ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ವರಿಗೆ ಮಲ್ಲೇಪುರಂ ಪ್ರಶಸ್ತಿ

Last Updated 30 ಮೇ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರೊ. ಮಲ್ಲೇಪುರಂ ಸಾಂಸ್ಕೃ­ತಿಕ ಪ್ರತಿಷ್ಠಾನ ಜೀವಮಾನ ಸಾಧನೆಗಾಗಿ ನೀಡುವ ಪ್ರೊ. ಮಲ್ಲೇ­ಪುರಂ ಸಾಹಿತ್ಯ ಪ್ರಶಸ್ತಿಗೆ ಗುಲ್ಬರ್ಗ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾ­ಪಕ ಪ್ರೊ.ವಿ.ಜಿ. ಪೂಜಾರ ಆಯ್ಕೆ­ಯಾಗಿದ್ದಾರೆ. ಪ್ರಶಸ್ತಿಯು ₨ 10 ಸಾವಿರ ನಗದು, ಫಲಕ ಹಾಗೂ ಸ್ಮರಣಿಕೆ ಒಳಗೊಂಡಿದೆ.

ಮಹಿಳಾ ಸಾಹಿತ್ಯಕ್ಕಾಗಿ ‘ರಮಾ­ಬಾಯಿ ಅಂಬೇಡ್ಕರ್ ಪುಸ್ತಕ ಬಹು­ಮಾನ’ಕ್ಕೆ ಉತ್ತರ ಕನ್ನಡ ಜಿಲ್ಲೆ ಹೊನ್ನಾ­ವರದ ಡಾ. ಎಚ್.ಎಸ್. ಅನುಪಮಾ, ಸಮಾಜಶಾಸ್ತ್ರೀಯ ಅಧ್ಯಯನಕ್ಕಾಗಿ ‘ಬಿ. ಶಾಮಸುಂದರ್ ಪುಸ್ತಕ ಬಹು­ಮಾನ’ಕ್ಕೆ ಮಂಡ್ಯದ ಡಾ. ಎನ್. ಜಗ­ದೀಶ್ ಕೊಪ್ಪ ಹಾಗೂ ಸೃಜನ ಸಾಹಿತ್ಯ­ಕ್ಕಾಗಿ ‘ಉರಿಲಿಂಗಪೆದ್ದಿ ಪುಸ್ತಕ ಬಹು­ಮಾನ’ಕ್ಕೆ ಬೆಂಗಳೂರಿನ ಡಾ. ಟಿ. ಯಲ್ಲಪ್ಪ ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿಗಳು ತಲಾ ₨ 5 ಸಾವಿರ ನಗದು, ಫಲಕ ಮತ್ತು ಸ್ಮರಣಿಕೆ ಒಳ­ಗೊಂಡಿವೆ. ಶನಿವಾರ (ಮೇ 31) ಇಲ್ಲಿನ ನಯನ ಸಭಾಂಗಣದಲ್ಲಿ ನಡೆ­ಯಲಿರುವ ಮಂಟಪ ಮಾಲೆ ಸರಣಿಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಎಂ.ಬಿ. ಕಟ್ಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT