ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೋಡಾ ಗಲಭೆ ಆರೋಪಿಗೆ ಜಾಮೀನು

Last Updated 27 ಫೆಬ್ರುವರಿ 2015, 10:58 IST
ಅಕ್ಷರ ಗಾತ್ರ

ಗುಜರಾತ್‌ (ಪಿಟಿಐ): ಗುಜರಾತ್‌ನಲ್ಲಿ 2002ರಲ್ಲಿ ನಡೆದ ನರೋಡಾ ಗಲಭೆಯ 31 ಆರೋಪಿಗಳಲ್ಲಿ ಒಬ್ಬರಾದ ಕಿರ್‌ಪಾಲ್‌ಸಿಂಗ್‌ ಛಬ್ಡಾಗೆ  ಗುಜರಾತ್‌ ಹೈಕೋರ್ಟ್‌ ಶುಕ್ರವಾರ ಜಾಮೀನು ನೀಡಿದೆ.

ಗೋದ್ರಾ ಹತ್ಯಾಕಾಂಡದ ನಂತರ ನಡೆದ ನರೋಡಾ ಗಲಭೆಯಲ್ಲಿ 97ಜನ ಮೃತಪಟ್ಟಿದ್ದರು. ನ್ಯಾಯಮೂರ್ತಿ ಆರ್‌.ಆರ್.ತ್ರಿಪಾಠಿ ಹಾಗೂ ಆರ್‌.ಕೆ. ಕಠೋರಿ ಅವರನ್ನೊಳಗೊಂಡ ವಿಭಾಗೀಯ ಪೀಠ ಕಿರ್‌ಪಾಲ್‌ಸಿಂಗ್‌ಗೆ ಜಾಮೀನು ಮಂಜೂರು ಮಾಡಿದೆ.

ಕಿರ್‌ಪಾಲ್‌ಸಿಂಗ್‌ ಇದೇ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಮಾಯಾ ಕೊಡ್ನಾನಿ ಅವರ ಆಪ್ತ ಸಹಾಯಕರಾಗಿದ್ದರು. ಕಳೆದ ಜುಲೈನಲ್ಲಿ ಕೊಡ್ನಾನಿ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT