ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಾಯಣನ್‌ ವಿಚಾರಣೆ

ಅತಿ ಗಣ್ಯರ ಹೆಲಿಕಾಪ್ಟರ್‌ ಖರೀದಿ
Last Updated 27 ಜೂನ್ 2014, 20:11 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅತಿ ಗಣ್ಯರ ಬಳಕೆಯ ಹೆಲಿಕಾಪ್ಟರ್ ಖರೀದಿಯಲ್ಲಿ ನಡೆ­ದಿದೆ ಎನ್ನಲಾದ ಅವ್ಯವಹಾರ ಕುರಿತು ತನಿಖೆ ನಡೆಸುತ್ತಿರುವ  ಸಿಬಿಐ, ಶುಕ್ರವಾರ ಪಶ್ಚಿಮ ಬಂಗಾಳ ರಾಜ್ಯ­ಪಾಲ ಹಾಗೂ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾ­ಯಣನ್‌  ಅವರನ್ನು ತೀವ್ರ ವಿಚಾರಣೆಗೆ ಗುರಿಪಡಿಸಿತು.

ರಾಜ್ಯಪಾಲರಂತಹ ಸಾಂವಿಧಾನಿಕ ಹುದ್ದೆಯಲ್ಲಿರುವ ಗಣ್ಯರೊಬ್ಬರನ್ನು ಸಿಬಿಐ ಇದೇ ಮೊದಲ ಬಾರಿಗೆ ವಿಚಾರಣೆಗೆ ಒಳಪಡಿಸಿದೆ.

ಕೋಲ್ಕತ್ತದಲ್ಲಿರುವ ರಾಜಭವನಕ್ಕೆ ತೆರಳಿದ  ಸಿಬಿಐ ಅಧಿಕಾರಿಗಳ ತಂಡ  ನಾರಾಯಣನ್‌  ಅವರನ್ನು ಸುಮಾರು ಎರಡು ತಾಸು  ಪ್ರಶ್ನಿಸಿತು.

ಸಿಬಿಐ ಅಧಿಕಾರಿಗಳು ರಾಜ್ಯಪಾಲ­ರನ್ನು ‘ಸಾಕ್ಷಿ’ ಎಂದು ಪರಿಗಣಿಸಿದ್ದು ಅವರ ಹೇಳಿಕೆ ದಾಖಲಿಸಿ­ಕೊಂಡರು. 

ದೇಶದ ಅತಿ ಗಣ್ಯರ ಬಳಕೆಗಾಗಿ ₨ 3,600 ಕೋಟಿ ವೆಚ್ಚದಲ್ಲಿ ಇಟಲಿ ಮೂಲದ ಆಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪೆನಿ ನಿರ್ಮಿತ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು.

ಖರೀ­ದಿ­ಯಲ್ಲಿ ₨ 360 ಕೋಟಿ ಲಂಚ ಪಡೆಯ­ಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಪಶ್ಚಿಮ ಬಂಗಾಳ ರಾಜ್ಯಪಾಲ­ರಾಗಿ ನೇಮಕವಾಗುವ ಮೊದಲು ನಾರಾ­ಯಣನ್‌  ಯುಪಿಎ ಅಧಿಕಾರ ಅವಧಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದರು.

ಜತೆಗೆ ಹೆಲಿಕಾಪ್ಟರ್‌ ಖರೀದಿಯ ಟೆಂಡರ್‌ ಪ್ರಕ್ರಿಯೆಯ ಉಸ್ತುವಾರಿ ಹೊತ್ತಿದ್ದ ತಂಡದ ಸದಸ್ಯರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT