ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ಬೆಂಗಳೂರಿನಲ್ಲಿ ಕಾಮನ್‌ವೆಲ್ತ್‌ ವಿಜ್ಞಾನ ಸಮ್ಮೇಳನ

Last Updated 24 ನವೆಂಬರ್ 2014, 11:15 IST
ಅಕ್ಷರ ಗಾತ್ರ

ಬೆಂಗಳೂರು (ಪಿಟಿಐ) : ನಗರದಲ್ಲಿ ನಾಳೆಯಿಂದ ನಾಲ್ಕು ದಿನಗಳ ಕಾಲ ಕಾಮನ್‌ವೆಲ್ತ್‌ ವಿಜ್ಞಾನ ಸಮ್ಮೇಳನ ನಡೆಯಲಿದೆ.  ಈ ಸಮ್ಮೇಳವನ್ನು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಉದ್ಘಾಟಿಸಲಿದ್ದಾರೆ.

ಐವತ್ತು ವರ್ಷಗಳ  ನಂತರ ಈ ಕಾರ್ಯಕ್ರಮವನ್ನು ಭಾರತ ಸರ್ಕಾರದ ಸಹಯೋಗದೊಂದಿಗೆ ರಾಯಲ್‌ ಸೊಸೈಟಿ ಹಾಗೂ ರಾಣಿ ಎಲಿಜಬೆತ್‌ ಡೈಮಂಡ್‌ ಜುಬಿಲಿ ಟ್ರಸ್ಟ್‌ ಆಯೋಜಿಸಿದೆ.

ಈ ಸಮ್ಮೇಳನಕ್ಕೆ ಕಾಮನ್‌ವೆಲ್ತ್‌ ರಾಷ್ಟ್ರಗಳಿಂದ 300 ಮಂದಿ ವಿಶೇಷ ಆಹ್ವಾನಿತ ವಿಜ್ಞಾನಿಗಳು, 70ಮಂದಿ  ಸಂಶೋಧನಾ ವಿದ್ಯಾರ್ಥಿಗಳು, 30 ರಾಷ್ಟ್ರಗಳ ಪ್ರತಿನಿಧಿಗಳು ಹಾಗೂ ಗಣ್ಯರು ಹಾಜರಾಗಲಿದ್ದಾರೆ. ಮೊದಲ ಕಾಮನ್‌ವೆಲ್ತ್‌ ವಿಜ್ಞಾನ ಸಮ್ಮೇಳನವು 1967ರಲ್ಲಿ ಆಕ್ಸ್‌ಫರ್ಡ್‌ನಲ್ಲಿ ಜರುಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT