ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ 4,119 ಅನಧಿಕೃತ ಹೋರ್ಡಿಂಗ್‌

ಉಪಲೋಕಾಯುಕ್ತರಿಗೆ ಬಿಬಿಎಂಪಿ ಆಯುಕ್ತ ಮಾಹಿತಿ
Last Updated 6 ಅಕ್ಟೋಬರ್ 2015, 19:51 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 4,119 ಅನಧಿಕೃತ ಜಾಹೀರಾತು ಹೋರ್ಡಿಂಗ್‌ಗಳಿವೆ ಎಂದು ಪಾಲಿಕೆಯೇ ಒಪ್ಪಿಕೊಂಡಿದೆ.

ಬಿಬಿಎಂಪಿ ಆಯುಕ್ತ ಕುಮಾರ್‌ ನಾಯಕ್‌ ಅವರು ಈ ಮಾಹಿತಿಯನ್ನು ಉಪಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್‌ ಬಿ. ಅಡಿ ಅವರಿಗೆ ಮಂಗಳವಾರ ನೀಡಿದ್ದಾರೆ.

ಈ ಸಂಬಂಧ ಉಪಲೋಕಾಯುಕ್ತರಿಗೆ ಪತ್ರ ಬರೆದಿರುವ ಆಯುಕ್ತರು, ‘ಅಕ್ಟೋಬರ್‌ 10ರ ಒಳಗಾಗಿ ಪರವಾನಗಿ ನವೀಕರಣ ಮಾಡದ ಹೋರ್ಡಿಂಗ್‌ಗಳನ್ನು ಅಕ್ರಮ ಎಂದು ಪರಿಗಣಿಸಿ, 2006ರ ಬಿಬಿಎಂಪಿ ಜಾಹೀರಾತು ಬೈಲಾಗಳ  ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ, ಬ್ಯಾನರ್, ಬಂಟಿಂಗ್‌ಗಳನ್ನು  ಹಾಕದಂತೆ ಸಾರ್ವಜನಿಕ ನೋಟಿಸ್‌ ಪ್ರಕಟಿಸಲಾಗುವುದು’  ಎಂದು ತಿಳಿಸಿದ್ದಾರೆ.

ಜಾಹೀರಾತು ನೀತಿಯನ್ನು ಸರಳಗೊಳಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಆಯುಕ್ತರು ಉಪಲೋಕಾಯುಕ್ತರಿಗೆ ವಿವರಿಸಿದ್ದಾರೆ.

‘ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಹೋರ್ಡಿಂಗ್‌ಗಳ ನಿಖರ ಸಂಖ್ಯೆಯನ್ನು ತಿಳಿಯುವುದಕ್ಕಾಗಿ 264 ತಂಡಗಳನ್ನು ರಚಿಸಿ ಸಮೀಕ್ಷೆ ನಡೆಸಲಾಗಿತ್ತು. ಈ ವರದಿಗಳ ಪ್ರಕಾರ, ನಗರದಲ್ಲಿ 6,119 ಜಾಹೀರಾತು ಹೋರ್ಡಿಂಗ್‌ಗಳಿವೆ. ಈ ಪೈಕಿ, ಸುಮಾರು 2 ಸಾವಿರ ಹೋರ್ಡಿಂಗ್‌ಗಳು ಮಾತ್ರ ಪರವಾನಗಿ ಹೊಂದಿವೆ’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ. ‘ಅನಧಿಕೃತ ಹೋರ್ಡಿಂಗ್‌ಳನ್ನು ತೆರಿಗೆ ವ್ಯಾಪ್ತಿಗೆ ಸೇರಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆನ್‌ಲೈನ್‌ ಮೂಲಕ ಪರವಾನಗಿ ನವೀಕರಣ ನೀಡುವ ವ್ಯವಸ್ಥೆ ಅಭಿವೃದ್ಧಿ ಪಡಿಸಲಾಗುತ್ತಿದೆ’ ಎಂದು ನಾಯಕ್‌ ಹೇಳಿದ್ದಾರೆ.

‘ಈ ಮೊದಲು ಪರವಾನಗಿ ನವೀಕರಣಕ್ಕೆ ಸೆ.25ರ ಗಡುವು ವಿಧಿಸಲಾಗಿತ್ತು. ಕೆಲವು ಸಂಸ್ಥೆಗಳು ನವೀಕರಣಕ್ಕೆ ಅರ್ಜಿ ಸಲ್ಲಿಸದೇ ಇದ್ದ ಕಾರಣಕ್ಕೆ ಗಡುವನ್ನು ಅ.10ರವೆಗೆ ವಿಸ್ತರಿಸಲಾಗಿದೆ’ ಎಂದು ಪತ್ರದಲ್ಲಿ ವಿವರಿಸಿದ್ದಾರೆ. ಅನಧಿಕೃತ ಜಾಹೀರಾತು ಹೋರ್ಡಿಂಗ್‌ಗಳ ಕುರಿತಾಗಿ ನವೆಂಬರ್‌ 3ರ ಒಳಗಾಗಿ ವಸ್ತು ಸ್ಥಿತಿ ವರದಿ ನೀಡುವಂತೆ ಉಪಲೋಕಾಯುಕ್ತ ನ್ಯಾ. ಸುಭಾಷ್‌ ಬಿ. ಅಡಿ ಅವರು ಪಾಲಿಕೆಗೆ ನಿರ್ದೇಶನ ನೀಡಿದ್ದರು.

ಅಂಕಿ ಅಂಶಗಳು
6,119 ಜಾಹೀರಾತು ಹೋರ್ಡಿಂಗ್‌ಗಳು ನಗರದಲ್ಲಿವೆ
2 ಸಾವಿರ ಹೋರ್ಡಿಂಗ್‌ಗಳಿಗೆ ಮಾತ್ರ ಪರವಾನಗಿ ಇದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT