ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ‘ಆವಿಷ್ಕಾರ’ ಸಿನಿಮೋತ್ಸವ

Last Updated 8 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಮೂರು ವರುಷಗಳಿಂದ ಭಿನ್ನ ವಿಭಿನ್ನ ಪರಿಕಲ್ಪನೆಗಳಡಿ ಸಿನಿಮೋತ್ಸವವನ್ನು ಸಂಘಟಿಸುತ್ತಿರುವ ಆವಿಷ್ಕಾರ ಫಿಲ್ಮ್ ಸೊಸೈಟಿಯು ನಾಲ್ಕನೇ ಕಂತಿಗೆ ವೇದಿಕೆ ಸಜ್ಜುಮಾಡಿಕೊಂಡಿದೆ. ಅಕ್ಟೋಬರ್ 10ರಿಂದ 12ರವರೆಗೆ ನಗರದಲ್ಲಿ ಉತ್ಸವ ನಡೆಯಲಿದೆ. ನಗರದ ಮೂರು ಸ್ಥಳಗಳಲ್ಲಿ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ಅಭಿವ್ಯಕ್ತಿ ಸ್ವಾತಂತ್ರ್ಯ
ನಾಲ್ಕನೇ ಸಿನಿಮೋತ್ಸವದ ಮುಖ್ಯವಿಷಯ ‘ಅಭಿವ್ಯಕ್ತಿ ಸ್ವಾತಂತ್ರ್ಯ’. ಇತ್ತೀಚಿನ ದಿಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಪ್ರಕ್ರಿಯೆಗಳು ವೇಗವಾಗುತ್ತಿದ್ದು, ಇದರಿಂದ ಸೃಜನಶೀಲತೆಗೆ ಮಂಕುಕವಿಯುತ್ತಿದೆ. ಈ ಹಿನ್ನೆಲೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ವಿಷಯವಸ್ತುಗಳು ಚಿತ್ರೋತ್ಸವದಲ್ಲಿ ಪ್ರಮುಖವಾಗಲಿವೆ. ಅಲ್ಲದೆ ಉತ್ಸವದಲ್ಲಿ ಪ್ರದರ್ಶನಗೊಳ್ಳುವ ಚಿತ್ರಗಳು ಈ ವಿಷಯ ಕೇಂದ್ರಿತವಾಗಿಯೇ ಇರಲಿವೆ. 2012ರಲ್ಲಿ ‘ಜೀವನ ಮತ್ತು ಹೋರಾಟ’, 2013ರಲ್ಲಿ ‘ಮಹಿಳೆಯರ ಘನತೆ’, 2014ರಲ್ಲಿ ‘ಸುಳಿಯಲ್ಲಿ ಸಿಕ್ಕಿ ಜನತೆ’ ಎನ್ನುವ ವಿಷಯಗಳನ್ನು ಇಟ್ಟುಕೊಂಡು ಚಿತ್ರೋತ್ಸವಗಳನ್ನು ಸಂಘಟಿಸಲಾಗಿತ್ತು. ಚಿಂತನ–ಮಂಥನಕ್ಕೂ ಈ ಉತ್ಸವಗಳು ಸಾಕ್ಷಿಯಾಗಿದ್ದವು.

ಪ್ರದರ್ಶನಗೊಳ್ಳಲಿರುವ ಚಿತ್ರಗಳು
ಅಕ್ಟೋಬರ್‌ 10ರಂದು ‘ದಿ ಲೈಫ್ ಆಫ್ ಎಮಿಲಿ ಜೋಲ’ (ಸಂಜೆ 6 ಗಂಟೆಗೆ) ಚಿತ್ರ ಮಲ್ಲೇಶ್ವರಂನ ಎಂ.ಇ.ಎಸ್. ಕಾಲೇಜಿನಲ್ಲಿ, 11ರಂದು ‘ಇನ್‌ಹರಿಟ್ ದಿ ವಿಂಡ್’ (ಸಂಜೆ 5.30ಕ್ಕೆ)  ಬಸವನಗುಡಿಯ ಬಿ.ಎಂ.ಎಸ್. ಕಾಲೇಜ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ಮತ್ತು 12ರಂದು ‘ಶಾಹಿದ್’ (ಸಂಜೆ 5.30ಕ್ಕೆ)  ಚಿತ್ರ ಹಂಪಿನಗರದ ಕೇಂದ್ರೀಯ ಗ್ರಂಥಾಲಯದಲ್ಲಿ ಪ್ರದರ್ಶನಗೊಳ್ಳಲಿವೆ. ನಂತರ ಚಿತ್ರಗಳಿಗೆ ಸಂಬಂಧಿಸಿದ ಸಂವಾದ ಸಹ ನಡೆಯಲಿದೆ.

‘ಕಲಾವಿದರು–ವಿಜ್ಞಾನಿಗಳು ಹೀಗೆ ಸಮಾಜದ ಬಹುಪಾಲು ವರ್ಗದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸಲಾಗುತ್ತಿದೆ. ಇದನ್ನು ಉಳಿಸಿಕೊಳ್ಳಲು ತುಂಬಾ ಕಷ್ಟ ಪಡಬೇಕಾದ ಸ್ಥಿತಿಯಲ್ಲಿದ್ದೇವೆ.  ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಯಾವ ರೀತಿಯ ಹೋರಾಟಗಳು ನಡೆದವು, ಅದನ್ನು ನಿರ್ಬಂಧಿಸುವ ಹುನ್ನಾರಗಳ ಸ್ವರೂಪ ಎಂಥದ್ದು ಎನ್ನುವುದನ್ನು ಸಿನಿಮಾಗಳಲ್ಲಿ ಕಾಣುತ್ತೇವೆ. ಈ ಹಕ್ಕನ್ನು ಉಳಿಸಿಕೊಳ್ಳಲು ನಡೆಸಿದ ಹೋರಾಟಗಳು ಪ್ರಮುಖವಾಗುತ್ತದೆ. ಈ ಹಿನ್ನೆಲೆಯಲ್ಲಿ ನಾವುಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯದಡಿ ಚಿತ್ರೋತ್ಸವ ಸಂಘಟಿಸಿದ್ದೇವೆ’ ಎನ್ನುತ್ತಾರೆ ಆಯೋಜಕರು.

ಹೆಚ್ಚಿನ ಮಾಹಿತಿಗೆ: 9844437039, 9742154545.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT