ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ಮೋನಿಕಾ ಸುಸೈರಾಜ್‌ ಬಂಧನ

Last Updated 8 ಅಕ್ಟೋಬರ್ 2015, 19:43 IST
ಅಕ್ಷರ ಗಾತ್ರ

ಅಹಮದಾಬಾದ್‌ (ಪಿಟಿಐ): ಹಜ್‌ ಯಾತ್ರಿಕರಿಗೆ ₹ 2.68 ಕೋಟಿ ಹಣ ವಂಚಿಸಿದ ಆರೋಪದಲ್ಲಿ ಕನ್ನಡದ ನಟಿ ಮರಿಯಾ ಮೋನಿಕಾ ಸುಸೈರಾಜ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಮೊದಲು ಟಿ.ವಿ.ನಿರ್ಮಾಪಕ ನೀರಜ್‌ ಗ್ರೋವರ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿತ್ತು. ನಂತರ ಗುಜರಾತ್‌ ಹೈಕೋರ್ಟ್‌ನಲ್ಲಿ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಬುಧವಾರ ಕೋರ್ಟ್‌ ನಿರಾಕರಿಸಿತ್ತು.

‘35 ವರ್ಷದ ಮರಿಯಾ ಅವರನ್ನು ಮೈಸೂರಿನ ಅವರ ನಿವಾಸದಲ್ಲಿ ಬಂಧಿಸಲಾಗಿದೆ. ವಡೋದರಾ ಪೊಲೀಸರಿಗೆ ಅವರನ್ನು ಹಸ್ತಾಂತರಿಸುವ ಪ್ರಕ್ರಿಯೆ ಶುರುವಾಗಿದೆ’ ಎಂದು ಅಹಮದಾಬಾದ್‌ ಅಪರಾಧ ದಳ ತಿಳಿಸಿದೆ.

ವಂಚನೆ ವಿಧಾನ:  ಮುಂಬೈನ ಪರೋಮಿತಾ ಚಕ್ರವರ್ತಿ ಎಂಬುವರ ಜತೆ ಸೇರಿಕೊಂಡು ಮರಿಯಾ ಅವರು ಕೆಲವು ತಿಂಗಳ ಹಿಂದೆ ವಡೋದರದಲ್ಲಿ ಟಿಕೆಟ್‌ ಬುಕಿಂಗ್‌ ಏಜೆನ್ಸಿ ಪ್ರಾರಂಭಿಸಿದ್ದರು. ಹಜ್‌ ಯಾತ್ರಿಕರಿಂದ ಹಣ ಪಡೆದು ವಿಮಾನ ಟಿಕೆಟ್‌ ಬುಕ್‌ ಮಾಡಿದ್ದರು. ನಂತರ ಅವರಿಗೆ ಗೊತ್ತಿಲ್ಲದಂತೆ ಟಿಕೆಟ್‌ ರದ್ದು ಮಾಡಿ ಹಣ ಲಪಟಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT