಹೀಗೆ ಬಹು ಆಯಾಮದಿಂದ ಮತದಾರರ ವಿವರ ತಾಳೆಮಾಡಿ ನೋಡಲಾಗುತ್ತದೆ. ಪುನರಾವರ್ತನೆ ಆಗಿರುವ ಪ್ರಕರಣಗಳನ್ನು ಪುನರ್‌ ಪರಿಶೀಲನೆ ನಡೆಸಿ ಖೊಟ್ಟಿ ಎಂಬುದು ಖಚಿತವಾದಲ್ಲಿ ರದ್ದುಗೊಳಿಸಲಾಗುತ್ತದೆ’ ಎಂದು ಹೇಳಿದರು.

‘ಜೂನ್‌ 5ರವರೆಗೆ ನೋಂದಣಿ ಮಾಡಿದವರ ಹೆಸರುಗಳನ್ನೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗುತ್ತದೆ. ನೋಂದಣಿ ಮಾಡಿದ ಬಳಿಕ ದಾಖಲೆಗಳ ಪರಿಶೀಲನೆಗೆ ಕನಿಷ್ಠ ಹತ್ತು ದಿನ ಬೇಕು. ಹೀಗಾಗಿ ಜೂನ್‌ 5ರ ಬಳಿಕ ನೋಂದಣಿ ಮಾಡಿಕೊಂಡವರ ಹೆಸರನ್ನು ತಕ್ಷಣ ಮತದಾರರ ಪಟ್ಟಿಗೆ ಸೇರಿಸಲು ಕಷ್ಟವಾಗುತ್ತದೆ’ ಎಂದರು.

‘ಚುನಾವಣೆಗೆ11,635 ಎಲೆಕ್ಟ್ರಾನಿಕ್‌ ಮತಯಂತ್ರ ಸನ್ನದ್ಧಗೊಳಿಸಲಾಗಿದೆ. ಚುನಾವಣೆ ನಡೆಸಲು ಬೇಕಾದ ಸಿಬ್ಬಂದಿಗೆ ಕೊರತೆ ಏನೂ ಉಂಟಾಗದು. ಸರ್ಕಾರಿ ನೌಕರರಿಗೆ ಸೂಚನಾ ಪತ್ರ ಕಳುಹಿಸಲಾಗುತ್ತಿದೆ’ ಎಂದು ಹೇಳಿದರು.

ಹೊರಮಾವು ಗರಿಷ್ಠ- ಡಾ.ರಾಜ್‌ ವಾರ್ಡ್‌ ಕನಿಷ್ಠ: ಕೆ.ಆರ್‌. ಪುರ ವಿಧಾನಸಭಾ ಕ್ಷೇತ್ರದ ಹೊರಮಾವು ವಾರ್ಡ್‌ ಅತಿ ಹೆಚ್ಚು (81,094) ಮತದಾರರನ್ನು  ಹೊಂದಿದ್ದರೆ, ಗೋವಿಂದರಾಜನಗರದ ಡಾ. ರಾಜ್‌ಕುಮಾರ್‌ ವಾರ್ಡ್‌ ಅತಿ ಕಡಿಮೆ (17,513) ಮತದಾರರನ್ನು ಹೊಂದಿದೆ. ಪೀಣ್ಯ ಕೈಗಾರಿಕಾ ಪ್ರದೇಶ ವಾರ್ಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ (54) ತೃತೀಯ ಲಿಂಗಿಗಳು ಮತದಾನದ ಹಕ್ಕು ಹೊಂದಿದ್ದಾರೆ.
*
ಚುನಾವಣೆಗೆ ವೀಕ್ಷಕರ ನೇಮಕ
ಬಿಬಿಎಂಪಿ ಚುನಾವಣೆಗೆ ಐವರು ಐಎಎಸ್‌ ಅಧಿಕಾರಿಗಳನ್ನು ವಿಶೇಷ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.ಇವರಿಗೆ 28 ವಿಧಾನಸಭಾ ಕ್ಷೇತ್ರಗಳ ಹೊಣೆಯನ್ನು ಹಂಚಲಾಗಿದೆ.

ಗೌರವ್‌ ಗುಪ್ತ–ಆರ್‌.ಆರ್‌.ನಗರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್‌, ಮಲ್ಲೇಶ್ವರ, ರಾಜಾಜಿನಗರ, ಗೋವಿಂದರಾಜನಗರ. ಮೊಹಮ್ಮದ್‌ ಮೊಹಿಸಿನ್‌–ಯಶವಂತಪುರ, ವಿಜಯನಗರ, ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಲೇಔಟ್‌, ಜಯನಗರ. ನವೀನ್‌ರಾಜ್‌ ಸಿಂಗ್‌–ಶಿವಾಜಿನಗರ, ಶಾಂತಿನಗರ, ಗಾಂಧಿನಗರ, ಚಾಮರಾಜಪೇಟೆ, ಚಿಕ್ಕಪೇಟೆ. ಸುಬೋಧ್‌ ಯಾದವ್‌–ಕೆ.ಆರ್‌.ಪುರ, ಸಿ.ವಿ.ರಾಮನ್‌ನಗರ, ಮಹದೇವಪುರ, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಆನೇಕಲ್‌. ಕೆ.ಪಿ. ಮೋಹನ್‌ರಾಜ್‌–ಯಲಹಂಕ, ಬ್ಯಾಟರಾಯನಪುರ, ಹೆಬ್ಬಾಳ, ಪುಲಕೇಶಿನಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT