ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಎನ್‌ಕೌಂಟರ್‌

Last Updated 23 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಶೃಂಗೇರಿ ಬಳಿ ಎ.ಎನ್‌.ಎಫ್‌. ಗುಂಡೇಟಿಗೆ ಕಬೀರ್‌ ಎಂಬ ಕೂಲಿ ಕಾರ್ಮಿಕ ಬಲಿಯಾಗಿ­ದ್ದಾನೆ. ಅಲ್ಲಿಯ ಚಿತ್ರಣವನ್ನು ಮಾಧ್ಯಮಗಳಲ್ಲಿ ಗಮನಿಸಿದರೆ ಇದೊಂದು ನಕಲಿ ಎನ್‌ಕೌಂಟರ್‌ ಎನಿಸುತ್ತದೆ.

ರಾಜ್ಯದಲ್ಲಿ ಜಾನುವಾರು ಸಾಗಾಣಿ­ಕೆಗೆ ಇರುವ ನಿಯಮಗಳನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸವನ್ನು ಸರ್ಕಾರ ಅಥವಾ ಪೊಲೀಸ್‌ ಇಲಾಖೆ ಮಾಡಲಿ. ಅದು ಬಿಟ್ಟು, ಜಾನುವಾರು ಸಾಗಾಣಿಕೆ ದೊಡ್ಡ ಅಪರಾಧ ಎಂಬಂತೆ, ಅಲ್ಪ­ಸಂಖ್ಯಾತ ಯುವಕರ ಮೇಲೆ ದೌರ್ಜನ್ಯ  ನಡೆಸು­ವುದು, ಪ್ರಕರಣ ದಾಖಲಿಸುವುದು ಇನ್ನಾದರೂ ನಿಲ್ಲಲಿ.

ಶೃಂಗೇರಿ ನಕಲಿ ಎನ್‌ಕೌಂಟರ್‌ ಬಗ್ಗೆ ಸೂಕ್ತ ತನಿಖೆ ನಡೆಸಿ ಬಡ ಕುಟುಂಬಕ್ಕೆ ನೆರವು ನೀಡಲಿ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಜೊತೆಗೆ ಅಲ್ಪಸಂಖ್ಯಾತರಿಗೆ ರಕ್ಷಣೆ ಒದಗಿಸಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT