ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲರಿಂದ ಮತ್ತೆ ರಕ್ತಪಾತ

ಚುನಾವಣಾ ಸಿಬ್ಬಂದಿ ಸೇರಿ 14 ಮಂದಿ ಹತ್ಯೆ
Last Updated 12 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ರಾಯಪುರ (ಪಿಟಿಐ): ಛತ್ತೀಸಗಡದಲ್ಲಿ ಮಾವೋವಾದಿ ನಕ್ಸಲರು ಮತ್ತೆ ಅಟ್ಟಹಾಸ ಮೆರೆದಿದ್ದು, ಶನಿ­ವಾರ ನೆಲ­ಬಾಂಬ್‌ ಸ್ಫೋಟಿಸಿ ಮನಬಂದಂತೆ ಗುಂಡು ಹಾರಿ­ಸಿ­ ಏಳು ಚುನಾ­ವಣಾ ಸಿಬ್ಬಂದಿ ಮತ್ತು ಐವರು ಸಿಆರ್‌ಪಿಎಫ್‌ ಯೋಧರು ಸೇರಿ 14 ಮಂದಿಯನ್ನು ಕೊಂದಿದ್ದಾರೆ.

ಛತ್ತೀಸಗಡದ ಬಿಜಾಪುರ ಮತ್ತು ಬಸ್ತರ್‌ ಜಿಲ್ಲೆಗಳಲ್ಲಿ ಈ ದಾಳಿ ನಡೆದಿದೆ. ದಾಳಿಯ ನಂತರ ಎರಡೂ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

ಚುನಾವಣಾ ಕರ್ತವ್ಯ ಮುಗಿಸಿ­ಕೊಂಡು ಬಸ್‌ನಲ್ಲಿ ಹಿಂತಿರು­ಗುತ್ತಿದ್ದ ವೇಳೆ ಬಿಜಾ­ಪುರ ಜಿಲ್ಲೆಯ ಕೆತುಲ್ನಾರ ಗ್ರಾಮದ ಬಳಿ ನಕ್ಸಲರು ನೆಲ­ಬಾಂಬ್‌ ಸ್ಫೋಟಿಸಿ ಮನಬಂ­ದಂತೆ ಗುಂಡು ಹಾರಿಸಿ­ದಾಗ 7 ಚುನಾವಣಾ ಸಿಬ್ಬಂದಿ ಅಸುನೀಗಿ­ದರು.

ಇದಾದ ಕೆಲವೇ ಹೊತ್ತಿನಲ್ಲಿ ಬಸ್ತರ್‌ ಜಿಲ್ಲೆಯ ಕಮನಾರ್‌ ಗ್ರಾಮದ ಸಮೀಪ ಆಂಬುಲೆನ್ಸ್‌ ಮೇಲೆ ನಕ್ಸಲರು ನಡೆಸಿದ ದಾಳಿಯಲ್ಲಿ ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಐವರು ಯೋಧರು, ಚಾಲಕ ಮತ್ತು ಅರೆ­ವೈದ್ಯಕೀಯ ಸಿಬ್ಬಂದಿ ಸಾವನ್ನಪ್ಪಿ­ದರು ಎಂದು ಎಡಿಜಿಪಿ ವಿಜಿ ತಿಳಿಸಿದರು.

ಈ ದಾಳಿಗೆ ಉತ್ತರ ನೀಡಲು ಭದ್ರತಾ ಪಡೆ ಸ್ಥಳಕ್ಕೆ ಬರುವಷ್ಟರಲ್ಲಿ ನಕ್ಸ­ಲರು ದಟ್ಟಾರಣ್ಯದತ್ತ ಓಡಿ­ಹೋದರು ಎಂದು ಅವರು ನುಡಿದರು. ‘ಈ ದಾಳಿಯಿಂದ ಚುನಾವಣಾ ಸಿಬ್ಬಂದಿ ಬಳಿಯಿದ್ದ ವಿದ್ಯುನ್ಮಾನ ಮತ ಯಂತ್ರಗಳಿಗೆ ಹಾನಿಯಾ­ಗಿದೆ’ ಎಂದು ಮುಖ್ಯ ಚುನಾವಣಾಧಿಕಾರಿ ಸುನಿಲ್‌ ಕುಜುರ್‌ ಹೇಳಿದ್ದಾರೆ.

ದುರದೃಷ್ಟಕರ ಸಂಪತ್‌ ಹೇಳಿಕೆ: ಚೆನ್ನೈ ವರದಿ: ‘ಛತ್ತೀಸಗಡದ ಎರಡು ಕಡೆಗಳಲ್ಲಿ ಚುನಾ­­­ವಣಾ ಮತ್ತು ಭದ್ರತಾ ಸಿಬ್ಬಂದಿಯ ಮೇಲೆ ನಡೆದಿರುವ ದಾಳಿ ದುರದೃಷ್ಟಕರ’ ಎಂದು ಮುಖ್ಯ ಚುನಾ­ವಣಾ ಆಯುಕ್ತ ವಿ.ಎಸ್‌.­ ಸಂಪತ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT