ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಸರಕು ರಫ್ತು: ಭಾರತಕ್ಕೆ ಐದನೇ ಸ್ಥಾನ

Last Updated 1 ಮೇ 2016, 19:44 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ): ಜಾಗತಿಕ ಮಟ್ಟದಲ್ಲಿ ನಕಲಿ ಸರಕುಗಳನ್ನು ರಫ್ತು ಮಾಡಿರುವ ದೇಶಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಅತ್ಯಧಿಕ ನಕಲಿ ಸರಕು ರಫ್ತು ಮಾಡಿದ ‘ಕುಖ್ಯಾತಿ’ ಚೀನಾಕ್ಕೆ ದೊರೆತಿದೆ.

ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ಹಾಗೂ ಐರೋಪ್ಯ ಒಕ್ಕೂಟ ಬೌದ್ಧಿಕ ಸಂಪತ್ತು ಕಚೇರಿ ನಡೆಸಿದ ಹೊಸ ಅಧ್ಯಯನ ವರದಿಯಲ್ಲಿ ಈ ಅಂಶ ಬಹಿರಂಗಗೊಂಡಿದೆ.

ಚೀನಾದ ಬಳಿಕದ ಸ್ಥಾನಗಳಲ್ಲಿ ಟರ್ಕಿ, ಸಿಂಗಪುರ ಮತ್ತು ಥಾಯ್ಲೆಂಡ್‌ ದೇಶಗಳು ಇವೆ. ಜಾಗತಿಕ ಮಟ್ಟದಲ್ಲಿ ವಶಪಡಿಸಿಕೊಂಡ ನಕಲಿ ಸರಕುಗಳಲ್ಲಿ ಶೇ 63.2 ರಷ್ಟು ಚೀನಾ ದೇಶಕ್ಕೆ ಸೇರಿದೆ.

ನಂತರದ ಸ್ಥಾನದಲ್ಲಿರುವ ಟರ್ಕಿ ಶೇ 3.3ರಷ್ಟು ಪಾಲು ಹೊಂದಿದೆ. ಸಿಂಗಪುರ, ಥಾಯ್ಲೆಂಡ್‌ ಮತ್ತು ಭಾರತದ ಪ್ರಮಾಣ ಕ್ರಮವಾಗಿ ಶೇ 1.9, ಶೇ 1.6 ಮತ್ತು ಶೇ 1.2 ರಷ್ಟಿವೆ.

ನಕಲಿ ಸರಕು ಹಾವಳಿಯಿಂದ ಅತ್ಯಧಿಕ ತೊಂದರೆ ಅನುಭವಿಸಿದ ದೇಶಗಳಲ್ಲಿ ಅಮೆರಿಕ ಅಗ್ರಸ್ಥಾನದಲ್ಲಿದೆ. ಈ ದೇಶಕ್ಕೆ ಅತಿಹೆಚ್ಚಿನ ಪ್ರಮಾಣದ ನಕಲಿ ವಸ್ತುಗಳು ಆಮದಾಗಿವೆ. ಇಟಲಿ, ಫ್ರಾನ್ಸ್‌, ಸ್ವಿಟ್ಜರ್‌ಲೆಂಡ್‌ ಮತ್ತು ಜಪಾನ್‌ ಬಳಿಕದ ಸ್ಥಾನಗಳಲ್ಲಿವೆ.

2011 ರಿಂದ 13ರ ವರೆಗಿನ ಅವಧಿಯಲ್ಲಿ ವಿವಿಧ ದೇಶಗಳಲ್ಲಿ ವಶಪಡಿಸಿಕೊಳ್ಳಲಾದ ನಕಲಿ ವಸ್ತುಗಳ ಲೆಕ್ಕವನ್ನು ಆಧರಿಸಿ ಒಇಸಿಡಿ ತನ್ನ ವರದಿ ಸಿದ್ಧಪಡಿಸಿದೆ.

ಅಂಕಿಅಂಶ (ಶೇಕಡವಾರು)
63-ಚೀನಾ ರಫ್ತು ಮಾಡಿದ ನಕಲಿ ಸರಕುಗಳ ಪ್ರಮಾಣ

1.2-ಭಾರತದ ನಕಲಿ ಸರಕುಗಳ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT