ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ನೀನು ಆನು ತಾನು...

Last Updated 16 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಇಡೀ ಕುಟುಂಬದ ಮೊಗದಲ್ಲಿ ಸಂಭ್ರಮ. ಪತ್ರಿಕಾಗೋಷ್ಠಿ ಆರಂಭಕ್ಕೂ ಮುನ್ನ ಪ್ರತಿಯೊಬ್ಬರನ್ನೂ ಭೇಟಿ ಮಾಡಿ ನಗುಮೊಗದಲ್ಲಿ ಮಾತನಾಡಿಸುತ್ತಿದ್ದರು ನಟ ದೇವರಾಜ್ ಮತ್ತು ಅವರ ಪುತ್ರ ಪ್ರಜ್ವಲ್. ಅದು, ದೇವರಾಜ್‌ ಕುಟುಂಬ ನಿರ್ಮಿಸಿರುವ ಚೊಚ್ಚಿಲ ಸಿನಿಮಾ ‘ನೀನಾದೆ ನಾ’ ತೆರೆಕಾಣುವ ಮುನ್ನ ನಡೆದ ಸುದ್ದಿಗೋಷ್ಠಿ. ‘ನೀನಾದೆ ನಾ’ ಚಿತ್ರ ಇಂದು ತೆರೆಗೆ ಬಂದಿದೆ.

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ದೇವರಾಜ್ ಕುಟುಂಬ ಸಿನಿಮಾದ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿತು. ಚಿತ್ರದ ನಾಯಕ ಹಾಗೂ ದೇವರಾಜ್‌ ಅವರ ಪುತ್ರ ಪ್ರಜ್ವಲ್‌ ಸಹ ತಮ್ಮ ತಂದೆ ತನ್ನ ಮೇಲೆ ಹೂಡಿರುವ ಬಂಡವಾಳ ಹಿಂತಿರುಗುವ ಆತ್ಮವಿಶ್ವಾಸದಲ್ಲಿದ್ದರು. ವೇದಿಕೆಗೆ ಬರುತ್ತಿದ್ದಂತೆ ದೇವರಾಜ್ ನಿರೂಪಕರಾಗಿ ಬದಲಾದರು, ವೇದಿಕೆಯಲ್ಲಿದ್ದವರ ಬಗ್ಗೆ ಚುಟುಕಾಗಿ

ವಿವರಣೆ ನೀಡುತ್ತ ಅವರ ಕೈಗೆ ಮೈಕಿತ್ತರು.

‘ಬಹು ಸೂಕ್ಷ್ಮವಾದ ಕಥೆ ‘ನೀನಾದೆ ನಾ’ ಚಿತ್ರದ್ದು. ಸಾಮಾನ್ಯವಾಗಿ ದೃಶ್ಯಗಳಿಗೆ ಒತ್ತುಕೊಡುವುದರಿಂದ ಕಥೆ ಕಳೆದುಹೋಗುತ್ತದೆ. ಆದರೆ ಇಲ್ಲಿ ಕಥೆಯನ್ನು ಪೋಷಿಸಲಾಗಿದೆ’ ಎಂದರು ದೇವರಾಜ್‌. ಚಿತ್ರವನ್ನು ಹೆಚ್ಚು ಜನರಿಗೆ ಮುಟ್ಟಿಸಲು ಎಲ್ಲ ಸಿದ್ಧತೆಯನ್ನೂ ಮಾಡಿಕೊಂಡಿದ್ದಾರಂತೆ ಅವರು. 

ನಾಯಕ ಪ್ರಜ್ವಲ್ ದೇವರಾಜ್, ‘ಆಡಿಯೊಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನನ್ನನ್ನು ಹರಸಿ’ ಎಂದು ನಗುಮೊಗದಲ್ಲಿ ನುಡಿದರು. ‘ನಾನು ಎತ್ತಿ ಆಡಿಸಿದ ಹುಡುಗ ಪ್ರಜ್ವಲ್‌. ನನಗೂ ಈ ಚಿತ್ರ ದೊಡ್ಡ ಯಶಸ್ಸು ಗಳಿಸಲಿ ಎನ್ನುವ ಆಸೆ ಇದೆ. ಇದು ನನ್ನ ಕುಟುಂಬದ ಚಿತ್ರ’ ಎಂದರು ಅವಿನಾಶ್. ನಟಿ ಪವಿತ್ರಾ ಲೋಕೇಶ್ ತಮ್ಮ ಪಾತ್ರವನ್ನು ಪರಿಚಯಿಸಿಕೊಂಡು ದೇವರಾಜ್ ಕುಟುಂಬದ ಸಹಕಾರವನ್ನು ನೆನಪಿಸಿಕೊಂಡರು.

ಚಿತ್ರದಲ್ಲಿನ ಒಂದು ಹಾಡಿಗೆ ದೇವರಾಜ್ ಅವರ ಕಿರಿಯ ಪುತ್ರ ಪ್ರಣಾಮ್ ಸಹ ಹೆಜ್ಜೆ ಹಾಕಿದ್ದಾರೆ.

ನಿರ್ದೇಶಕ ಕಂದಾಸ್‌ ಅವರಿಗೆ ತಮ್ಮ ಬದುಕಿನ ಘಟನೆಗಳಿಗೆ ಚಿತ್ರರೂಪು ಸಿಕ್ಕಿರುವ ಖುಷಿ. ತೊದಲು ನುಡಿಯಂತೆ ಕನ್ನಡವನ್ನು ಮಾತನಾಡಿದ ಅವರು, ದೇವರಾಜ್ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಿ, ಅವರ ಚಿತ್ರ ನಿರ್ಮಾಣ ಮತ್ತಷ್ಟು ಹೆಚ್ಚಲಿ ಎಂದು ಹಾರೈಸಿದರು. ಅಂಕಿತಾ ಮಹೇಶ್ವರಿ, ಪ್ರಿಯಾಂಕಾ ಕಂಡ್ವಾಲ್‌ ಚಿತ್ರದ ನಾಯಕಿಯರು. ಪ್ರಿಯಾಂಕಾ ತಮ್ಮ ಮೊದಲ ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿದ್ದರು. ನಿರ್ಮಾಪಕಿ ಚಂದ್ರಲೇಖಾ ದೇವರಾಜ್, ಸಂಭಾಷಣೆಕಾರ ಶ್ರೀಕಾಂತ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT